Tuesday 12 June, 2012

ನಮ್ಮ ಗಿಡ ಮರಬಳ್ಳಿಗಳು- ದಾಸವಾಳ, Dasavala

ದಾಸಾಳ 

Hibiscus rosa –sinesis L - shoeflower 



     ದಾಸಾಳಕ್ಕೆ ಕನ್ನಡದ ಇನ್ನೊಂದು ಹೆಸರು ದಾಸವಾಳ .ಜಗತ್ತಿನ ದಾಸಾಳದಲ್ಲಿ ಸುಮಾರು ಐದು ಸಾವಿರ ಪ್ರಬೇಧಗಳಿವೆಯೆಂದು ತಿಳಿದು ಬರುತ್ತದೆ.  ಹೈಬಿಸಕಸ ರೋಸಾ ಎಂಬುದು ಇದರ ವೈಜ್ಞಾನಿಕ ಹೆಸರು. ಇದು ಚೀನಾದ ಮೂಲ ನಿವಾಸಿಯಾದುದರಿಂದ ಇವನ್ನು ಚೈನಿಸ ಹೈಬಿಸಕಸ್ ಎನ್ನುತ್ತಾರೆ. ಇದಕ್ಕೆ ಮಲೇಸಿಯಾದಲ್ಲಿ ರಾಷ್ಟ್ರೀಯ ಹೂವಿನ ಸ್ಥಾನ ನೀಡಿ ಹೆಚ್ಚು ಪ್ರೀತಿಯಿಂದ ಬೆಳೆಸುತ್ತಿದ್ದಾರೆ. ಹಿಂದೆ ಈ ಹೂವನ್ನು ಜಜ್ಜಿ ಬೂಟು ಪಾಲಿಶ ಮಾಡುತ್ತಿದ್ದುದರಿಂದ ಇಂಗ್ಲೀಷನಲ್ಲಿ ಇದಕ್ಕೆ ಶೂ ಫ್ಲವರ ಎಂಬ ಹೆಸರು  ಬಂದಿದೆ. 
  ದಾಸಾಳದ ಸೇವನೆ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುತ್ತದೆಯೆಂದು ಹವಾಯಿ ದೇಶದ ಜನರು ತಿಳಿಯುತ್ತಾರೆ. ಚೀನ ದೇಶದ ಜನರು ಇದರ ಉಪ್ಪಿನ ಕಾಯಿ ಮಾಡಿ ಸೇವಿಸುತ್ತಾರೆ ಚೀನ ಮತ್ತು ಫಿಲಿಫೈನ್ಸನಲ್ಲಿ ಹೂವನ್ನು ಆಹಾರದಲ್ಲಿ ಬಳಸುತ್ತಾರೆ ಇದನ್ನು ಹಲವು ಬಗೆಯಾಗಿ ಅಡುಗೆಯಲ್ಲಿ ಬಳಸುತ್ತಾರೆ. ದಾಸಾಳವನ್ನು ಬಳಸಿ ತಯಾರಿಸುವ ಪಶ್ಚಿಮ ಏಷ್ಯಾ ದೇಶಗಳ ಜನಪದ ವೈದ್ಯ ಮತ್ತು ಜನಪದ ಅಡುಗೆಗಳು  ಸ್ವೀಕರಣಕ್ಕೆ ಯೋಗ್ಯವಾಗಿವೆ    
