Wednesday, 3 April 2013

ನಮ್ಮ ಗಿಡ ಮರ ಬಳ್ಳಿಗಳು-ಮಾವಿನ ಮರ



ಮಾವಿನಮರ 
Mangifera indica Lin mango tree 
    
    ಇದು ಭಾರತ ಮೂಲದ್ದೆಂದು ತಜ್ಞರ ಅಭಿಮತ. ಭಾರತೀಯರು ಪ್ರಾಚೀನ ಕಾಲದಿಂದ ಇದನ್ನು ಬಲ್ಲರು. ಇದನ್ನು ಪವಿತ್ರ ಮರವೆಂದು ಇವರು ತಿಳಿಯುತ್ತಾರೆ. ಧಾರ್ಮಿಕ ಆಚರಣೆಗಳಲ್ಲಿ ಈ ಮರದ ತಳಿರಿಗೆ, ತಳಿರಿನ ತೋರಣಕ್ಕೆ ಸ್ಥಾನ  ಕಲ್ಪಿಸಲಾಗಿದೆ. ಹೊಸ್ತಿನ ಹಬ್ಬದಲ್ಲಿ ಮಾವಿನ ಎಲೆಯಲ್ಲಿ ಬತ್ತದ ಕದಿರು ಮತ್ತು ಪಾಂಡವರ ಹರಿಗೆಯ ಹೂವನ್ನು ಪೋಣಿಸಿ ಬಾಗಿಲಿಗೆ ತೋರಣ ಕಟ್ಟಿ ಗಂಧ ಹಚ್ಚಿ ಪೂಜಿಸುತ್ತಾರೆ. ಮದುವೆ ಗೃಹ ಪ್ರವೇಶದಂತಹ ಕಾರ್ಯಗಳಲ್ಲಿ ಪುರೋಹಿತರು ಕಲಶದಲ್ಲಿಟ್ಟ ಮಾವಿನ ತಳಿರಿನಲ್ಲಿ ತೆಂಗಿನ ಕಾಯಿಯನ್ನಿಟ್ಟು ಪೂಜಿಸುತ್ತಾರೆ. . 

    ಕವಿ ಕಾಳಿದಾಸ ಪಂಪ ಮುಂತಾದ ಕವಿಗಳು  ಮಾವಿನ ಮರವನ್ನು ತಮ್ಮ ಕಾವ್ಯಗಳಲ್ಲಿ ಹಾಡಿ ಹೊಗಳಿದ್ದಾರೆ. ಗ್ರೀಕ ದೊರೆ ಅಲೆಕ್ಸಾಂಡರನು ಇದರ ರುಚಿಯನ್ನು ಸವಿದದ್ದು ಮತ್ತು ಚೀನಾ ಪ್ರವಾಸಿ ಹುಯ್ಯೆನ್ ತ್ಸಾಂಗ ಇದನ್ನು ಕಂಡದ್ದು ಇಂಡಿಯಾದಲ್ಲಿ. ಹದಿನೇಳನೆಯ ಶತಮಾನದಲ್ಲಿ ಪಿಯಾತ್ರೊಡಾವಿಲ್ಲೆ ಶರಾವತಿಯ ನದಿಯ ಗುಂಟ ದೋಣಿಯಲ್ಲಿ ಕುಳಿತು ಸಾಗುವಾಗ ಮಾವಿನಕಾಯಿಗಳನ್ನು ಕಾಣುತ್ತಾನೆ. ಇದೊಂದು ಬಗೆಯ ಲಿಂಬುವೆಂದು ತಿಳಿಯುತ್ತಾನೆ.

     ಸಸ್ಯ ವಿಜ್ಞಾನಿಗಳು ಇದಕ್ಕೆ ತಕ್ಕ ಹೆಸರನ್ನು ಕಂಡುಕೊಂಡದ್ದು ಕನ್ನಡ ಮತ್ತು ಮಲೆಯಾಳಿ ಭಾಷೆಯಲ್ಲಿ. ಮಾವ್ಕಾಯ್ ಮಾಂಗಾಯ್ ಆಗಿ ಅದು ಮಾಂಗಿ(ಜಿ)ಫೇರಾ ಆಗಿ ಇಂಡಿಕಾ ಎಂಬ ಸಸ್ಯ ಪ್ರಬೇಧನಾಮವನ್ನು ಹೊಂದಿತು.ಮಾವು, ಭಾರತದ ರಾಷ್ಟ್ರೀಯ ಹಣ್ಣು .ಹಣ್ಣುಗಳ ರಾಜ.

