Tuesday 10 February, 2015

ಕೊಳಕಮಂಡಲ


 ಕೊಳಕಮಂಡಲ



ಹೊನ್ನಾವರದ ನಮ್ಮ ಮನೆಯ ತರಕಿನ ರಾಶಿಯ ಹತ್ತಿರ ತರಕನ್ನು ಹರಿದು ಕೂಡಿಸಿದಂತಹ ಮೈಯ ಹಾವು ಕಾಣಿಸಿಕೊಂತು.ಪಿಳಿಪಿಳಿಗುಟ್ಟುವ ಎರಡು ಕಣ್ಣುಗಳು. ತರಕಿನ ಬಣ್ಣದ ಅದರ ಚರ್ಮದ ಮೇಲೆ ಚಾಕೊಲೇಟ್ ಆಕಾರದ ಹಲವು ಬೊಟ್ಟು ಗಳು. ಈ ಬೊಟ್ಟು ಗಳನ್ನು ನೋಡಿ ತಿಳಿದವರು
ಇದನ್ನು ಕನ್ನಡಿ ಹಾವು ಎಂದು ಗುರುತಿಸುತ್ತಾರೆ. ನೆರೆಮನೆಯ ವಿಶಾಲಾಕ್ಷಿ ಕೋಲಿನಿಂದ ಅದರ ಬಳಿಯ ತರಕನ್ನು ತುಸು ಸರಿಸಿದರು.
ಹಾವು ಸುರುಸುರುಗುಟ್ಟಿತು.ಆದ್ದರಿಂದಲೇ ಇದನ್ನು ಸುರಗಂದಲಗ ಎನ್ನುತ್ತಾರೆ.ಎಂದರು ಪ್ರಣವನ ಅಜ್ಜಿ.
ಪ್ರಶಾಂತನ ಅಪ್ಪ ಬಂದರು. ಇದು ಕೊಳಕ ಮಂಡಲ.ಇದು ಕಚ್ಚಿದರೆ ಆ ಭಾಗದಲ್ಲಿ. ಕೊಳೆಯುತ್ತದೆ.ಎಂದರು ಅವರು.
ಡಾ.ಗಣಪತಿ ಭಟ್ಟರು ಬಂದರು. ಓ ಇದಾ.ನಮ್ಮ ಕಡೆ ಇದನ್ನು ಕುದ್ರಾಳಿ ಎನ್ನುವುದು. ಇದು ರಸಲ್ ವಾಯ್ಪರ.ಎಂದರು.ಇದು ವಿಷಕಾರಿ.ಎಂದರು.ಆಲ್ಲಿ ನಿಂತ ವರೊಬ್ಬರು ಇದಕ್ಕೆ ಹಗಲಿನಲ್ಲಿ ಕಣ್ಣು ಕಾಣುವದಿಲ್ಲ.ರಾತ್ರಿ ಕಣ್ಣು ಕಾಣುತ್ತದೆ.ಇದು ನಿಶಾ ಚರ.ಎಂದರು.ಇನ್ನೊಬ್ಬರು.
ನಾಗರಾಜ ಶೇಟ ಕರ್ಕಿ ಇವರಿಗೆ ದೂರ ವಾಣಿ ಹೋಯಿತು. ನಾಗರಾಜ್ ಬಂದರು. ಬಂದರು.ಅಪ್ಟೇ ಅಲ್ಲ .ಕೂಡಲೇ ಬಂದರು. ಕೆಲವೇ ಕ್ಷಣಗಳಲ್ಲಿ ಈ ಹಾವನ್ನು. ಹಿಡಿದು ಚೀಲದಲ್ಲಿ ತುಂಬಿ ದರು. ದುಡ್ಡು ?ಕೇಳಿದೆವು. ದುಡ್ಡು ಬೇಡ ಎಂದರು. ಪೆಟ್ರೋಲ್ ಖರ್ಚು ಕೇಳಿದೆವು. ಅದೂ ಬೇಡ ಎಂದು ಹೇಳಿದರು.
ಐದು ನೂರಕ್ಕೂ ಹೆಚ್ಚು ಹಾವುಗಳ ನ್ನು ಹಿಡಿದು ಸರ್ಪಗಳಿಗೆ ಜೇವದಾನ ಮಾಡಿದ ಬಹುಜನರ ಭಯ ನಿವಾರಿಸಿದ ನಾಗರಾಜ್ ನನ್ನ ವಿದ್ಯಾರ್ಥಿ. ಚಿತ್ರದಲ್ಲಿದ್ದಾರೆ.ಇವರ ಈ ಸಮಾಜ ಸೇವೆಗಾಗಿ ಇವರಿಗೆ ಹಲವು ಸನ್ಮಾನ ಗಳಾಗಿವೆ. ಆದರೆ ಇವರ ಸೇವೆ. ಎಂಥದ್ದು?ಪ್ರಾಣವನ್ನು ಪಣಕ್ಕಿಡುವ ಸೇವೆ.
ಅಕ್ಕೋರೆ ನಿಮ್ಮ ವಿದ್ಯಾರ್ಥಿ.ರತ್ನಾಕರ ಇನ್ನಿಲ್ಲ.ಆತ ಹಾವು ಹಿಡಿಯುವಾಗ ಹಾವು ಕಚ್ಚಿ ತೀರಿ ಕೊಂಡ.ಎಂಬ ನೋವಿನ ಸಂಗತಿ ಯನ್ನು ತಿಳಿಸಿದರು
ನಾಗರಾಜ್.
ನೋಡಪ್ಪಾ.
ನೀನು ಹೇಳಿದ ಈ ಸುದ್ದಿ ನೀನು ನಿನ್ನ ಬಗ್ಗೆ ತುಂಬಾ ಕಾಳಜಿಯನ್ನು ವಹಿಸಬೇಕೆಂಬ ಮಾತನ್ನು ಒತ್ತಿ ಹೇಳುತ್ತದೆ. ತಿಳಿ.ಎಂದೆ.
ಆತ ಚೀಲವನ್ನು ತನ್ನ ಗಾಡಿಗೇರಿಸಿ ಬೆಟ್ಟ ದತ್ತ ಹೊರಟರು.