 ಕನರ್ಾಟಕದಲ್ಲಿ ಜನಪದ ದೇವರಿಗೆ ದಾಸಾಳ ಹ ೂವು ಪ್ರಿಯವಾದದ್ದೆಂದು ಭಕ್ತರ ತಿಳುವಳಿಕೆಯಿದೆ. ಆದ್ದರಿಂದ  ಅಂಗಳದಲ್ಲಿ ತುಳಸಿಯನ್ನು ಸ್ಥಾಪನೆ ಮಾಡಿ ಅದನ್ನುಪೂಜಿಸುವ ಕರಾವಳಿಯ ಜನರು ತಮ್ಮ ಮನೆಯ ಮುಂದೆ ಬಣ್ಣಬಣ್ಣದ ದಾಸಾಳ ಹೂವಿನ ಗಿಡವನ್ನು ನೆಟ್ಟು ರಕ್ಷಿಸಿಕೊಳ್ಳುತ್ತಾರೆ, ದಾಸಾಳವು  ಪ್ರತಿದಿನ  ಹೂವು ನೀಡುತ್ತದೆ. ಈ ಹೂವನ್ನು ಪ್ರತಿದಿನ  ಕೊಯ್ದು ತಮ್ಮ ದೇವರ ಪೂಜೆಗಾಗಿ ಭಕ್ತರು ಬಳಸುತ್ತಾರೆ. ದೇವರಿಗಾಗಿ ಹೂವನ್ನು ಅಪರ್ಿಸಿದ ಬಳಿಕ ಅವುಗಳನ್ನು ಪ್ರಸಾದ ರೂಪದಲ್ಲಿ ಎತ್ತಿಕೊಂಡು ಆಹಾರವಾಗಿ ಬಳಸಬಹುದು.. ಕರಾವಳಿಯ ಮಕ್ಕಳು ಹಿರಿಯರ ಕಣ್ಣು ತಪ್ಪಿಸಿ ದಾಸಾಳದ ಮೊಗ್ಗುಗಳನ್ನು ಹರಿದು ಬಾಯಿಗಿಟ್ಟು ಜಗಿಯುವದನ್ನು ನೀವು ನೋಡಿರಬಹುದು, ಅಥವಾ ನೀವೂ ದಾಸಾಳದ ಮೊಕ್ಕೆಯನ್ನು ಮತ್ತು ಹೂವಿನ ಸಿಹಿಯಾದ ಬುಡ ಭಾಗವನ್ನು ಜಗಿದು ಆನಂದಿಸಿರಬಹುದು. 
ದಾಸಾಳ ಸೊಪ್ಪಿನ ಇಡ್ಲಿ
ದಾಸಾಳದ ಎಲೆ ಹೂಗಳಿಗೆ ಕನರ್ಾಟಕದ ಜನಪದ ಆಚರಣೆ ಮತ್ತು ಮನೆಮದ್ದಿನಲ್ಲಿ ವಿಶೇಷ ಸ್ಥಾನಮಾನವಿದೆ. . ಮಕರ ತಿಂಗಳಲ್ಲಿ ದಾಸಾಳ ಸೊಪ್ಪಿನ ಇಡ್ಲಿ ತಿನ್ನುವುದು ಒಂದು ಜನಪದ ಆಚರಣೆಯಾಗಿದೆ. ಜನರ ಅರೋಗ್ಯವನ್ನು ಕಾಪಾಡುವ ಇಂತಹ ಅಡುಗೆಯನ್ನು ಆಚರಣೆಯ ಚೌಕಟ್ಟಿನಲ್ಲಿ ಸುರಕ್ಷಿತಗೊಳಿಸಿರುವದು ನಮ್ಮ ಜನರ ಹೆಗ್ಗಳಿಕೆ.  .ಇಲ್ಲಿ ಬಿಳಿ ದಾಸಾಳದ ಒಂದು ಹಿಡಿ ಎಲೆಯನ್ನು ನೆನೆಸಿ ತೊಳೆದ ಅಕ್ಕಿಯೊಂದಿಗೆ ನುಣ್ಣಗೆ ರುಬ್ಬಿ ದೋಸೆ ಮಾಡಿ ಸೇವಿಸುತ್ತಾರೆ. ಎಲೆಯು ನರಗಳಿಗೆ ಶಕ್ತಿ ನೀಡುತ್ತದೆಯೆಂಬ ನಂಬಿಕೆಯನ್ನು ಹೊಂದಿದ ಇವರು ಸೊಂಟನೋವು ಕಾಡುವಾಗ ದಾಸಾಳ ಸೊಪ್ಪಿನ ಇಡ್ಲಿ ಮಾಡಿ ಸೇವಿಸುತ್ತಾರೆ.  
