Tuesday 19 June, 2012

ದ್ವಾರಪಾಲಕರು - Dwarapalakaru


ದ್ವಾರಪಾಲಕರು



 ಸುಮಾರು ಇಪ್ಪತ್ತೈದು ವರ್ಷ ಗಳ ಹಿಂದೆ ಹೊನ್ನಾವರ ತಾಲೂಕಿನ ಸಾಲಿಕೇರಿಯ ಹಾಲಕ್ಕಿ ಒಕ್ಕಲ ಮಹಿಳೆಯರ ಜನಪದ ಚಿತ್ರಕಲೆಯಾದ ಹಲಿ[ರಂಗೋಲಿ]ಯ ಸಂಗ್ರಹ ಕೈಗೊಂಡಿದ್ದೆ. ಆಗ ಇಲ್ಲಿಯ ಮಹಿಳೆಯರು ತಮ್ಮ ಗುಡಿಸಲಿನ  ಹಲಗೆಯ ಬಾಗಿಲ ಮೇಲೆ ರಚಿಸಿದ  ಈ ಹಲಿ ಚಿತ್ರ ವನ್ನು   ಕಂಡಿದ್ದೆ.ಆಗ ಶಾಲೆಯಲ್ಲಿ ಗಣಿತ ಚಿನ್ಹೆಗಳನ್ನು ಕಲಿತವಳಾದ ನನ್ನ ಕಣ್ಣಿನ ಮೇಲ್ನೋಟಕ್ಕೆ ಇದು ಗುಣಿಲೆ [ಕಾಟು] ಚಿನ್ಹೆಯಾಗಿ
ಕಂಡಿತ್ತು 

 ಇಂತಹ ಕಾಟು ಚಿನ್ಹೆ ಗಳು ಅನಿಷ್ಠಗಳು ಒಳ ಪ್ರವೇಶಿಸದಂತೆ ತಡೆಯುತ್ತವೆಯೆಂದು  ಸೇಡಿ ಬಳಸಿ ರಚಿಸುವ ಚಿತ್ರಗಳ ಅಧ್ಯಯನಕಾರರ ಅಭಿಪ್ರಾಯವಾಗಿದೆ.ಆದರೆ ಈ ಹಲಿ ಚಿತ್ರ ಬರೆದ ಈ ಮಹಿಳೆಯರಿಗೆ ಈ ಬಗ್ಗೆ ಮಾಹಿತಿಯಿದೆಯೆಂಬುದು ನನ್ನ ಗಮನಕ್ಕೆ ಬಂದಿಲ್ಲ.
ಈ ಚಿತ್ರವನ್ನು ಈ ವರ್ಷ   ಸೂಕ್ಷ್ಮವಾಗಿ ಗಮನಿಸಿದಾಗ ಇಲ್ಲಿಯ ಸೇಡಿ ಚಿತ್ರ ಗಳು  ಹೊನ್ನಾವರ ಸೇಡಿ ಶೈಲಿಯಲ್ಲಿ ರಚಿಸಲಾದ ಮನುಷ್ಯ ಆಕೃತಿಗಳೆಂಬುದು ವೇದ್ಯವಾಯಿತು. ಬಾಗಿಲ  ಕದದ ಮೇಲಿನ ಈ ಮನುಷ್ಯಾಕೃತಿಗಳು  ದ್ವಾರ ಪಾಲಕರು ಎಂಬುದು ಗಮನಕ್ಕೆ ಬಂದಾಗ ನನಗೆ ರೋಮಾಂಚನವಾಯಿತು. ಪುರಾಣ ಪುಣ್ಯಕತೆ ಶಿಲ್ಪಶಾಸ್ತ್ರ  ವಾಸ್ತುಶಾಸ್ತ್ರಗಳ ಪುಟಪುಟಗಳಲ್ಲಿ ಚಚರ್ಿತವಾದ ದ್ವಾರಪಾಲಕರ ಅಮೂಲ್ಯ  ಮೂಲ ಇಲ್ಲಿ ಈ ಗುಡಿಸಲುಗಳ  ಸಾಮಾನ್ಯ ಕದಗಳ ಮೇಲೆ. ವೈಭವ ಗೊಂಡಿತ್ತು

No comments:

Post a Comment