Tuesday 31 July, 2012


  ಹವ್ಯಕರ ಕತೆಗಳು - ಚಿತ್ರಾಟೆ ಕಾಳಣ್ಣಾ
   

          ವಂದೂರ್ನಲ್ಲಿ ವಂದ್ ಗವ್ಡಾಯಿದ್ದಿದ್ದಾ. ಅಂವ್ನ ಹತ್ರಾ ವಂದ್ ಯತ್ನ ಜೋಡಿದ್ದಿತ್ತು. ಯಾರೂ ನೇಗ್ಲ ಹಿಡ್ದೇ
ಗದ್ದೆಯಾ ಆ ಯೆತ್ತು ಗೆದ್ದೆ ಹೂಡ್ತಿತ್ತು. ಅಂವಂಗೆ ಚಲೋ ಆಗ್ತಿತ್ತು. ವಂದಿನಾ ಅಂವಾ ಯೆತ್ ತೆಕ್ಕಂಡಿ ಗದ್ದೆಗೋದಾ. ಹೂಡೂಲ್ ಬಿಟ್ಟಿಕ್ಕಿ ಮನೆಗ್ ಬಂದಾ. ಅದೇ ಹೊತ್ತಿಗೆ ಅರ್ಸಾ ಪ್ರದಾನಿ ಅಲ್ಲಿಗೆ ತಿರ್ಗಾಡತ್ನ ಬಂದಿದ್ದೊ. ಅವ್ಕೊಕೆ ಆಶ್ಯಾತು. ಸುಮ್ಮಂಗೆ ಯೆತ್ ಹೊಡ್ಕೊಂಡ್ ನೆಡದ್ದೊ.ಗವ್ಡಾ ಸುಮಾರ್ ಹೊತ್ನಮೇಲೆ ಬಂದ್ ನೋಡ್ತಾ.ಯೆತ್ತೆ ಇಲೆ. ಅದ್ಯಾರೋವಾ ಅಂದೊ.``ಯೀಗ್ ಮಾತ್ರಾ ಅರ್ಸಾ ಹೊಡ್ಕಂಡ್ ಹೋಯ್ದಾ''. ಹೇಳಿ. ಅಂವಂಗೆ ಬಾಳ್ ಬೆಜಾರಾತು. ರಾತ್ರಿಡಿ ವರ್ಕ್ವೇ ಬಂದಿಲ್ಲೆ. ಅವಂಗೆ ಕಯ್ ಮುರ್ದಾಂಗಾತು. 

ಚಿತ್ರಾಟೆ ಕಾಳಣ್ಣಾ ವಂದ್ ಮುಕೆಲಿ ಹೊಕ್ಕಂಡಿ ``ಗವ್ಡಾ ಗವ್ಡಾ ಯೆಂತಾ ಆತು? ''ಕೇಳ್ತು ಅಂವಾ ತಾ ಗೆದ್ದೆಲಿ ತನ್ ಯೆತ್ ಬಿಟ್ಟಿಕ್ಕಿ ಬಂದಿದ್ದೆ. ಅರ್ಸಾ ಪ್ರದಾನಿ ಬಂದಿದ್ವಡಾ. ಅವ್ಕೊ ಯೆತ್ನ ಜೋಡಿ ಹೊಡ್ಕಂಡ ನೆಡದ್ವಡಾ. ಹೇಳ್ತಾ. ಆಗಾ ಚಿತ್ರಾಟೆ ಕಾಳಣ್ಣಾ ಕೇಳ್ತು. ``ಹೀಂಗಾತಾ? ನಾ ತತ್ತೆ ನಿನ್ ಎತ್ನಾ'' ಅಂತು. ಆಂ! ``ನಿನ್ನತ್ರಂತೂ ಆಗ್ತು !''ಅಂದಾ ಗೌಡ. 

``ನೋಡು ನಾಡ್ದೀಗ್ ಬೆಳಗಪ್ಪಲ್ಲಿವರೆಗೆ ನಿನ್ ಯೆತ್ತು ಕೊಟ್ಗೆಲಿದ್ದು ಹೇಳ್ ತೆಳ್ಕೊ ಅಂತು. ಚಿತ್ರಾಟೆ ಕಾಳಣ್ಣಾ. ಮರ್ದಿನಾ ರಾತ್ರೆ ಚಿತ್ರಾಟೆ ಕಾಳಣ್ಣಾ ಅರ್ಸ್ನ ಮನೆಗೆ ಹೊರ್ಟ್ತು. ದಾರಿ ಮೆಲ್ ಕೆಪ್ಯಣ್ಣಾ ಶಿಕ್ತು. 