ದಾಸಾಳ ಸೊಪ್ಪಿನ ನೀರು
ಬೇಸಿಗೆಯಲ್ಲಿ ಶ್ರಮಜೀವಿಗಳು ಕೆಂಪು ಹೂ ಬಿಡುವ ಕತ್ತರಿ ದಾಸಾಳದ ಎಲೆಯನ್ನು ಅಥವಾ ಬಿಳಿ ದಾಸಾಳದ ಎಲೆಯನ್ನು ನೀರಿನಲ್ಲಿ ಕಿವುಚಿ ಲೋಳೆಯಾದ ಈ ನೀರನ್ನು ಕುಡಿಯುತ್ತಾರೆ. ಸಾಮಾನ್ಯವಾಗಿ ಕತ್ತರಿ ದಾಸಾಳದ ಎಲೆಯನ್ನು ನೀರಿನಲ್ಲಿ ಕಿವುಚಿ ಸೋಸಿ ಬಳಿಕ ನಾಲಿಗೆಯ ಮೇಲೆ ಬೆಲ್ಲ ಹನಿಸಿಕೊಂಡು ಆ ನೀರನ್ನು ಕುಡಿಯುತ್ತಾರೆ. ಬೇಸಿಗೆಯ ದಿನಗಳಲ್ಲಿ ನನ್ನ ಅಜ್ಜಿ ತನಗೆ ಈ ಆರೈಕೆ ನಡೆಸಿಕೊಳ್ಳುತ್ತಿದ್ದುದನ್ನು ಗಮನಿಸಲಾಗಿದೆ.
ದಾಸಾಳ ಹೂವಿನ ತಂಬುಳಿ 
ಯಾವುದೇ ಬಣ್ಣದ ಹೂಗಳನ್ನು ಒಂದು ಚೂರು ಹಸಿಮೆಣಸು ತುಸು ಉಪ್ಪಿನೊಂದಿಗೆ ನುರಿದು ಮಜ್ಜಿ ಗೆ ಸೇರಿಸಿ ತಂಬುಳಿ ಮಾಡಿ ಕುಡಿಯುವದು  ತಂಬುಳಿ  ಅಡುವ  ಒಂದು ಸುಲಭ ವಿಧಾನವಾಗಿದೆ. ಮಜ್ಜಿಗೆ ಹುಳಿಯಿದ್ದರೆ ತುಸು ತೆಂಗಿನಕಾಯಿಯ ಸುಳಿಯನ್ನು ಅರೆದು ತಂಬುಳಿಗೆ ಸೇರಿಸಬಹುದು.
ಆಹಾರ ವೈದ್ಯ 
ತಾಯ ಹಾಲಿನ ಸೇವನೆಯನ್ನು ಬಿಟ್ಟ ಮಕ್ಕಳಿಗೆ ಬಿಳಿದಾಸಾಳದ ಮೊಗ್ಗುಗಳನ್ನು ಹಾಲಿನಲ್ಲಿ ಬೇಯಿಸಿ ಕಲ್ಲುಸಕ್ಕರೆ ಸೇರಿಸಿ ತಿನ್ನಿಸುತ್ತಾರೆ. ಮುಂಜಾನೆ ಎದ್ದು ಮೂರರಿಂದ ಆರು ಮೊಗ್ಗುಗಳನ್ನು ಹಸಿದ ಹೊಟ್ಟೆಯಲ್ಲಿರುವಾಗ ತಿನ್ನುವದರಿಂದ ಉರಿಮೂತ್ರ ಆಮಬೇಧಿ ಮಧು ಮೇಹ ಮೊಡವೆಗಳಿಗೆ ಮನೆಮದ್ದಿನಂತೆ ಉಪಯುಕ್ತವಾಗುತ್ತದೆ. ಮುಂಜಾನೆ ಹಸಿದ ಹೊಟ್ಟೆಯಲ್ಲಿ ಬಿಳಿದಾಸಾಳದ ಮೊಗ್ಗುಗಳನ್ನು ತಿನ್ನುವದರಿಂದ ಹಲವು ರೋಗಗಳು ಗುಣ ವಾಗುತ್ತವೆಯೆಂದು ಜನಪದ ವೈದ್ಯವು ತಿಳಿಸುತ್ತದೆ. ದಾಸಾಳಕ್ಕೆ ಸಂಬಂಧಪಟ್ಟು ಜನಪದ ವೈದ್ಯ ಜನಪದ ಅಡುಗೆ ಜನರ ಅನುಭವ ವೈದ್ಯ ಮುಂತಾದ  ಕ್ರಮಗಳು  ನಮ್ಮ ನಡುವೆ ಹೇರಳವಾಗಿ ಬಳಕೆಯಲ್ಲಿವೆ  
ಮನೆಮದ್ದಿಗೆ ಬಿಳಿದಾಸವಾಳವು ಪ್ರಶಸ್ತವೆಂಬ ಅಭಿಪ್ರಾಯಗಳಿದ್ದರೂ ಉಳಿದವು ಈ ಕಾರ್ಯದಲ್ಲಿ ಹಿಂದುಳಿಯುವದಿಲ್ಲ.
