Tuesday 19 June, 2012

ಸ್ಥಳ ನಾಮ

ಸ್ಥಳ ನಾಮ


ಕೂಡ್ಲ ಒಂದು [ಟಿಪ್ಪಣೆ] 


       ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ್ಲ  ಮತ್ತು ಅದರಿಂದ ಸಿದ್ಧಿತ ವಾದ ಶಬ್ದವನ್ನು ಅಂತ್ಯ ವಾಗಿಟ್ಟು ಕೊಂಡಿರುವ ಅನೇಕ ಸ್ಥಳ ನಾಮಗಳು ದೊರೆಯುತ್ತವೆ ಉದಾ, ಅಂಕೋಲಾದಲ್ಲಿ ,ಅಂಬಾರ ಕೋಡ್ಲ [ಡ್ಲು] ಅಂಬಾರ ಕೂಡ್ಲು ಕುಮಟಾದ ಲ್ಲಿಬಂಕಿ ಕೋಡ್ಲ[ಡ್ಲು] ಹೊನ್ನಾವರದ ಲ್ಲಿನಿರ್ವತ್ತಿ ಕೋಡ್ಲು .ಸ್ವಾದಿಯ  ಬಳಿ ಕಗ್ಗನ ಕೋಡ್ಲ ಇತ್ಯಾದಿ.  ಇಲ್ಲಿಯ ಇನ್ನು  ಕೆಲವು ಸ್ಥಳನಾಮಗಳು ಕೊಡ್ಲುಎಂಬ ವಿಶೇಷ್ಯ ಶಬ್ದವನ್ನು ಪಡೆದಿವೆ.ಉದಾ. ಸಿಂಗಾರ ಕೊಡ್ಲು .ಇದು ಸ್ವಾದಿಯ  ಹತ್ತಿರದ ಒಂದು ಊರಿನ ಹೆಸರು .ಅರಸನಿಗೆ ಸಿಂಗಾರವನ್ನು ಬಿಟ್ಟಿ ಯಾಗಿ  ಕೊಡುವಊರು ಎಂದು ಅಲ್ಲಿನ ಜನರಲ್ಲಿ  ಈ ಹೆಸರಿನ ಕುರಿತು ಐತಿಹ್ಯ ವೊಂದು ಹುಟ್ಟಿಕೊಂಡಿದೆ.  ಬಂಕಿ ಕೋಡ್ಲವನ್ನು ಬೆಂಕಿಕೊಡುವ ಊರು ಎಂದು ಅಥರ್ೆಸಿರುವದೂ ಉಂಟು.ಆದರೆ ಇದುಒಪ್ಪುವ ಮಾತಲ್ಲ. .. ಊ&ರಣ;ಓ ಆಗುವದು ಕನ್ನಡದ ವೈಶಿಷ್ಟ್ಯ .,ಮತ್ತು  ಹಲವು ಬಾರಿ ಅತ್ಯಂತ ಸುಲಭವಾಗಿ ಅಂಕೋಲೆಯ ನಾಡವರ ಭಾಷೆಯಲ್ಲಿ ಊ&ರಣ;ಓ ಅಗುತ್ತದೆ. ಈ ಭಾಷೆಯ ಸಂಪರ್ಕದಲ್ಲಿರುವ  ಊರಾದ ಬಂಕಿ ಕೂಡ್ಲವು ಬಂಕಿ ಕೋಡ್ಲ ಆಗಿದೆ. ಹಾಲಕ್ಕಿ ಒಕ್ಕಲ ಭಾಷೆಯಲ್ಲಿ ಊ&ರಣ; ಓ ಆಗುವ ಪ್ರಕ್ರಿಯೆ ವಿರಳ  ಅಂಬಾರ ಕೂಡ್ಲಇದು  ಈಭಾಷೆಯ ಹಾಗೂ ಇತರ ಭಾಷೆಯ ಸಂಪರ್ಕದಲ್ಲಿ ಕೂಡ್ಲ ಮತ್ತು ಕೋಡ್ಲು[ಡ್ಲ್] ಈ ಎರಡೂ ಶಬ್ದಗಳನ್ನು ಅಂತ್ಯದಲ್ಲಿ ಪಡೆದಿದೆ. 

       ಹಳ್ಳಿಗರು ಎರಡು ಗುಡ್ಡಗಳ  ಸಂಗಮವನ್ನು .ಕೂಡ್ಲು [ಡ್ಲ]  -ಕೂಡಲಎಂದು ಸ್ಪಸ್ಟವಾಗಿ ನಿದರ್ೆಶಿಸುವದನ್ನು ಈಗಲೂ ಕೇಳಬಹುದು. ಕೂಡಲ ಇದಕ್ಕೆ ಸಂಗಮ  ಎಂಬ ಅರ್ಥ ವಿರುವದನ್ನು ಬಸವ ಣ್ಣನವರ ವಚನದಲ್ಲಿಯ  ಕೂಡಲ ಸಂಗಮ ಎಂಬ ಕನ್ನಡ ಸಂಸ್ಕೃತ ಜೋಡು ನುಡಿಯು ಸೂಚಿಸುತ್ತದೆ. ಸ್ವತಂತ್ರ ಸ್ಥಿತಿಯಲ್ಲಿ ಕೂಡ್ಲವು ತನ್ನ ಮೂಲ ಅರ್ಥಕ್ಕೆ  ಮತ್ತುಶಬ್ದ ರೂಪಕ್ಕೆ] ಧಕ್ಕೆಯನ್ನು ಹೊಂದಿಲ್ಲ.ಉದಾ.ಹೊನ್ನಾವರದ ಕೂಡ್ಲ. ಆದರೆ ವಿಶೇಷಣದ ಜೊತೆಯಲ್ಲಿದ್ದಾಗ ಊ&ರಣ;ಓಆಗುವದನ್ನು ಗಮನಿಸ ಬಹುದು ಕೂಡ್ಲು, ಕೂಡ್ಲ ಕೂಡಲ, ಕೊಡ್ಲು,ಕೋಡ್ಲ[ಡ್ಲು]ಇವುಒಂದೇ ಮೂಲದವು.  ಹಾಗೂ ಇವುಗಳ ಮೂಲ ರೂಪವು ಕೂಡ್ಲ ,ಕೂಡಲ ಆಗಿದ್ದು ಕೊಡ್ಲು, ಕೋಡ್ಲ[ಡ್ಲು]  ಗಳಿಗೆ  [ಎರಡು ನದಿಗಳು, ಗುಡ್ಡಗಳು] ಸಂಧಿಸುವ ಸ್ಥಳ ಅಥವಾ ಸಂಗಮವೆಂಬ ಅರ್ಥವು ಹೆಚ್ಚು ಸಮಂಜಸವಾಗಿದೆ. ಸ್ಥಳ ನಾಮಾಸಕ್ತರು ಇಂತಹ  ಶಬ್ದಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸ ಬಹುದಲ್ಲವೇ?

ದಿನಾಂಕ: 19-11-2010    


No comments:

Post a Comment