Monday 23 July, 2012

ಪ್ರತಿಕ್ರಿಯೆ


ಭಾರತೀಯ ಸಂಸ್ಕೃತಿ ಮತ್ತು  ಮುಜರಾಯಿ ಇಲಾಖೆಯ ಡಂಭಾಚಾರದ ಪೂಜೆ.


       ಭಾರತೀಯ ಸಂಸ್ಕೃತಿಯಲ್ಲಿ ಪೂಜೆಗೆ ಸ್ಥಾನವಿದೆ ನಿಜ. ಅದು ಅಂದು ಮುಗ್ಧ ಮಾನವ ತನ್ನ ಮನಸ್ಸಿನ ತುಮುಲ ನಿವಾರಣೆಗೆ ಕಂಡುಕೊಂಡ ಒಂದು ಸುಲಭ ಮಾರ್ಗ. ತನ್ನ ತೋಟದಲ್ಲಿ ಬೆಳೆದ ಒಂದು ಹಣ್ಣು ಕಾಯಿ. ಅದೂ ಇಲ್ಲದಿದ್ದರೆ ನಾಲ್ಕು ಗರಿಕೆ. ಪತ್ರೆ. ಹೂ. ಅ¦ರ್ಪಿಸಿ  ಕೈ ಮುಗಿದು ಕ್ಷಣಕಾಲ ದೇವರನ್ನು ಧ್ಯಾನಿಸಿ, ಅಂತರಂಗದಲ್ಲಿ ಆ ದೇವರೊಂದಿಗೆ ಮಾತಾಡಿ ಕೃತಜ್ಞತಾ ಭಾವದೊಂದಿಗೆ ಆತ್ಮೀಯವಾಗಿ ಕೈಮುಗಿದು ಮನದ ದುಗುಡವನ್ನು ಇಳಿಸಿಕೊಂಡು ಹಿಂತಿರುಗುವದು  ಭಕ್ತನ ಪ್ರಕೃತಿ ಸಹಜ ಪೂಜೆಯ ಒಂದು ಕ್ರಮ.  ಆದರೆ ಕಾಲ ಕ್ರಮೇಣ ದೇವರು ಮತ್ತು ಭಕ್ತನ ನಡುವೆ ಮಧ್ಯವರ್ತಿಗಳ ಪ್ರವೇಶದೊಂದಿಗೆ ಪೂಜೆಯಲ್ಲಿ ಡಂಭಾಚಾರ ದುಂದು ವೆಚ್ಚ ಹೆಚ್ಚಾಯಿತು. ಮಂತ್ರಿಗಳು ರಾಜಾಜ್ಞೆಯ ಮೂಲಕ ಕೋಟಿ ಕೋಟಿ ವ್ಯಯಿಸಿ ಪೂಜೆ ಮಾಡಿಸುವದು ಡಂಭಾಚಾರದ ಅಜ್ಞಾನದ ಪರಮಾವಧಿ. ಇದನ್ನು ಸಂಸ್ಕೃತಿ ಎನ್ನದಿರಿ.

     ಇತ್ತೀಚಿನ ದಿನಗಳಲ್ಲಿ ದೇವರ ಹೆಸರಿನಲ್ಲಿ ನಡೆಯುವ ಇಂಥ ಪೂಜೆಗಳನ್ನು ಭಾರತೀಯ ಸಂಸ್ಕೃತಿಯ ದ್ಯೋತಕವೆಂದು ತೋರುವದಕ್ಕೆ ನಾಚಿಕೆಯಾಗುತ್ತದೆ. ಈ ಪೂಜೆಗಳು ಸಂಸ್ಕೃತಿಯ ದ್ಯೋತಕಗಳಲ್ಲ ವಿಕೃತಿಗಳು. ಸಂಸ್ಕೃತಿಯ ಬಲಿಗಂಬಗಳು. 
                     
    ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿಯ ಸಂಪತ್ತನ್ನೆಲ್ಲ ಹೊರ ತಂದು ಬರಗಾಲದ ಕಾಮಗಾರಿಗೆ. ಸರಿಯಾದ ಗೋಡೆಯಿಲ್ಲದ ಮನೆಯಲ್ಲಿ ವಾಸಿಸುತ್ತ ಮನೆಯ ಗೋಡೆ ಬಿದ್ದು ಸಾಯುವವರನ್ನು ತಡೆಯುವದಕ್ಕೆ. ಕುಡಿಯುವ ನೀರನ್ನು ಒದಗಿಸುವದಕ್ಕೆ, ಹೆಂಗಸರು ಮಕ್ಕಳು ವೃದ್ಧರು. ರೋಗಿಗಳಿಗಾಗಿ ಶೌಚಾಲಯ ನಿರ್ಮಾಣಕ್ಕೆ ವಿನಿಯೋಗಿಸಲು ಇದು ಸಕಾಲ. ಜನ ದೇವರ ಬಳಿ ಠೇವಣಿಯಾಗಿ ಕೊಟ್ಟ ಈ ದುಡ್ಡು ಜನಕ್ಕೆ ಮುಟ್ಟಲಿ. ನಿಮ್ಮ ವರುಣ ಮೆಚ್ಚುವ ಇಂಥ ಕೆಲಸ ಮಾಡಿ. ಇದೇ ನಿಜವಾದ ಪೂಜೆ .   





No comments:

Post a Comment