ದಾಸಾಳ ಚಾ
ಜಗತ್ತಿನ ಹಲವು ದೇಶಗಳಲ್ಲಿ ದಾಸಾಳ ಹೂವಿನ ಚಾ[ ಟಿ] ಜನಪ್ರಿಯ ಪೇಯವಾಗಿ ಪ್ರಚಾರದಲ್ಲಿದೆ. ಆಫ್ರಿಕದ ದಾರಿ ಬದಿಯ ಪಾನೀಯದಂಗಡಿಗಳಲ್ಲಿ ಈ ಪೇಯ ಮಾರಾಟವಾಗುತ್ತದೆ. ಒಣಗಿಸಿಟ್ಟ ದಾಸಳದ ಹೂವುಗಳು ಸುಸಜ್ಜಿತ ಪೊಟ್ಟಣಗಳಲ್ಲಿ ಮಾರಾಟವಾಗುತ್ತವೆ.
ದಾಸಾಳ ಹೂವಿನ ಚಾ[ ಟಿ] ತಯಾರಿಕೆ ಅತ್ಯಂತ ಸುಲಭವಾಗಿದೆ. 
ಆರೆಂಟು ದಾಸಾಳದ ಹೂವುಗಳನ್ನು ಸಣ್ಣಗೆ ಕೊಚ್ಚಿರಿ. ಎರಡು ಕಪ್ ನೀರಿನಲ್ಲಿ ಅಯ್ದು ನಿಮಿಷ ಬೇಯಿಸಿರಿ. ಪರಿಮಳಕ್ಕಾಗಿ ಒಂದು ಸೇಂಗಾಬೇಳೆಯಷ್ಟು ಶುಂಟಿ ತುಂಡು ಅಥವಾ ಒಂದು ತುಳಸಿ ಎಲೆ ಅಥವಾ ಚಿಟಿಕೆ ಯಾಲಕ್ಕಿ ಪುಡಿ ಕೂಡಿಸಿರಿ. ಸೋಸದೆ ಕುಡಿಯಿರಿ. ಹಾಲು ಸಕ್ಕರೆ ಸೇರಿಸಿದರೆ ಗುಲಾಬಿ ಬಣ್ಣದ ಪೇಯ ದೊರೆಯುತ್ತದೆ. ಈ ಪೇಯಗಳು  ಕಣ್ಣಿಗೆ ಅಂದ ದೇಹಕ್ಕೆ ಹಿತಕಾರಿ. ಅಯ್ದು ಪಕಳೆಯ ಮತ್ತು ಬಹು ಪಕಳೆಯ ಹಾಗೂ ಯಾವುದೇ ಬಣ್ಣದ ಹೂವನ್ನು ದಾಸಳದ ಚಾಕ್ಕೆ ಬಳಸಬಹುದು
ಕೇಶ ರಕ್ಷಕ  
ಕೂದಲಿಗೆ ಬಣ್ಣ ಕಟ್ಟುವ ಗುಣ ಇದರಲ್ಲಿದೆ.. 