  ``ಚಿತ್ರಾಟೆ ಕಾಳಣ್ಣಾ ಚಿತ್ರಾಟೆ ಕಾಳಣ್ಣಾ ಯೆಲ್ಲೀಗ್ ಹೋಗ್ತೇ'' ಕೇಳ್ತು. ``ಅರ್ಸ್ನ ಮನೆಗೆ ಹೋಗ್ತೇ ಗವ್ಡ್ನ ಯೆತ್ ತತ್ತೇ ''ಅಂತು. 

  `` ನಾನೂ ಬರ್ಲೋ ''ಕೇಳ್ತು ಕೆಪ್ಯಣ್ಣಾ `ಹೂ ನೀನೂ ಬಾ' ಅಂತು. ಚಿತ್ರಾಟೆ ಕಾಳಣ್ಣಾ .ಚಿತ್ರಾಟೆ ಕಾಳಣ್ಣಾ ಕೆಪ್ಯಣ್ಣಾ ಮುಂದೋಗ್ತೊ.

ಹಿಂಗೇ ಮುಂದೋಗ್ತಿರಾಕಾರೆ ದೊಣ್ಯಣ್ಣಾ ಶಿಕ್ತು.``ಚಿತ್ರಾಟೆ ಕಾಳಣ್ಣಾ, ಕೆಪ್ಯಣ್ಣಾ ಯೆಲ್ಲಾ ಯೆಲ್ಲೀಗ್ ಹೋಗ್ತ್ರೇ'' ಕೇಳ್ತು. ದೊಣ್ಯಣ್ಣಾ
`` ಅರ್ಸ್ನ ಮನೆಗೆ ಹೋಗ್ತೊ ಗವ್ಡ್ನ ಯೆತ್ ತತ್ತೊ'' ಅಂತು ಚಿತ್ರಾಟೆ ಕಾಳಣ್ಣಾ.`` ನಾನೂ ಬರ್ಲೋ'' ಕೇಳ್ತು ದೊಣ್ಣಣ್ಣಾ. ``ಹೂ ನೀನೂ ಬಾ'' ಅಂತು. ಚಿತ್ರಾಟೆ ಕಾಳಣ್ಣಾ . 
ಚಿತ್ರಾಟೆ, ಕಾಳಣ್ಣಾ, ಕೆಪ್ಯಣ್ಣಾ ,ದೊಣ್ಯಣ್ಣಾ ಮುಂದೋಗ್ತೊ. 

ಮುಂದೋಗ್ನಿ ರಾಕಾರೆ ಹಾವಣ್ಣಾ ಶಿಕ್ತು. ಚಿತ್ರಾಟೆ ಕಾಳಣ್ಣಾ, ಕೆಪ್ಯಣ್ಣಾ ದೊಣ್ಯಣ್ಣಾ ಯೆಲ್ಲಾ ಯೆಲ್ಲೀಗ್ ಹೋಗ್ತ್ರೇ ಕೇಳ್ತು. ಹಾವಣ್ಣಾ 

  ``ಅರ್ಸ್ನ ಮನೆಗೆ ಹೋಗ್ತೊ ಗವ್ಡ್ನ ಯೆತ್ ತತ್ತೊ'' ಅಂತು. ಚಿತ್ರಾಟೆ ಕಾಳಣ್ಣಾ ನಾನೂ ಬರ್ಲೋ ಕೇಳ್ತು ಹಾವಣ್ಣಾ
``ಹೂ ನೀನೂ ಬಾ ''ಅಂತು ಚಿತ್ರಾಟೆ ಕಾಳಣ್ಣಾ.  ಚಿತ್ರಾಟೆ ಕಾಳಣ್ಣಾ, ಕೆಪ್ಯಣಾ, ದೊಣ್ಯಣ್ಣಾ, ಹಾವ ಣ್ಣಾ 
ಮುಂದೋಗ್ತೊ. 

