Thursday 14 June, 2012

ನಮ್ಮ ಮೆಟ್ರೋ ಚಿಹ್ನೆ, Namma Metro Symbol


     


ಮೆಟ್ರೋ ಚಿಹ್ನೆ - ಉತ್ಕನನ - ಆಟ - ರಂಗೋಲಿ

ಹರಪ್ಪ ಮೋಹೆಂಜೋದಾರ ಸಂಸ್ಕೃತಿಯಲ್ಲಿಯ ಉತ್ಖನನದ ವೇಳೆಗೆ ದೊರೆತ ಮೊಹರುಗಳ ಮೇಲಿನ ನಕ್ಷೆಗಳು, ಚಿತ್ರಗಳು 

    ಮತ್ತು ಶವ ಕರಂಡಕಗಳ ಮೇಲಿನ ನವಿಲು ಚಿತ್ರಗಳು ಮತ್ತು ಅಲ್ಲಿಯ ನಕ್ಷೆಗಳು ರಂಗೋಲಿಯ ಪ್ರಾಚೀನತೆಯನ್ನು ಸಾರುತ್ತವೆ. ಸುಧಾ 1969 ಪುಟ 42.ಇಲ್ಲಿಯ ನಕ್ಷೆ ಗಳಲ್ಲಿ ನಾಲ್ಕುಎಸಳಿನ ರಂಗೋಲಿಯೂ ಒಂದು. ನೋಡಿ ಚಿತ್ರ1

ಚಿತ್ರ2 ರಲ್ಲಿ ಕಾಣುವ ಈ ನಕ್ಷೆಯು ಚಿತ್ರ 1ರ ಶವಕರಂಡಕದ ಮೇಲಿನ ನಕ್ಷೆಯಲ್ಲಿಯೂ ಕಂಂಡುಬರುತ್ತದೆ, ಈ ಮೇಲಿನ ವಿನ್ಯಾಸವು ಭಾರತ ಇರಾನ್ ಇರಾಕ್ಗಳಲ್ಲಿಯ ಸ್ಮಾರಕಗಳನ್ನು ಅಲಂಕರಿಸಲು ಬಳಸಲಾಗಿತ್ತೆಂಬ ದಾಖಲೆಗಳಿವೆ. ಮುಂದೆ ಒಂದು ಸಾವಿರ ವರ್ಷಗಳಲ್ಲಿ ಐರ್ಯಲಂಡ್, ಪ್ರಾನ್ಸ್ ಸ್ಕಾಂಡಿನೇವಿಯಾ ಉತ್ತರ ಇಟಲಿಗಳ ಸ್ಮಾರಕ ಮುಂತಾದವುಗಳ ಮೇಲೆ ಈ ವಿನ್ಯಾಸವು ಕಂಡು ಬಂದಿದೆಯೆಂದೂ ಇದು ಅಂತರಾಷ್ಟ್ರೀಯ ಸಹ ಜೀವನದ ಸಂಕೇತವಾಗಿ ಬಳಕೆಯಲ್ಲಿದೆಯೆಂದೂ ತಿಳಿದು ಬರುತ್ತದೆ.   ನೋಡಿ 1985 ತರಂಗ ಸಪ್ಟಂಬರ್ 2 ಪುಟ 5. ಭಾರತ ದೇಶದ ರಂಗೋಲಿಯಲ್ಲಿಯಲ್ಲದೆ  ಇಲ್ಲಿಯ ಸಾಂಸ್ಕ್ರತಿಕ ರಂಗದ ವಿವಿಧ ಹಂತಗಳಲ್ಲಿ ಈ ನಕ್ಷೆಯನ್ನು ವ್ಯಾಪಕವಾಗಿ ಬಳಸಿಕೊಂಡಿರುವದು ಕಂಡುಬರುತ್ತದೆ. ನಾಲ್ಕು ಎಸಳುಳ್ಳ ಈ ಚಿನ್ನೆಯು ಜನಪದ ರಂಗೋಲಿಯಲ್ಲಿ ವ್ಯಾಪಕವಾಗಿ ವೈವಿಧ್ಯಮಯವಾಗಿ ರಚಿತಗೊಳ್ಳುತ್ತದೆ. ಅಷ್ಟೇ ಅಲ್ಲ, ಇತ್ತೀಚೆಗೆ ಬೆಂಗಳೂರಿನ ಮೇಟ್ರೊ ರೈಲು ವಿಭಾಗವು ಇದನ್ನು    ತನ್ನ ಸಿಂಬೋಲ್ ಆಗಿ ಸ್ವೀಕರಿಸಿದೆ.

       ಖಾಸಗಿ ರಂಗದಲ್ಲಿ ಬೆಂಗಳೂರಿನ ಪ್ರಕ್ರೀಯಾ ಸ್ಕೂಲಿನ ಚಿನ್ನೆಯನ್ನು ಗಮನಿಸಿರಿ. ಬೆಂಗಳೂರಿನಲ್ಲಿ ಹೊಸ ಮನೆಗಳ ನೆಲದ ಮೇಲೆ ಗೋಡೆಯ ಮೇಲೆ ಟೈಲ್ಸನಲ್ಲಿ ಇದನ್ನು ವಿವಿಧ ನಮೂನೆಗಳಲ್ಲಿ ಖಚಿತಗೊಳಿಸಿ(ಜೋಡಿಸಿ)ರುವದನ್ನು ಕಾಣಬಹುದಾಗಿದೆ.