ಆಯುವರ್ೇದದಲ್ಲಿ ಇದನ್ನು ,ಕೇಶ್ಯ-ಎಂದು ಹೆಸರಿಸಿ ಇದರ ಕೂದಲು ರಕ್ಷಣೆಯ ಗುಣವನ್ನು ವಿವರಿಸಿದ್ದಾರೆ. .ಇದರಲ್ಲಿಯ ರಾಸಾಯನಿಕಗಳು ಕೂದಲು ಬೆಳವಣಿಗೆಗೆ ಸಹಕರಿಸುತ್ತವೆಯೆಂದು ತಿಳಿದು ಬರುತ್ತದೆ. ಕೂದಲಿನ ಬೆಳವಣಿಗೆಗೆ ಅಡ್ಡಿಪಡಿಸುವ ಒಂದು ಬಗೆಯ ಚರ್ಮರೋಗವಾದ ಹೊಟ್ಟು[ಡೆಂಡ್ರಫ್] ದಾಸಾಳದ ಹೂವು ಮೊಕ್ಕೆ ಮತ್ತುಎಲೆಯನ್ನು ಕೂದಲಿಗೆ ಬಳಸುವದರಿಂದ ದೂರವಾಗುತ್ತದೆಯೆಂದು ಅನುಭವ ವೈದ್ಯದ ಮತ್ತು  ಆಧುನಿಕ ವೈ ಜ್ಞಾನಿಕ ಸಂಶೋಧಕರ ಅಭಿಪ್ರಾಯವಾಗಿದೆ. ಹೂವನ್ನು ಅರೆದು ತಲೆಗೆ ಮೈಗೆ ಪೂಸಿಕೊಂಡು ತಿಕ್ಕುವದರಿಂದ ಕೂದಲಿಗೆ ಮೈಚರ್ಮಕ್ಕೆ  ಕಾಂತಿ ಮೂಡುತ್ತದೆ. ಈ ಕ್ರಿಯೆಗೆ ದಾಸಾಳದಲ್ಲಿರುವ ನೈಸಗರ್ಿಕವಾದ ಎಣ್ಣೆಕಾರಣವಾಗಿದೆ.. ಪಶ್ಚಿಮ ಏಸೀಯಾದೇಶಗಳು ದಾಸಾಳವನ್ನು ಬಳಸಿ ಕೂದಲಿಗೆ ಚರ್ಮಕೆ ್ಕಹಲವು ಬಗೆಯ ಮನೆಮದ್ದು ತಯಾರಿಸುವದನ್ನು ಪರಂಪರಾಗತವಾಗಿ ರೂಢಿಸಿಕೊಂಡಿವೆ ದಾಸಳ ಹೂವಿನಲ್ಲಿರುವ ರಾಸಯನಿಕಗಳು ಕೂದಲ ಬೆಳವಣಿಗೆಗೆ ಮತ್ತು ಕೂದಲ ಕಪ್ಪು ಬಣ್ಣಕ್ಕೆ ಒತ್ತು ನೀಡುತ್ತವೆ. ಇದರಲ್ಲಿಯಲ್ಲಿಯ ಸ್ನಿಗ್ಧತೆಯು ಕೂದಲಿಗೆ ಕಂಡಿಶನರದಂತೆ ಕೆಲಸ ಮಾಡುತ್ತದೆಯೆಂದು ಈ ಕುರಿತ ಅಧ್ಯಯನ ನಡೆಸಿದವರು ತಿಳಿಸುತ್ತಾರೆ.
ಹಳ್ಳಿಗರು ದಾಸಾಳದ ಎಲೆ ಅರೆದು ತಲೆಗೆ ಶರೀರಕ್ಕೆ ಲೇಪಿಸಿ ಸ್ನಾನಮಾಡುತ್ತಾರೆ. ಈ ಕ್ರಿಯೆ ಮೆದುಳಿಗೆ ಶಾಂತಿ ನೀಡುತ್ತದೆ. ಮಸ್ತಿಷ್ಕದ ದೌರ್ಬಲ್ಯಕ್ಕೆ. ಉನ್ಮಾದಕ್ಕೆ, ಶಿರೊರೋಗಕ್ಕೆ ಕೂದಲ ದಟ್ಟವಾಗುವದಕ್ಕೆ ದಾಸವಾಳದ ಎಲೆಹೂಗಳು ಸಹಕಾರಿ ಎಂದು ತಿಳಿಯಲಾಗಿದೆ. .ಹೂವು ಚರ್ಮಕ್ಕೆ ಕೂದಲಿಗೆ ಬಣ್ಣ ನೀಡುವ ಗುಣವನ್ನು ಹೊಂದಿದೆ. ದಾಸವಾಳ ಹೂವನ್ನು ಅರೆದು ಕೂದಲಿಗೆ ಹಚ್ಚಿರಿ. ನರೆತ ನಿಲ್ಲುತ್ತದೆ. ಕೂದಲು ಉದುರುವುದು ಕಡಿಮೆಯಾಗುತ್ತದೆ. ಎಲೆಯನ್ನು ಪಚ್ಚೆ ಎಲೆಯ ಜೊತೆ ಮಿಕ್ಸಿಯಲ್ಲಿ ರುಬ್ಬಿ ತಲೆಗೆ ಆ ಲೋಳೆಯನ್ನು ಹಚ್ಚಿಇಪ್ಪತ್ತು ನಿಮಿಷದ ಬಳಿಕ  ಸ್ನಾನ ಮಾಡಿರಿ . ಪಚ್ಚೆ ಎಲೆಯ ನವುರಾದ ಪರಿಮಳ ಮನಸ್ಸನ್ನು ಮುದಗೊಳ್ಳಿಸುತ್ತದೆ. ಇದು ಅನುಭವ ವೈದ್ಯ
