Tuesday 19 June, 2012

ಪರಂಪರೆ (Parampare) - 1


ಪರಂಪರೆ (Parampare) - 1

  29-9-10 ರಂದು ಬೆಂಗಳೂರಿನಿಂದ  ಹೊನ್ನಾವರಕ್ಕೆ ಕೆ. ಎಸ್. ಆರ್.ಟಿ. ಸಿ. ಯ ಹಗಲು ಬಸ್ಸಿನಲ್ಲಿ ಬರುವಾಗ ಬಸ್ಸಿನಲ್ಲಿ ನನ್ನ ಬದಿಯ ಸೀಟಿನಲ್ಲಿ ಕುಳಿತ ಅಪರಿಚಿತ ಮಹಿಳೆ ಉಷಾ ಬೆಂಗಳೂರಿನಿಂದ ತುಮಕೂರಿನವರೆಗೆ ನನ್ನ ಜೊತೆ ಪ್ರವಾಸ ಮಾಡಿದರು. ಅವರ ವಯಸ್ಸು ಸುಮಾರು 50 ಅವರು ತುಮಕೂರಿನ ಕಾಲೇಜೊಂದರಲ್ಲಿ ಪ್ರಾಧ್ಯಾಪಕರು. ಅವರಿಂದ ಬತ್ಸಾ [ಸ್ಸಾ]ರು ಮಸ್ಸೊಪ್ಪು ಮತ್ತು  ಸಾರಿನ ಪುಡಿ ಅಡುವ ವಿಧಾನವನ್ನು ಬಸ್ಸು ಅಲುಗಾಡುತ್ತ ನಿಮರ್ಿಸಿದ ಕೋಳಿ ಕಾಲಿನಂತಹ ನನ್ನ ಅಕ್ಷರಗಳಲಿ ್ಲದಾಖಲಿಸಿ ಕೊಂಡೆ. ಇವರಿಂದ ಜಲ ಭೇದಿ ಗಿಡದಬಗ್ಗೆ ಇನ್ನಷ್ಟು ಮಾಹಿತಿ ಸಿಕ್ಕಿತು. ತುಮಕೂರಿಗೆ ಹೊಗುವ ದಾರಿ ಬದಿಯಲ್ಲಿ ಬೆಳೆದಿರುವ ಇದನ್ನು ಬಸ್ಸಿನಲ್ಲಿ ಕುಳಿತಿರುವಾಗಲ್ನ್ಕಾಣವದು ನಮಗೆ ಸಾಧ್ಯವಾಗಿತ್ತು. 
               
       ಜಲಭೇದಿ ಸೊಪ್ಪಿನ ಗಿಡವು opuntia stricta ಮಳೆಗಾಲದಲ್ಲಿ ಅಥವಾ ನೀರಿನ ಆಸರೆಯಿದ್ದಲ್ಲಿ ಕಳೆಯಾಗಿ ಬೆಳೆಯುವ ಚಿಕ್ಕ ಗಿಡ. ವಾಷರ್ಿಕೆ. ಮನುಷ್ಯರು, ಈ ಗಿಡದ ಎಲೆಯ ರಸವನ್ನು  ಸೇವಿಸಿದರೆ 
ಭೇದಿಯಾಗುತ್ತದೆ. ಎಲೆಯನ್ನು ಮುರಿದರೆ ಹಾಲು ಬರುತ್ತದೆ. ಇದರ ತವರು ದಕ್ಷಿಣ ಅಮೇರಿಕಾವೆಂದು ಇದು 1946 ರಿಂದೀಚೆಗೆ ಕನರ್ಾಟಕದಲ್ಲಿ ಕಾಣಿಸಿಕೊಂಡ ಕಳೆಗಿಡವೆಂದು ದಾಖಲೆಗಳಿವೆ. ಇದರ ಸಸ್ಯಶಾಸ್ತ್ರೀಯ ಹೆಸರು Euphorbia heterophylla L ಚಿತ್ರ ಹೊಟ್ಟೆಯಲ್ಲಿ ತೊಂದರೆಯಿದ್ದರೆ ಇದರ ತುದಿಯ ಎರಡು ಎಲೆಗಳನ್ನು ತಿಕ್ಕಿ ಮುದ್ದೆ ಮಾಡಿ ಮಕ್ಕಳಿಗೆ ಒಂದು ಸೇಂಗಾ ಕಾಳಿನಷ್ಟು ಉಂಡೆಯನ್ನು ನೀರಿನೊಂದಿಗೆ ನುಂಗಲು ಕೊಟ್ಟರೆ ಭೇದಿಯಾಗಿ ಹೊಟ್ಟೆ ಸ್ವಚ್ಛವಾಗುತ್ತದೆ. ವಕ್ತೃ ಉಷಾ ಇವರ ತೊಂಬತ್ತು ವರ್ಷದ ಅಜ್ಜಿ 1999ರಲ್ಲಿ ತೀರಿಕೊಂಡರು. ಇವರ 50 ವರ್ಷದ ಮೊಮ್ಮಗಳು ಉಷಾ ಈ ಮನೆ ಮದ್ದನ್ನು ಅಜ್ಜಿಯಿಂದ ಪಡೆದು ಸ್ವತಃ ಸೇವಿಸಿದ ಅನುಭವ ಹೊಂದಿದ್ದಾರೆ ಅಂದರೆ 90ರಿಂದ ಸುಮಾರು 100 ವರ್ಷಗಳ ಹಿಂದೆಯೇ ಉಷಾ ಅವರ ಹಿರಿಯರಿಗೆ  ಈ ಗಿಡದ  ಪರಿಚಯ ಪರಂಪರಾಗತವಾಗಿರ ಬಹುದಲ್ಲವೇ? ಎಂದು ಕೊಂಡೆ.