      ನಮ್ಮ ನಾಡಿನಲ್ಲಿ ಕಲ್ಮಿ ಹಣ್ಣಿನ ಮರಗಳು ಜನಪ್ರಿಯವಾಗುವ ಪೂರ್ವದಲ್ಲಿ ಚಿಕ್ಕಚಿಕ್ಕ ಕಾಯಿ ಹಣ್ಣುಗಳನ್ನು ಹೊಂದಿದ ನೈಸರ್ಗಿಕವಾಗಿ ಬೆಳೆಯುವ ಕಾಡು ಮಾವಿನ ಮರಗಳು ಅಗಾಧ ಸಂಖ್ಯೆಯಲ್ಲಿದ್ದವು. ನೂರು ಅಡಿಗಳಿಗೂ ಮೀರಿದ ಎತ್ತರದ ದೈತ್ಯಾಕಾರದ ಈ ಮರಗಳನ್ನು ಕಾಣುವದೇ ಕಣ್ಣಿಗೆ ಹಬ್ಬವಾಗಿತ್ತು. ಕೇರಿಗೊಂದೆರಡು, ಊರಿಗೆ ಹತ್ತಾರು ಇಂಥ ಮರಗಳಿರುತ್ತಿದ್ದವು. 

    ಕಾಯಿಗಳು ಅಡಕೆಗಿಂತ ಚಿಕ್ಕವು ಕೆಲವು ,ಕೋಳಿ ಮೊಟ್ಟೆಯಷ್ಟು ದೊಡ್ಡವು ಹಲವು. ರುಚಿ ವೈವಿಧ್ಯ ನೂರಾರು ಸಾವಿರಾರು ಒಂದರ ರುಚಿಯಂತೆ ಇನ್ನೊಂದಿಲ್ಲ ಪ್ರತಿ ಮರಕ್ಕೊಂದು ರುಚಿ ಈ ಸಾವಿರ ಸಾವಿರ ರುಚಿಯು ನಿಮಗೆ ದೊರೆಯುವ ಸ್ಥಿತಿ ಇಂದಿಲ್ಲ. ರುಚಿಯನ್ನು ಆಕಾರವನ್ನು ಅನುಸರಿಸಿ ಮಕ್ಕಳು ಹೆಸರಿಸಿದ ಹೆಸರುಗಳು ಸಾವಿರ. ಕೋಳಿ ಮೊಟ್ಟಿ ಹಣ್ಣು, ಬೆಣ್ಣಿ ಹಣ್ಣು, ಪೇರಣ್ಣು ಓಣ್ಜಿ ಮರನ ಹಣ್ಣು, ಕಾಯ್ಬಾಗದ ಹಣ್ಣು ಮುಸ್ರ ಹಣ್ಣು, ಕರಿಗೋಟು ಬಿಳಿಗೋಟು ಕತ್ ಮರಾ ಒಂದೆರಡಲ್ಲ. ಮರಗಳ ಜೊತೆ ಈ ಹೆಸರುಗಳು ಮರೆಗೆ ಸಂದಿವೆ. ಆಗಿನ ಕಾಲದಲ್ಲಿ ಲಕ್ಷ ಲಕ್ಷ ಹಣ್ಣನ್ನು ಬಿಡುವ ಈ ಮರಗಳ ಹಣ್ಣನ್ನು ಕೊಯ್ಯುವ ಕೊಯ್ದು ಮಾರುವ ಪದ್ಧತಿಯಿರಲಿಲ್ಲ. ಈ ಹಣ್ಣುಗಳೆಲ್ಲವೂ ಊರು ಕೇರಿಯ ಮಕ್ಕಳ ಸೊತ್ತಾಗಿದ್ದವು.
         
