Monday 4 June, 2012

Tigalari - ತಿಗಳಾರಿ



ತಿಗಳಾರಿ

ಇದು ಮಲೆಯಾಳಿ ಭಾಷೆಗಾಗಿ ಬಳಕೆಯಾಗುತ್ತಿದ್ದ ಮಲೆಯಾಳಿ ಭಾಷೆಯ ಲಿಪಿಯಾಗಿ ಸಿದ್ದಗೊಳ್ಳುವ ಪೂರ್ವದ ತಮಿಳು ಲಿಪಿ.ಆದ್ದರಿಂದ ಇದು ಈಗಿನ ಮಲೆಯಾಳಿ ಭಾಷೆಯ ಲಿಪಿಗೆ ತೀರ ಸಮೀಪದಲ್ಲಿದೆ ಬಹುಕಾಲದಿಂದ ಕೇರಳ ಮತ್ತುಕನರ್ಾಟಕ ಹಾಗೂ ಕೇರಳದ ಕಡೆಯಿಂದ ಉತ್ತರದ ಕಡೆಗೆ ಬಂದ ಹವ್ಯಕ ಪೂರ್ವ ವಂಶಜರು ಇದನ್ನು ಗುಪ್ತ ಭಾಷೆಯಾಗಿ ದೇವಭಾಷೆಯ .ಅಧ್ಯಯನಕ್ಕಾಗಿ ಬಳಸುತ್ತ ಬಂದುದರಿಂದ ಕೇರಳದಲ್ಲಿ ರೂಪುಗೊಂಡ ಈ ಲಿಪಿ ಕೇರಳದಲ್ಲಿ ಕಾಲ ಕ್ರಮದಲ್ಲಿ ಬದಲಾಗುತ್ತ `ಗ್ರಂಥ ಲಿಪಿ'ಯಾಗಿ ಪರಿವರ್ತನೆಯಾದರೂ ಕೇರಳದಿಂದ ದೂರವಾಗುಳಿದ ಪ್ರದೇಶಗಳಲ್ಲಿ ಮಾತ್ರ ತನ್ನ ಮೂಲ ರೂಪದಲ್ಲಿಯೇ ಉಳಿದುಕೊಂಡಿತಲ್ಲದೆ ಪ್ರಾಚೀನರಾದ ತಿಗಳಾರಿಯೆಂಬ ಹೆಸರನ್ನಲ್ಲದೆ ಅದರ ಇಲ್ಲಿಗೆ ವಲಸೆ ಬಂದ ಕಾಲದ ರೂಪವನ್ನು ಉಳಿಸಿಕೊಂಡಿತು.
ತಿಗಳಾರಿಯು ಕೇರಳದ ಯಾವ ಪ್ರದೇಶದಿಂದ ಹವ್ಯಕರು ಕೇರಳದ ಉತ್ತರಕ್ಕೆ ದ,ಭಾಗಗಳಗಿ ಹೊರಟರೊ ಆ ಪ್ರದೇಶದಲ್ಲಿ ಆ ಕಾಲದಲ್ಲಿ ಬಳಕೆಯಲ್ಲಿದ್ದ ತಮಿಳು ಲಿಪಿಯಾಗಿದೆ. `ತಿಗಳ'ಎಂದರೆ ತಮಿಳು ಎಂಬುದನ್ನು ಗಮನಿಸಬಹುದು, `ಅರ'-ಲಿಪಿ ಸಾಧನ. ಅರದಿಂದ ಸಿದ್ದವಾದದ್ದು ಅರಿ. ತಿಗಳರಿ>ತಿಗಳಾರಿ [ಅರಿ>ನಾಗರಿ.ಗಮನಿಸಿ]
ತಮ್ಮ ಮೂಲಸ್ಥಾನದಿಂದ ಆಗಿನ ಕಾಲದ ಲಿಪಿ ಮತ್ತು ಭಾಷೆಯಿಂದಲೆ ಹೊರಟ ಹವ್ಯಕರು ಕರಾವಳಿಯ ಬೇರೆ ಬೇರೆ ಪ್ರದೇಶಗಳಲ್ಲಿ ನೆಲೆಸಿದಾಗ ಆಯಾ ಪ್ರದೇಶಗಳ ಪ್ರಚಲಿತ ಭಾಷೆಯನ್ನು ತಮ್ಮ ಮಾತೃಭಾಷೆಯ ಲಿಪಿಯಲ್ಲಿ ದಾಖಲಿಸಿಕೊಂಡರು.ಕರಾವಳಿಯ ಗಟ್ಟದ ಪ್ರದೇಶಗಳಲ್ಲಿಯೂ ಈ ಜನರ ಹೊಕ್ಕು ಬಳಕೆ ಸಾಕಷ್ಟು ಇದ್ದ ಕಾರಣ ಈ ಲಿಪಿ ಅಲ್ಲಿಯೂ ಬಳಕೆಯಾಯಿತು. ಪತ್ರ ಬರೆಯುವುದು ಮನೆಯ ಲೆಕ್ಕ ಪತ್ರಗಳನ್ನಿಡುವುದು ಆಳುಕಾಳುಗಳ ವ್ಯವಹಾರ ಮುಂತಾದ ಲೌಕಿಕ ಬರಹಗಳಿಗೆ ಇವರು ತಿಗಳಾರಿಯ ಲಿಪಿಯನ್ನು ಸ್ಥಳೀಯ ಭಾಷೆಯಲ್ಲಿ ಬಳಸಿದರು.  ಹಾಗೂ  ಉತ್ತರಕನ್ನಡಜಿಲ್ಲೆಯಲ್ಲಿ  ಕನ್ನಡ ಮತ್ತು ಸಂಸ್ಕೃತ ಭಾಷೆಯ ಧಾಮರ್ಿಕ ಗ್ರಂಥಗಳು ಮಂತ್ರ ತಂತ್ರಾದಿಗಳ ಬರಹಗಳು ಕೆಲವೊಮ್ಮೆ ಸಾಹಿತ್ಯ ಕೃತಿಗಳು ತಿಗಳಾರಿಯಲ್ಲಿ ದಾಖಲಾದವು.  