            ಉಷಾ ನೀಡಿದ ಇನ್ನೊಂದು ಸಸ್ಯದ ಮಾಹಿತಿ ನನ್ನ ಸಂಗ್ರಹ ಸೇರಿದೆ. ಆ ಇನ್ನೊಂದು ಸಸ್ಯವು ದಬ್ ಗಳ್ಳಿ. ಉಷಾ ದಾರಿ ಬದಿಯಲ್ಲಿ ಬೆಳೆದಿದ್ದ ಗಿಡವೊಂದನ್ನು ತೋರಿಸಿ ತಾನು ಅದರ ಹಣ್ಣನ್ನು ತಿಂದಿರುವದಾಗಿ ತಿಳಿಸಿದರು. ಇದಲ್ಲದೆ ತಾವು ಚಿಕ್ಕವರಿದ್ದಾಗ ಆ ಹಣ್ಣಿನ ರಸವನ್ನು ತುಟಿಗೆ ಹಚ್ಚಿ ಕೊಳ್ಳುತ್ತಿದ್ದುದಾಗಿ ನಾಚುತ್ತ ಮೆಲ್ಲಗೆ ತಿಳಿಸಿದರು. ಇದರ ಹಣ್ಣಿನ ರಸ ಕೆಂಪು. ತುಟಿಗೆ ಕಡು ಗುಲಾಬಿಯ ಬಣ್ಣವನ್ನು ನೀಡುತ್ತದೆಯೆಂದರು. ಅವರು ತೋರಿಸಿದ ಗಿಡ ಕಲಘಟಗಿಯ  ದನಕಾಯುವ ಮಕ್ಕಳು ಗುರುತಿಸುವ ದಬ್ಗಳ್ಲಿ. ಉಷಾ ಅವರ ಹಳೆಯ ನೆನಪಿನ ಪ್ರಸ್ತಾಪವು ದಬ್ಗಳ್ಳಿಯ ಕುರಿತ ನನ್ನ ಹಳೆಯ ನೆನಪನ್ನು ಎಚ್ಚರಿಸಿತು. 