ಈ ಮರಗಳ ನೆರಳಲ್ಲಿ ಅಂದಿನ ಮಕ್ಕಳ ಅಪೂರ್ವ ಬೇಸಿಗೆಯ ಶಿಬಿರಗಳು ನಡೆಯುತ್ತಿದ್ದವು, ಆಣೆಕಲ್ಲು ಮಳೆಯಂತೆ ತಿಂಗಳುಗಟ್ಟಲೆ ದಡಬಡ ಉದುರುವ ಮಾವಿನ ಹಣ್ಣುಗಳ ಸಂಗ್ರಹಕ್ಕಾಗಿ ಒಣ ಎಲೆ ಜಿಗ್ಗು  ಮಡಲುಗಳಿಂದ ಚಿಕ್ಕ ಚಿಕ್ಕ ಸುಮಾರು ಒಂದು ಮೊಳ ಎತ್ತರದ ಮನೆಗಳು ಅಲ್ಲಿ ನಿರ್ಮಾಣವಾಗುತ್ತಿದ್ದವು.. ಹಲವಾರು ಜನಪದ ಆಟಗಳ ಕ್ರೀಡಾಂಗಣವಾದ  ಈ ಮರಗಳ ನೆರಳು ಜಾನಪದದ ಪಾಠಶಾಲೆಯಾಗಿ ಮಾರ್ಪಡುತ್ತಿತ್ತು ಅನೇಕಾನೇಕ ಯಕ್ಷಗಾನ ಪಟುಗಳು ಇಲ್ಲಿ ತಯಾರಾಗುತ್ತಿದ್ದರು. ಆದರೆ ಕಸಿ ಮಾವುಗಳ ಆಗಮನದ ಫಲವೋ ದುಡ್ದಿನ ದುರಾಸೆಯೊ ಈ ದೇಸಿ ಮರಗಳಿಗೆ ಕೊಡಲಿ ಏಟು ಬಿತ್ತು. ಮಾವಿನ ಮರದ ನಾಟುಗಳು ಹಗುರವಾದ್ದರಿಂದ ಅವು ದೋಣಿಗಾಗಿಯೋ ಬೆಂಕಿ ಕಡ್ಡಿ ತಯಾರಿಕೆಗಾಗಿಯೋ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗಿ ಧರೆಗುರುಳಿದವು. ಮಕ್ಕಳ ಸಮೃದ್ಧ  ಅಹಾರ ಸಾಮಗ್ರಿಯ  ಮೂಲವು ಮಣ್ಣಾಗಿ ಹೋಯಿತು. ಇಂದಿನ ದಿನಮಾನದಲ್ಲಿ  ಆ ಮರಗಳಲ್ಲಿ ಕೆಲವಾದರೂ ಉಳಿದಿದ್ದರೆ ಆಹಾರ ಸಂಪತ್ತು ಉಳಿಯುತ್ತಿತ್ತು. ಪ್ರತಿ ಮರಗಳು ಹತ್ತಾರು ಸಾವಿರ ಹಣ ತರಬಹುದಾಗಿತ್ತು.

    ಮರಗಳಿಗೆ ಕಸಿಕಟ್ಟುವ ವಿಧಾನವು ಜಾರಿಗೆ ಬಂದ ಬಳಿಕ ಇನ್ನಷ್ಟು ದೇಸಿ ಮರಗಳು ನಾಪತ್ತೆಯಾದವು. ಆದರೆ ಮಾವಿನ ಹಣ್ಣುಗಳ ಉತ್ಪಾದನೆಯಲ್ಲಿ ಭಾರತವು ಅಗ್ರ ಪಂಕ್ತಿಯಲ್ಲಿಉಳಿದು ಕೊಂಡಿದೆ. ರಸಭರಿತವಾದ ನೂರಾರು ಬಗೆಯ ಕಸಿ ಹಣ್ಣುಗಳು ದೇಶ ವಿದೇಶಗಳಲ್ಲಿ ಮಾರಾಟಗೊಳ್ಳುತ್ತವೆ.
       