ದಾಸಾಳೆಣ್ಣೆ ಹಲವು ಬಗೆಯಲ್ಲಿದಾಸವಾಳದ ಎಣ್ಣೆಯನ್ನು ತಯಾರಿಸಿ ಬಳಸಹುದು .ಸುಮಾರು ಅಯ್ವತ್ತು ವರ್ಷಗಳ ಹಿಂದೆ ಕರಾವಳಿಯ ಹೆಣ್ಣುಮಕ್ಕಳು ತಮ್ಮ ಕೂದಲ ರಕ್ಷಣೆಗಾಗಿ ಬಿಳಿದಾಸಾಳದ ಮೊಕ್ಕೆಯ ಎಣ್ಣೆ ತಯಾರಿಸಿಟ್ಟುಕೊಂಡು ಬಳಸುತ್ತಿದ್ದರು.ತೆಂಗಿನೆಣ್ಣೆಗೆ  ಇಡಿಯಾಗಿ  ಬಿಳಿ ದಾಸಾಳದ ಮೊಕ್ಕೆಮತ್ತು ಅರ್ಧ ಚಮಚ ಮೆಂತೆ ಸೇರಿಸಿ ಎಣ್ಣೆಯ ಸಳಸಳನಾದ ನಿಲ್ಲುವವರೆಗೆ ಸಣ್ಣ ಉರಿಯಲ್ಲಿ ಕಾಸಿ ಅದನ್ನು ಸೋಸದೆ ಬಾಟ್ಲಿಯಲ್ಲಿ ಸಂಗ್ರಹಿಸಿಕೊಳ್ಳುತ್ತಿದ್ದರು. ಆಗ ಈಗಿನಂತೆ ಔಷಧ ಕಂಪನಿಗಳ ಹೊಟ್ಟೆ ತುಂಬಿಸುವ ತಲೆಹೊಟ್ಟು ಜಾಹೀರಾತುಗಳು ಕೇಳಿ ಬರುತ್ತಿರಲಿಲ್ಲ. ಈ ಎಣ್ಣೆಯನ್ನು ಕೂದಲಿಗೆ ಹಚ್ಚುವದರಿಂದ ಅದು ಹೊಳಪನ್ನು ಪಡೆಯುತ್ತದೆ ಕೂದಲಿನ ಅಕಾಲನರೆಗೆ ಕಾರಣವಾಗುವ ಸಬಕಾರ ಶಾಂಪುಗಳನ್ನು ಬದಿಗಿಟ್ಟು ನಾವು ದಾಸಾಳ ಹೂ ಮತ್ತುಎಲೆಯ ಮೊರೆ ಹೋಗುವದು ವಿಹಿತವಾಗಿದೆ. ಚರ್ಮರೋಗಿಗಳು ಮೈಗೆ ಪೂಸಬಹುದಾದ ಎಣ್ಣೆಗೆ ದಾಸವಾಳದ  ಹತ್ತಾರುಮೊಕ್ಕೆಗಳನ್ನು ಸೇರಿಸಿ ಸಣ್ಣ ಉರಿಯಲ್ಲಿ ಒಂದೆರಡು ನಿಮಿಷ ಕುದಿಸಿಟ್ಟು ಕೊಂಡು ಬಳಸಬಹುದು.
ಎಲೆ ಹೂವು ಹೃದಯರೋಗ, ರಕ್ತ ಪಿತ್ತಗಳಲ್ಲಿ ಪರಿಣಾಮಕಾರಿಯಾಗಿದೆ. ಹೂವು ರಕ್ತಸ್ಥಂಬನಕಾರಿ. ರಕ್ತಾತಿಸಾರ ರಕ್ತಮೂಲವ್ಯಾಧಿಗಳಿಗೆ ಉತ್ತಮ ಮದ್ದು. ರಕ್ತಪದರವಿದ್ದಾಗ ಮೊಗ್ಗನ್ನು ಹಾಲಿನಲ್ಲಿ ಬೇಯಿಸಿ ಕುಡಿಯಿರಿ. ಗರ್ಭಕಟ್ಟಿದ್ದಾಗ ಗರ್ಭಪುಷ್ಟಿಕರ. ಪ್ರಮೇಹಾದಿ ಜನನಾಂಗ ರೋಗಗಳಲ್ಲಿ ಮೂತ್ರರೋಗಗಳಲ್ಲಿಯೂ ಇದು ಉಪಯುಕ್ತವಾಗಿದೆ ದಾಸವಾಳದ ಎಲೆ, ಹೂಗಳಲ್ಲದೆ ಬೇರು, ತೊಗಟೆಗಳೂ ಔಷಧಿಯ ಗುಣ ಹೊಂದಿವೆ.  