   ಹಿಂಗೇ ಮುಂದೋಗ್ತಿರಾಕಾರೆ ಹಾಂತೆಯಣ್ಣಾ ಶಿಕ್ತು. ಚಿತ್ರಾಟೆ ಕಾಳಣ್ಣಾ, ``ಕೆಪ್ಯಣ್ಣಾ ದೊಣ್ಯಣ್ಣಾ ಹಾವಣಾ ಯೆಲ್ಲಾ ಯೆಲ್ಲೀಗ್ ಹೋಗ್ತ್ರೇ ''ಕೇಳ್ತು. ಹಾಂತೆಯಣ್ಣಾ 

   ``ಅರ್ಸ್ನ ಮನೆಗೆ ಹೋಗ್ತೊ ಗವ್ಡ್ನ ಯೆತ್ ತತ್ತೊ'' ಅಂತು. ಚಿತ್ರಾಟೆ ಕಾಳಣ್ಣಾ ನಾನೂ ಬರ್ಲೋ ಕೇಳ್ತು ಹಾಂತೆಯಣ್ಣಾ 

`  `ಹೂ ನೀನೂ ಬಾ'' ಅಂತು. ಚಿತ್ರಾಟೆ ಕಾಳಣ್ಣಾ
   ಚಿತ್ರಾಟೆ ಕಾಳಣ್ಣಾ ,ಕೆಪ್ಯಣ್ಣಾ ,ದೊಣ್ಯಣ್ಣಾ, ಹಾವ ಣ್ಣಾ ,  ಹಾಂತೆಯಣ್ಣಾ ಯೆಲ್ಲಾ ಮುಂದೋಗ್ತೊ.

      ಮುಂದೋಗ್ತಿ ರಾಕಾರೆ ಕಟ್ಟೆರ್ನ ಸಾರಿ ಶಿಕ್ತು. ``ಚಿತ್ರಾಟೆ ಕಾಳಣ್ಣಾ ಕೆಪ್ಯಣ್ಣಾ ದೊಣ್ಯಣ್ಣಾ ಹಾಂತೆಯಣ್ಣಾ ಯೆಲ್ಲಾ ಯೆಲ್ಲೀಗ್ ಹೋಗ್ತ್ರೇ? ''ಕೇಳ್ತು ಕಟ್ಟೆರ್ನಸಾರಿ .
``ಅರ್ಸ್ನ ಮನೆಗೆ ಹೋಗ್ತೊ ಗವ್ಡ್ನ ಯೆತ್ ತತ್ತೊ'' ಅಂತು ಚಿತ್ರಾಟೆ ಕಾಳಣ್ಣ .

``ತಂಗೋವು ಬತ್ತೊ'' ಅಂತು ಕಟ್ಟೆರ್ನ ಸಾರಿ. ``ಹೂ ಬನ್ನಿ ''ಅಂತು ಚಿತ್ರಾಟೆ ಕಾಳಣ್ಣಾ. ಹೀಂಗೆಯಾ ಚಿತ್ರಾಟೆ ಕಾಳಣ್ಣಾ ,ಕೆಪ್ಯಣ್ಣಾ ,ದೊಣ್ಯಣ್ಣಾ ,ಹಾಂತೆಯಣ್ಣಾ ಕಟ್ಟೆರ್ನ ಸಾರಿ ಯೆಲ್ಲಾ ವಟ್ಗೂಡ್ಕಂಡಿ ಅರ್ಸ್ನ ಮನೆಗ್ ಹೋದೊ. 

ದೊಣ್ಯಣ್ಣಾ ಕದ್ನ ಮುಕೆಲಿ? ಹೊಕ್ಕಣ್ತು. ಕೆಪ್ಯಣ್ಣಾ ವಲೆ ಬೂದಿಲಿ ಹೊಕ್ಕಣ್ತು. ಹಾಂತೆ ದೀಪ್ದ ಗುಡ್ನದ್ ಕೆಳ್ಗೆ ಕೂತ್ಗಣ್ತು. ಕಟ್ಟೆರ್ನ ಸಾರಿ ತೆಂಗ್ನ ಮರದ್ ಕೆಳ್ಗೆ ಇದ್ಗಣ್ತು. ಚಿತ್ರಾಟೆ ಕಾಳಣ್ಣ ಅವ್ಕೊ ಗೆಲ್ಲಾವಾ ಮೊದ್ಲೇ ಯೆಂತೆಂತಾ ಮಾಡೊ ಯೆಲ್ಲಾವಾ ಹೇಳ್ಕೊಟ್ಟಿಕ್ಕಿತ್ತು. 

