ಕ್ಷೌರಿಕರ ಗಿಡ - Saloon Plant
ಇಸಮುಂಗಲಿ ಈ ಹೆಸರಿನಲ್ಲಿರುವ ಇಸ ಶಬ್ದವನ್ನು ಗಮನಿಸಿರಿ. ಇಸ ಎಂದರೆ ಕಹಿ. ಕಂಯ್ ಕಂಯ್ ಇಸಾ, ಎಂಬ ಕರಾವಳಿಯಲ್ಲಿ ಬಳಕೆಯಲ್ಲಿರುವ ಪಡೆ ನುಡಿಯನ್ನು ಇಲ್ಲಿ ಗಮನಿಸಬಹುದು . ಕಹಿರುಚಿಯ ಎಲೆ ಕಾಯಿ ಹಣ್ಣು ಗಳನ್ನು ಕುರಿತು ಬಯಲು ಸೀಮೆಯ ಜನ 'ಏ ಭಾಳ ಇಸಾ ಐತ್ರಿ ತಿನ್ಬೆಡ್ರಿ'.ಎನ್ನುವ ಮಾತನ್ನು ನೀವು ಕೇಳಿರುತ್ತೀರಿ.ಇಲ್ಲಿ ಇಸಾ ಇದರ ಅರ್ಥ ವಿಷವೆಂದಲ್ಲ. ಆದರೆ ಹಳೆಯ ಪುಸ್ತಕಗಳಲ್ಲಿ, ಅಂತರ್ಜಾಲ ದಾಖಲೆಗಳಲ್ಲಿ ಇದು Poison
bulb ಆದರೆ ಕ್ಷೌರಿಕರ ಅಂಗಡಿಯ ಮುಂದೆ ಕಾಣುವ Crinum ಗಿಡವನ್ನು ಮೇಲೆ ತಿಳಿಸಿದಂತೆ ಅಥವಾ ಬೇರೆ ಬಗೆಯಾಗಿ ಮನೆ ಮದ್ದನಲ್ಲಿ ಬಳಸಿರುವದು ತಿಳಿದು ಬಂದಿಲ್ಲ. ಇಸ ಮುಂಗಲಿಯ ಎಲೆ ದಟ್ಟ ಹಸಿರು, ಮತ್ತು ಅಗಲ. ಆದರೆ ಕ್ಷೌರಿಕರ ಅಂಗಡಿಯ ಮುಂದೆ ಕಾಣುವ Crinum ಗಿಡದ ಎಲೆಯು ಇಸಮುಂಗಲಿಯ ಎಲೆಯಂತಿಲ್ಲ. ಇದು ಸಪುರ. ಗಿಳಿಹಸುರು.. ಇದರ ಎಲೆಯ ಉದ್ದದ ಗುಂಟ ಉದ್ದದ ಬಿಳಿ ಹಸುರು ಬಣ್ಣ ಮಿಶ್ರಿತ ಗೆರೆಗಳು ಕಾಣುತ್ತವೆ.. ತುಂಬ ಮರಿಯೊಡೆದು ಬೆಳೆಯುವ ಗುಣ ಇದಕ್ಕಿದೆ.
ಈ ಗಿಡವನ್ನು ತಮ್ಮ ಅಂಗಡಿಯ ಮುಂದೆ ನೆಟ್ಟ ಈಗಿನವರಿಗೆ ಇದರ ವಿವರ ಗೊತ್ತಿಲ್ಲದಿದ್ದರೂ, ಹಳೆಯ ತಲೆಮಾರಿನ ಇವರ ಹಿರಿಯರು ಕಡಿದ ಗಾಯದಿಂದ ಒಸರುವ ರಕ್ತನಿಲ್ಲಿಸುವ ಇದರ ಅಮೂಲ್ಯ ಗುಣವನ್ನು ಅರಿತಿದ್ದಿರಬಹುದು. ಹಳೆಯ ತಲೆಮಾರಿನ ಇವರ ಹಿರಿಯರು ಹೊತ್ತಿಗೆ ಸರಿಯಾಗಿ ಇದು ಕೈಗೆ ಸಿಗಲಿ ಎಂಬ ಉದ್ದೇಶದಿಂದ ತಮ್ಮ ಅಂಗಡಿಯ ಅಂಗಳದಲ್ಲಿಇದನ್ನು ಪೋಷಿಸಿ ಕೊಂಡಿದ್ದರೆನ್ನಬಹುದು.ಆದರೆ ಟ್ಯೂಬುಗಳಲ್ಲಿ ರಕ್ತನಿರೋಧಕ, ಗಾಯ ಮಾಯಕ, ಮದ್ದುಗಳು ಆಧುನಿಕ ಔಷಧದಂಗಡಿಗಳಿಗೆ ಬಂದ ಮೇಲೆ ಈ ಗಿಡದ ಪ್ರಯೋಜನ ಮುಂದಿನವರಿಗೆ ಮರೆತು ಹೋಯಿತು. ಹೆಸರೂ ಮರೆಯಿತು.ಆದರೂ ತಮ್ಮ ಹಿರಿಯರ ಜ್ಞಾನದ ಆಸ್ತಿಯ ಕುರುಹಾಗಿ ಇವರು ಈ ಗಿಡವನ್ನು ದಕ್ಷಿಣ ಕನರ್ಾಟಕದ ಕ್ಷೌರಿಕರು ಉಳಿಸಿಕೊಂಡಿರುವದು ಮೆಚ್ಚುವಂತಹದ್ದು. ಕ್ಷೌರಿಕರು ತಮ್ಮ ಅಂಗಡಿಯ ಮುಂದೆ ರಕ್ಷಿಸಿ ಕೊಂಡಿರುವ ಕಾರಣ ಈ ಗಿಡವನ್ನು. ಕ್ಷೌರಿಕರಗಿಡವೆಂದು ನೆನಪಿಟ್ಟು ಕೊಂಡಿದ್ದೇನೆ. ಅನೇಕ ಅಲಂಕಾರಿಕ ಗಿಡ ಪ್ರಿಯರು ಇದನ್ನು ತಮ್ಮ ಹೂದೋಟಗಳಲ್ಲಿ ಬೆಳೆಸಿಕೊಂಡಿದ್ದಾರೆ. ಇದು ಔಷಧ ಗಿಡವೂ ಅಹುದು ಎಂದು ತಿಳಿದಾಗ ಔಷಧ ಗಿಡ ಪ್ರಿಯರು ತಮ್ಮ ಮನೆಯ ಕುಂಡದಲ್ಲಿ ಇದಕ್ಕೆ ಸ್ಥಾನ ನೀಡಿಯಾರು.ನೆಟ್ಟವರು ಇನ್ನಷ್ಟು ಮುತುವಜರ್ಿ ವಹಿಸಿ ಇದರ ಆರೈಕೆ ಮಾಡಿಯಾರು.
ಬೆಂಗಳೂರಿನ ಕ್ಷೌರಿಕರಂಗಡಿಯ ಅಂಗಳದಿಂದಲೆ ಒಂದು ಪಿಳ್ಳೆಯನ್ನು ತಂದು ನಮ್ಮ ಮನೆಯಂಗಳದಲ್ಲಿ ನೆಟ್ಟಿದ್ದೇನೆ.ತುಂಬ ಮರಿಯೊಡೆದಿದೆ.ಇನ್ನೂ ಹೂ ಬಿಟ್ಟಿಲ್ಲ. ಹೂ ಬಿಟ್ಟಾಗ ಬರೆಯುತ್ತೇನೆ.
No comments:
Post a Comment