Tuesday 19 June, 2012

ಗೆರ್ಕೆ - Gerke


      ಗಾಮೊಕ್ಕಲ ಮಹಿಳೆಯರು ಸೇಡಿ ಎಂದು ಗುರುತಿಸುವ ಜನಪದ ಚಿತ್ರಕಲೆಯಾದ ರಂಗೋಲಿಯಲ್ಲಿ ಬಳಕೆಯಾಗುವ ಕುಂಚ. ಇದು ಗೆರೆ ಮೂಡಿಸುವ ಸಾಧನ ಎಂಬ ಅರ್ಥವನ್ನು ಕೊಡುತ್ತದೆ  ಅಡಕೆ ತೋಟದ  ನಡುವೆ  ವಾಸಿಸುವ. ಸೇಡಿ ಕಲಾವಿದೆಯರಾದ ಗಾಮೊಕ್ಕಲ ಮಹಿಳೆಯರು ಇದನ್ನು ಅಡಕೆಸಿಪ್ಪೆಯಿಂದ ತಯಾರಿಸಿಕೊಂಡು ಸಡಿ ಬರೆಯಲು ಬಳಸುತ್ತಾರೆಯದರೂ  ಇವರು ಇದನ್ನು ಗೆಕರ್ೆ ಎನ್ನುವದಿಲ್ಲ; ಅಡಕೆ ಸಿಪ್ಪೆ ಎನ್ನುತ್ತಾರೆ. ಇದಕ್ಕೆ ಗೆಕರ್ೆ ಎಂಬ ಹೆಸರನ್ನು ಮುಕ್ರಿ ಹೆಂಗಸೊಬ್ಬಳು ಸುಮಾರು 30 ವರ್ಷಗಳ ಹಿಂದೆ ಹೊನ್ನಾವರದ ಕಕರ್ಿಯಲ್ಲಿ ನನಗೆ ತಿಳಿಸಿದ್ದಳು. ಇದನ್ನು ಮೊತ್ತ ಮೊದಲು ನವ ಸಾಕ್ಷರರಿಗಾಗಿ ಸಿದ್ಧಪಡಿಸಿದ ನನ್ನ ರಂಗೋಲಿ ಎಂಬ ಪುಸ್ತಕದಲ್ಲಿ ನಾನು ಬಳಸಿದ್ದೇನೆ. ಆಗಾಗ ಹೊನ್ನಾವರದ ಜಾನಪದ ಅಧ್ಯಯನ ಕೇಂದ್ರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಬರುತ್ತಿರುವ ಸೇಡಿ ಕಲಾವಿದೆ ಹನ್ಮಿ  ಇತ್ತಿತ್ತಲಾಗಿ ಈ ಶಬ್ದವನ್ನು ಬಳಸುತ್ತಿದ್ದಾರೆ. 
    ಹಣ್ಣಡಕೆಯ ಸಿಪ್ಪೆಯನ್ನು ತುಸು ಹಸಿಯಿರುವಾಗಲೇ ಮೆಟ್ಗತ್ತಿಯಲ್ಲಿ ಎರಡು ಭಾಗವಾಗಿ ಸೀಳಿ ಕೊಯ್ದು ಬೆರಳಿನ ಆಕಾರ ಕೊಡಲಾಗುತ್ತದೆ. ನೀರು ಬೆರೆಸಿ ಕದಡಿದ ಸೇಡಿಯಲ್ಲಿ ಅದನ್ನು ಅದ್ದಿ ಫಲಕದ ಮೇಲೆ ಗೆರೆ ಎಳೆದಾಗ ಗೆಕರ್ೆಯ ಬೆರಳಿನಷ್ಟು ಸಂಖ್ಯೆಯ ಗೆರೆಗಳು ಅಲ್ಲಿ ಸಮಾಂತ ರವಾಗಿ ಮೂಡುತ್ತವೆ. ಗೆಕರ್ೆಯಿಂದ ದೊಡ್ದ ದೊಡ್ಡ ಸೇಡಿಗಳನ್ನು ತ್ವರಿತವಾಗಿ ರಚಿಸಲು ಸಾಧ್ಯವಾಗುತ್ತದೆ. ಗಾಮೊಕ್ಕಲ ಮಹಿಳೆಯರ ಬಹುಪಾಲು ಸೇಡಿಗಳು ಗೆಕರ್ೆಯ ಸಹಾಯದಿಂದ ರಚಿತವಾಗುತ್ತವೆ ಈ ಸೇಡಿಗಳನ್ನು ಇವರು ಬೆರಳ ತುದಿಯಿಂದ ಬೊಟ್ಟುಗಳನ್ನಿಟ್ಟು ಅಲಂಕರಿಸುತ್ತಾರೆ. 
                       



No comments:

Post a Comment