ಅರ್ಸ್ನ ಹೆಣ್ತಿ ಕದಾ ಹಾಕೂಲೆ ಹೇಳಿ ಬಂತು. ಬಂದದ್ದೆ ತಡಾ ದೊಣ್ಯಣ್ಣಾ ಬಡಾ ಬಡಾ ಬಡಾ ಬಡಾ ಬಡತ್ತು. ಅದು ಯಿಲ್ಲಿ ಯಾರೋ ಬಂದಿಕಿದೊ ಹೇಳಿ ದೀಪಾ ದೊಡ್ಡಾ ಮಾಡೂಲೋತು. ಹಾಂತೆ ಪಟಕ್ನೆ ದೀಪಾ ನಂದ್ಸಾಕ್ತು. ಹಾಂಗೆಯಾ ಅರ್ಸಾ ಮಂಚ್ದಿಂದಾ ಕೆಳಗಿಳ್ಯೊ ನೋಡ್ದಾ. 

ಕಾಲ್ ಕೆಳ್ಗೆ ಯಿಟ್ಟಿದ್ದೇ ತಡಾ. ಹಾವಣ್ಣಾ ಕಾಲ್ಸುತ್ತಾಯ್ಕಂಬುಡ್ತು. ಅಂವಾ ಅಯ್ಯಯ್ಯೋ ಹೇಳಿ ಕೂಗ್ದಾ. ಅಂವ್ನ ಹೆಣ್ತಿ ದೀಪಾ ಹಚ್ದಾಂಗೆ ಹಾತೆ ನಂದ್ಸ್ ನಂದ್ಸ್ ಹಾಕ್ತು. ಅಂತೂವಾ ಹೆಂಗೋ ಮಾಡ್ ಅಂವಾ ಕಾಲಿಂದಾ ಹಾವ್ ಬಿಡಸ್ಕಂಡಾ. ಮನಿ ಕಂಡಾ. 

ಮದ್ರಾತ್ರ್ ಗೆಟ್ ಅಂವಂಗೆ ಉಚ್ ಹೊಯ್ಯೂಲ್ ಬಂತು. ಯೆದ್ದಿ ಹೆರಂಗೋದಾ. ಕಟ್ಟೆರ್ನಸಾರಿಯೆಲ್ಲಾ ವಟ್ಗೂಡ್ಕಂಡಿ ಕಾಲ್ ಕಚ್ ಕಚ್ ತೆಗೆದ್ಬುಡ್ತು. ಹಾಂಗೆ ಕುಡಿಕತ್ತೇ ಅರ್ಸ ವಳಂಗೆ ವೋಡ್ತ್ನೆ ಬಂದಾ. ಬಾಗ್ಲಲ್ಲಿ ದೊಣ್ಯಣ್ಣಾ ಅವ್ನ ತಲ್ ತಲೆಮೆಲ್ ಕೊಡ್ತು. ಅಂತೂ ಮಂಚಕ್ಕೋದಾ. 