    ದಬ್ಗಳ್ಳಿ-ಹಸ್ತದಷ್ಟು ಅಗಲವುಳ್ಳ  ತನ್ನ  ಕಾಂಡದ ತುಂಬ ಸಣ್ಣ ಸೂಜಿಯಂತಹ ಮುಳ್ಳುಗಳನ್ನು ಗಿಡದೆಲ್ಲೆಡೆ ಹೊಂದಿರುವ ಕಳ್ಳಿ. ಇದರ ಎಲೆಯ ಮೇಲೆಯೂ ಮುಳ್ಳು. ಈ ಕಳ್ಳಿಗೆ ಕೆಂಪು ಬಣ್ಣದ ರಸಭರಿತವಾದ 
ಹಣ್ಣುಗಳಾಗುತ್ತವೆ. ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ದನ ಕಾಯುವ ಮಕ್ಕಳು  ಇದನ್ನು ತಿನ್ನುತ್ತಾರೆ. ಅವರು ಅಲ್ಲಿಯ ದನಗಳು ಕುಡಿಯುವ ಮಕ್ಕಳುಮೀಯುವ, ಹೆಂಗಸರು ಬಟ್ಟೆತೊಳೆಯುವ, ಕೆರೆಯನೀರನ್ನು ಕುಡಿಯುತ್ತಾರೆ. ಈ ಹೊಲಸು ನೀರನ್ನು ಕುಡಿದರೆ ನೆಗಡಿಯಾಗುತ್ತದೆ ಎಂದಾಗ  ಕಪ್ಪು ಶಿಲಾ ಮೂತರ್ಿಗಳಂತಿರುವ ಆ ಮಕ್ಕಳು ದಬ್ಗಳ್ಳಿಯ ಹಣ್ಣುಗಳನ್ನು ತಿನ್ನುವ ತಮಗೆ ನೆಗಡಿ ಬರುವದಿಲ್ಲ. ಈ ಹಣ್ಣು ನೆಗಡಿಗೆ ಮದ್ದು ಎಂದು ತಿಳಿಸಿದರು. ಈ ಹಣ್ಣನ್ನು ತಿನ್ನಬಹುದೇ? ಎಂದು ಸಂಶಯವನ್ನು ವ್ಯಕ್ತ ಪಡಿಸಿದಾಗ ಆ ಮಕ್ಕಳು ನನ್ನನ್ನು ಗಿಡದ ಬಳಿಗೆ ಕರೆದೊಯ್ದು ಹಣ್ಣನ್ನು ಕೊಯ್ದು ತಾವೂ ತಿಂದದ್ದಲ್ಲದೆ ನನ್ನನ್ನೂ ತಿನ್ನುವಂತೆ ಒತ್ತಾಯಿಸಿದರು. ಹಿರಿಯರ ಸಲಹೆಗಾಗಿ ಅತ್ತಿತ್ತ ನೋಡಿದೆ ಆ ಬಟ್ಟ ಬಯಲಿನ ಕೂಗಳತೆಗೂ ನಿಲುಕದ ಬಹುದೂರದಲ್ಲಿ ಒಂದು ಕೈ ಬೆರಳೆಣಿಕೆಗೂ ಸಾಲದ ಜನರ ಸಣ್ಣ ಆಕೃತಿಗಳ ಸುಳಿವು ಮಾತ್ರ ಅವರವರ ಹೊಲದಲ್ಲಿ  ಕಾಣುತ್ತಿತ್ತು. ಜನವಸತಿ ಸುಮಾರು ನಾಲ್ಕು ಕಿಲೋಮೀಟರು ದೂರದಲ್ಲಿ. ನನ್ನ ಸುತ್ತ ವನದಲ್ಲಿಯ ತರುಲತೆ ಪಕ್ಷಿಗಳಂತಹ ಚಿಕ್ಕಚಿಕ್ಕ ಐದಾರು ದನಗಾಹಿ ಮುಗ್ಧ ಮಕ್ಕಳು ಹಾಗೂ ಆ ಕಕರ್ಿ ಮಲ್ಲಯ್ಯನ ಗುಡ್ಡದ ನಮ್ಮ ಮಡ್ಡಿಯಲ್ಲಿ ನಾನು ನಾನೊಬ್ಬಳೇ. ಅಂದು ತನ್ನ ಕೆಲಸದ ನಿಮಿತ್ತ ನನ್ನ ಮಗನೂ ನನ್ನ ಜೊತೆ ಬಂದಿರಲಿಲ್ಲ. ಆಗ ಅದು ಕರಾವಳಿಯವಳಾದ ನನ್ನ ಪಾಲಿಗೆ ನನ್ನವರಿಲ್ಲದ ನಿರ್ಜನ ಬೆಟ್ಟ. ಸೀತೆಯ ವನವಾಸದ ನೆನಪು. ರಾಮ ಕಾಡಿಗಟ್ಟಿದವಳು ನಾನಲ್ಲ. ನನ್ನ ಮನಸಾ ಆರಾಮವಾಗಿ ಅಲ್ಲಿಗೆ ಬಂದವಳು. ಅಲ್ಲಿ ನಾನು ಹಿಂದೆಂದೂ ಕಂಡರಿಯದ ಕೇಳರಿಯದ ದಬ್ಗಳ್ಳಿಯ ಹಣ್ಣನ್ನು ತಿಂದೆ. ಮಕ್ಕಳು ಗೆದ್ದರು. ಅವರ ಪರಂಪರಾಗತ ಜ್ಞಾನ ಗೆದ್ದಿತು. (ಚಿತ್ರಗಳು ನೆಟ್ನಿಂದ) 


   

No comments:

Post a Comment