ತುಳು ಮಾತನಾಡುವ ಪ್ರದೇಶಕ್ಕೆ ಈ ಬ್ರಾಹ್ಮಣರು ಬಂದಾಗ ಸಂಸ್ಕೃತ ಭಾಷೆಯ ಜೊತೆಗೆ ಅಲ್ಲಿಯ ತುಳು ಭಾಷೆಯ ಸಾಹಿತ್ಯಾದಿಗಳನ್ನು ತಿಗಳಾರಿಯಲ್ಲಿ ದಾಖಲಿಸಿಕೊಂಡರು. ಆದ್ದರಿಂದ ಆ ಪ್ರದೇಶದಲ್ಲಿ ಲಿಪಿಯಿಲ್ಲದ ತುಳು ಭಾಷೆಗೆ ತಿಗಳಾರಿಯೇ ಲಿಪಿಯಾಯಿತು ಹಾಗೂ ಇದು ಆ ಪ್ರದೇಶದಲ್ಲಿ ತವಳು ಲಿಪಿಯೆಂದು ಗುರುತಿಸಲ್ಪಟ್ಟವು ಅಲ್ಲಿ ಸಂಸ್ಕೃತ ಭಾಷೆಯ ಧಾಮರ್ಿಕ ಶಾಸನಗಳು ತಿಗಳಾರಿಯಲ್ಲಿ ಕೆತ್ತಲ್ಪಟ್ಟಿವೆ. ತುಳು ಭಾಷೆಯ ಕಾವ್ಯಗಳು ತಿಗಳಾರಿಯ ಲಿಪಿಯಲ್ಲಿ ರಚಿತಗೊಂಡಿತು. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಆ ಕಾಲಕ್ಕಾಗಲೇ ಕನ್ನಡ ಲಿಪಿ ಬಳಕೆಯಲ್ಲಿತ್ತು. 
ತಿಗಳಾರಿಯು ತನ್ನ ಮೂಲ ಹೆಸರನ್ನು ಉಳಿಸಿಕೊಂಡು ವಿರಳವಾಗಿ ಖಾಸಗಿ ವ್ಯವಹಾರದಲ್ಲಿ ಮಾತ್ರ ಕನ್ನಡ ಭಾಷೆಗೆ ಲಿಪಿಯಾಗಿ ಬಳಕೆಯಾಗಿದುಂಟು. ಕನ್ನಡ ಭಾಷೆ ಬಳಸಿ ಕೊಂಡ ಇದನ್ನು ಕನ್ನಡ ಲಿಪಿ ಎನ್ನಲಾಗದು.  ಕನ್ನಡ ಭಾಷೆಯ ತಿಗಳಾರಿ ಲಿಪಿಯೆಂದು ಹೇಳಬಹುದು..

3 comments:

  1. ee thigalari(lipi) basheyu,thigala(vanhikula kshatriya) janangada mathru basheyagithu, ee bashe(lipi) mathanaduva janarannu naavu,eegalu benagaluru nagara,benagaluru rural,ramanagar,kolar,hosakote,devanahalli , mattastu stalagalalli "thigalari" basheyannu mathanaduva "thigala"rannu naavu kaanabahudu.

    karnatakadalli sumaru 40 rinda 50 laksha thigala (vanhikula kshatriya) janangadavarannu naavu eegalu kaanabahudu.

    thigala janangadha mathru basheye thigalari lipi.

    ee basheya bagge sariyagi adhyana maadidare moola sangathi thiliyuthade.

    ReplyDelete
  2. idu tamilige samIpave? tigaLariya kelavu sentence baareyiri

    ReplyDelete
  3. it is also southern Brahmic script used in the Coastal and Malenadu regions of Karnataka and centre city of Bangalore Vanhikula Kshathriyas and 40lakhs of people of karnataka speeks Thigalari langwage

    ReplyDelete