ಅಸ್ಟೊತ್ತಿಗೆ ಬೆಳಗುಂಜಾಮಾಗತ್ನಾ ಬಂದಿತ್ತು. ಅರ್ಸ್ನ ಹೆಣ್ತಿ ಬೆಂಕಿ ವಟ್ಟೂಲೆ ಹೇಳಿ ವಲೆ ಬಳಿಗೋತು. ಬೂದಿ ಮೊಗುಲೆ ಹೇಳಿ; ಮೊಕಾ ಕೆಳ್ಗ್ ಮಾಡ್ಕಂಡಿ ವಲೆಗ್ ಕಯ್ ಹಾಕ್ತು. ಕೆಪ್ಯಣ್ಣಾ ತಡಾ ಮಾಡಿದ್ದೇ, ಯಿಲ್ಲೆ ಬುಸಕ್ ಬುಸಕ್ನೆ ಬೂದಿ ಮೊಕಕ್ಕೆ ತೋಕ್ತು. ಕಣ್ಣೀಗೆಲ್ಲಾ ಬೂದಿ ಮುಚ್ಚಿ ಕಣ್ ವಡೂಲೆ ಆಯ್ದಿಲ್ಲೆ. ಆಗಾ ರಾಜಾಯೆಂತಕ್ಕೆ ಹಿಂಗೆಲ್ಲಾ ಆಪ್ಲೆ ಹಣ್ಕೋತನೊ? ಹಿಂಗೆಲ್ಲಾ ಮಾಡ್ಡೋರು ಯಾರು? ಹೇಳಿ ಹಲಬುಲ್ ಹಣಕ್ ಬುಟ್ಟಾ. ಆಗಾ ಚಿತ್ರಾಟೆ ಕಾಳಣ್ಣಾ ಮುಕೆಲಿದ್ದದ್ದು ದೊಡ್ಡಕ್ಕೆ ಅರ್ಸಾ ಅರ್ಸಾ ಗವ್ಡ್ನ ಮನೆಯೆತ್ತು ಬೇಕೋ? ಈಗ ಸಾಕೋ ಹೇಳಿ ಕೇಳ್ತು. ಆಗಾ ಅರ್ಸು ಮಾರಾಯ್ರಾ ಯೆತ್ತೂ ಬೆಡಾ ಗಿತ್ತೂ ಬೆಡಾ ಜೀಂವಾ ವಂದ್ ಯಿರ್ಸ್ ಕಂಡಿ ಯೆತ್ನ ಸಂಗ್ತಿಗೆ ನಮ್ ಕೊಟ್ಗೆದ್ ಮತ್ ನಾಕ್ ಜೋಡಿ ಬೇಕಾದ್ರೂ ಕೊಡ್ತೆ. ತೆಕಂಡೋಗಿ. ಯಿನ್ ಮಾತ್ರ ಗವ್ಡ್ನ ಯೆತ್ನ ಸುದ್ದೀಗ್ ಬತ್ನಿ ಲ್ಯಾ ''ಅಂದಾ. ಕೊಟ್ಗೆಗ್ ಹೋಗಿ ತನ್ ಕೊಟ್ಗೆಲಿದ್ ನಾಲ್ಕ್ ಯೆತ್ನ ಜೋಡಿ ಗವ್ಡ್ನ್ ಮನೆ ಯೆತ್ತು ಯೆಲ್ಲಾ ಬಿಟ್ಟಾಕ್ದಾ. ಚಿತ್ರಾಟೆ ಕಾಳಣ್ಣಾ ತನ್ ಪಂಗ್ಡಾಯೆಲ್ಲಾ ಕಟ್ಗಂಡಿ ಯೆತ್ ಹೊಡ್ಕಂಡಿ ಗವ್ಡ್ನ್ ಮನೆ ಕೊಟ್ಗೆಗೋತು. ಕಟ್ಟಾಕ್ತು. ಬೆಳ್ಗಾದ್ಕೂಡ್ಲೆಯಾ ಗವ್ಡ್ನ್ ಹೆಣ್ತಿ. ``ಅತೊ ಯೆತ್ತೆಲ್ಲಾ ಬಂದಿಕಿದಕು ಹುಲ್ಲಾಕ್ರೋ'' ಅಂತು. ಗವ್ಡಾ ವೋಡೋಗ್ ನೋಡ್ತಾ. 

ಹವ್ದು ಸಂಗ್ತಿಗೆ ಚಲೋ ಚಲೋ ಮತ್ ನಾಲ್ಕು ಯತ್ನ ಜೋಡಿದ್ದು. ಅಂವಂಗೆ ಸಂತೋಶಾತು    ``ಯಾರಾಯಿಕ್ಕು ಯೀ ಕೆಲ್ಸಾ ಮಾಡ್ದೋರು?'' ಹೇಳೀ ಹೇಳ್ತ್ನೆಯಿರಾಕಾರೆ ಚಿತ್ರಾಟೆ ಕಾಳಣ್ನ ಪಂಗ್ಡಾ ಬಂತು. ಗವ್ಡ್ಂಗೆ ಚಿತ್ರಾಟೆ ಕಾಳಣ್ನ ಕೆಲ್ಸಾ ಇದು ಹೇಳಿ ತೆಳತ್ತು. ನಾಳೆಗ್ ನಮ್ಮನೆಗೆ ಊಟಕ್ ಬನ್ನಿ ಪಾಯ್ಸಾ ಮಾಡ್ ಬಡಸ್ತೆ ಹೇಳ್ದಾ. ಮರ್ದಿನಾ ಯೆಲ್ಲಾ ಊಟಕ್ ಬಂದೊ. ಪಾಯ್ಸಾ ಉಂಡ್ಕಂಡಿ ಸಂತೋಶ್ದಿಂದಾ ಮನೆಗೊದೊ. 

No comments:

Post a Comment