ಎಲೆಹೂಗಳಲ್ಲಿ ಸಾರಜನಕ, ಕ್ಯಾಲ್ಸಿಯಂ, ರಂಜಕ, ಸಾಕಷ್ಟು ಬಿ ಜೀವಸತ್ವವಿದೆಯೆಂದು ಆಧುನಿಕ ವಿಜ್ಞಾನವು ತಿಳಿಸುತ್ತದೆ. ಚರ್ಮದ ಬೆಳವಣಿಗೆಯಲ್ಲಿ ಇದು ಸಹಕಾರಿಯಾಗಿದೆ. ದಾಸಾಳದ ಹೂವು ಮತ್ತು ಎಲೆಗಳನ್ನು ಒಣಗಿಸಿ ಸುಟ್ಟು ಬೂದಿಮಾಡಿ ಹುಬ್ಬಿಗೆ ಹಚ್ಚುವದರಿಂದ ಹುಬ್ಬಿನ ಕೂದಲು ಹೊಳೆಯುತ್ತದೆ. 
ಹೂವು ಮೊಗ್ಗುಗಳ ಕೊಚ್ಚಲನ್ನು ಜೊತೆ ಕಾಯಿಸುಳಿ ಸೇರಿಸಿ ಬೇರೆ ತರಕಾರಿಗಳ ಸಾಲೆಡ್ ಜೊತೆ ಸೇರಿಸಿ ತಿನ್ನ ಬಹುದು.  ಟೊಂಗೆಗಳನ್ನು ಕತ್ತರಿಸಿದಾಗ ಟೊಂಗೆಯ ಚಿಲ್ಲಿಯನ್ನು ನೀರಿನಲ್ಲಿ ಕಿವುಚಿ ದೊರೆಯುವ ಲೋಳೆಯನ್ನು ಕುಡಿಯಬಹುದು .ಎಲೆಯನ್ನು ನೀರಿನಲ್ಲಿ ಕಿವುಚಿ ಸೋಸಿ ಹಾಲು ಸಕ್ಕರೆ ಸೇರಿಸಿ ಕುಡಿಯಿರಿ. ಬೇರಿನ ತೊಗಟೆಯ ಎಣ್ಣೆಯು ಪ್ರಾರಂಭಿಕ ಹಂತದ ಕ್ಯಾನ್ಸರ ಹುಣ್ಣುಗಳನ್ನು ಗುಣಪಡಿಸಬಲ್ಲದೆನ್ನಲಾಗುತ್ತದೆ. ಅಂಕೋಲೆಯ ಮನೆಮದ್ದು ಗಾರರೊಬ್ಬರು  ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ತಮ್ಮ ಸಂಬಂಧಿ ಗಳಿಗಾಗಿ ದಾಸವಾಳದ ಬಿಳಿ ಹೂವುಗಳನ್ನು ತಂಪಿನಲ್ಲಿ ಒಣಗಿಸಿ ಅಲ್ಲಿಗೆ ಕಳಿಸುತ್ತಿದ್ದುದನ್ನು ಗಮನಿಸಲಾಗಿದೆ. ದೇವಪ್ರಿಯ ದಾಸಳವನ್ನು ನೆಟ್ಟು ಬೆಳೆಸಿರಿ. ಅಡುಗೆಯಲ್ಲಿ ಅದರ ಬಹುವಿಧದ ಉಪಯೋಗವನ್ನು ಕಂಡುಕೊಳ್ಳಿರಿ 





1 comment:

  1. ಮಹತ್ವದ ಮಾಹಿತಿ ಮತ್ತು ಮೌಲ್ಯ ಸಹಿತ ಉತ್ತಮ ಲೇಖನಕ್ಕಾಗಿ ಧನ್ಯವಾದಗಳು.

    ReplyDelete