ಆಟದಲ್ಲಿ-
       ಕನರ್ಾಟಕದಲ್ಲಿ ಇದು ಇಬ್ಬರು ಕುಳಿತು ಆಡಬಹುದಾದ  ಜನಪದ  ಮಣೆ(ಬೋರ್ಡ) ಆಟವಾಗಿ ಪರಿಚಿತವಾಗಿದೆ. ಪಾಟಿ ಕಡ್ಡಿ ಆಟದಲ್ಲಿ ಈ ಚಿನ್ಹೆಯು ಬಳಕೆಯಿದೆ. ಚಿತ್ರ 3  ಪಾಟಿ ಕಡ್ಡಿ ಆಟ. 

   ಶಾಲಾ ಮಕ್ಕಳು ಈ ಮಣೆಯನ್ನು ಪಾಟಿಯ ಮೇಲೆ ಬಳಪದ ಕಡ್ಡಿಯಿಂದ ಬರೆದುಕೊಂಡು ಆಡುತ್ತಾರೆ.  ಇದರಲ್ಲಿ ಒಂಬತ್ತು ಕೋಣೆಗಳಿರುತ್ತವೆ. ಇಬ್ಬರು ಆಟಗಾರರುಬೇಕು. ಒಬ್ಬ ಆಟಗಾರನು 0 ಮತ್ತು + ಅಥವಾ ಗುಣಿಲೆ ಈ  ಈ ಮೂರು ಚಿನ್ಹೆಗಳಲ್ಲಿ ಒಂದನ್ನು ಆಯ್ದುಕೊಂಡರೆ ಇನ್ನೊಂದನ್ನು ಎರಡನೆಯವನು ಆಯ್ದುಕೊಳ್ಳುತ್ತಾನೆ. ಒಬ್ಬ ಆಟಗಾರ ತನ್ನ ಚಿನ್ಹೆಯನ್ನು ಆಟದ ಮನೆಯಲ್ಲಿ ನೇರ ಗೆರೆ ಎಳೆಯಲು ಸಾಧ್ಯವಾಗುವಂತೆ ಇಟ್ಟಾಗ ಆ ಆಟಗಾರ ಗೆಲ್ಲುತ್ತಾನೆ. ಆದರೆ ತನ್ನ ಎದುರಾಳಿಗೆ ಇದು ಸಾಧ್ಯವಾಗದಂತೆ ತನ್ನ ಚಿನ್ಹೆಯನ್ನು ನಡುವೆ ಇಟ್ಟು ಎದುರಾಳಿಯ ಚಿನ್ಹೆಯು ನೇರ ಗೆರೆಯಲ್ಲಿ ಬರದಂತೆ ಹಾಗೂ ತನ್ನ ಚಿನ್ಹೆಗಳು ನೇರ ಗೆರೆಯಲ್ಲಿ ಬರುವಂತೆ ಪ್ರಯತ್ನಿಸುತ್ತಾನೆ ಈ ಆಟದಲ್ಲಿ ಗೆಲವು ಸೋಲು ಒಮ್ಮೆ ಮಾತ್ರ ಸಂಭವಿಸುತ್ತವೆ. ಎರಡನೆಯ ಹಂತದಲ್ಲಿ ಚಿನ್ಹೆಗಳನ್ನು ಒರೆಸಿ ಅಥವಾ ಹೊಸ ನಕ್ಷೆ(ಮನೆ) ಬರೆದು ಹೊಸ ಆಟ ಪ್ರಾರಂಭಿಸಬೇಕು. ಪ್ರಾಥಮಿಕ ಶಾಲೆಗಳಲ್ಲಿ ಪಾಟಿ ಕಡ್ಡಿಯ ಬಳಕೆ ತಪ್ಪಿಹೋಗುತ್ತಿದೆ. ಪರಿಸರ ಸ್ನೇಹಿಯಲ್ಲದ ಪೆನ್ನು ಪಟ್ಟಿಯ ಬಳಕೆ ಹೆಚ್ಚಾಗಿದೆ. ಪಾಟಿ ಕಡ್ಡಿಯ ಈ ಆಟವನ್ನು ಉಳಿಸಲು ನಾವೇನು ಮಾಡಬಹುದು? ದಾರಿ ಇದೆ. ಮನೆಯಲ್ಲೊಂದು ಪಾಟಿ ಕಡ್ಡಿಯ ಸೆಟ್ ಇರುವಂತೆ ಪಾಲಕರು ಗಮನಿಸುವದು ಪ್ರಯೋಜನಕಾರಿಯಾಗಿದೆ. ಆಡಲು ಸುಲಭವಾದ ಕಡಿಮೆ ಖಚರ್ಿನ ಈ ಆಟ ಮನೆಮನೆಗಳಲ್ಲಿ ಶಾಲೆಗಳಲ್ಲಿ ಪುನರುಜ್ಜೀವನಗೊಳ್ಳಲಿ. ಪಾಟಿ ಕಡ್ಡಿ ಬಳಸಿ ಆಡಬಹುದಾದ ಈ ಆಟವನ್ನು ನಿಮ್ಮ ಸುತ್ತಮುತ್ತ ನೀವು ಪರಿಚಯಿಸಬಹುದಲ್ಲವೇ 





No comments:

Post a Comment