ಮಾವಿನ ಹಣ್ಣು ದೇಹಕ್ಕೆಬೇಕಾಗುವ ಜೀವಸತ್ವಗಳ ಗಣಿಯಾಗಿದೆಯಷ್ಟೇ ಅಲ್ಲ ,ದೇಹದ  ರೋಗ ನಿವಾರಕ ಮತ್ತು  ಪ್ರತಿಬಂಧಕ ಗುಣವನ್ನು ಹೊಂದಿದೆ. 
ಮಾವಿನ ಮರದ ಎಲೆ ಚಿಗುರು ಹೂವುಕಾಯಿ ಹಣ್ಣು ಗೊರಟು ಹಣ್ಣಿನಸಿಪ್ಪೆ ಮರದ ಸಿಪ್ಪೆ ಮರದ ಅಂಟುಗಳೆಲ್ಲವೂ ಔಷಧ ಪರಿಕರಗಳಾಗಿವೆ.  ಹೂವು ಮಿಡಿಕಾಯಿ ಸೊನೆ ಹಣ್ಣು ಗೊರಟುಗಳು ಅಡುಗೆಯ ಪರಿಕರಗಳಾಗಿವೆ. ಇದರಿಂದ ತಂಬುಳಿ, ಗೊಜ್ಜು, ಹುಳಗ, ತೊಕ್ಕು, ಉಪ್ಪಿನಕಾಯಿ, ಹುಳಿ, ಮಿಠಾಯಿ, ಜಾಮ್, ಪಾನಕ ಇತ್ಯಾದಿಯಾಗಿ ನೂರಾರು ಬಗೆಯ ಅಡುಗೆಯನ್ನು ಅಡುವ ಕಲೆ ನಮ್ಮ ನಾಡಿನಲ್ಲಿದೆ. ನಿರುಪಯುಕ್ತವೆಂದು ಬೀಸಾಡುವ ಗೊರಟು ಔಷಧವೂ ಆಹಾರವೂ ಆಗಿದೆಯೆಂಬುದು ಇಲ್ಲಿಯ ಅನೇಕರಿಗೆ  ತಿಳಿದಿದೆ. ಗೊರಟನ್ನು ಮಳೆಗಾಲದ ತುಸು ತೇವದ ಮಣ್ಣಿನಲ್ಲಿ ಅಗಸ್ಟ ತಿಂಗಳವರೆಗೂ  ರಕ್ಷಿಸಿಕೊಳ್ಳಲಾಗುತ್ತದೆ. .ಗೊರಟನ್ನು ಒಡೆದು ಅಥವಾ ಕೆಂಡದಲ್ಲಿ ಬೇಯಿಸಿ ಅದರೊಳಗಿನ ಹೂಂಗನ್ನು (ಕೂಗಲೆಯನ್ನು)ಬಿಡಿಸಿಕೊಂಡು ಅದನ್ನು ತುಸು  ಜೀರಿಗೆ ಆರೆಂಟು ಮೆಣಸಿನ ಕಾಳು ಹಾಗೂ ತುಸು ಬೆಣ್ಣೆ ಅಥವಾ ತುಪ್ಪದೊಂದಿಗೆ ಪರಿಮಳ ಬರುವವರೆಗೆ ಹುರಿದು ಒಂದು ಸವಟು ಕಾಯಿ ಸುಳಿಯೊಂದಿಗೆ ಅರೆದು ಮಜ್ಜಿಗೆ ಉಪ್ಪು ಸೇರಿಸಿದರೆ ಕೂಗ್ಲದ ತಂಬುಳಿ ಸಿದ್ಧ. ಇದು ಮಳೆಗಾಲದಲ್ಲಿ ಬರುವ ಅತಿಸಾರ ರೋಗಕ್ಕೆ ಇದು ಮದ್ದು. ಬೆಳೆಯದ ಮಾವಿನ ಕಾಯಿಯ ಕೂಗಲೆಯನ್ನು ಅರೆದು ಮೇಲೆ ತಿಳಿಸಿದಂತೆ ತಂಬುಳಿ ಮಾಡಿ ಅಥವಾ ಮಜ್ಜಿಗೆಯೊಂದಿಗೆ ಮುಂಜಾನೆ ಸಂಜೆ ಸೇವಿಸುವದರಿಂದ ಕರುಳಿನಲ್ಲಿರುವ ನೂಲಿನಂತಹ ಜಂತುಗಳು ತೊಲಗುತ್ತವೆ. ಎಳೆಯ ಎಲೆಗಳನ್ನು ಅರೆದು ತಲೆಗೆ ಹಚ್ಚಿ ಸ್ನಾನ ಮಾಡುವದರಿಂದ ಕೂದಲು ಬಿಳಿಯಾಗುವದು ತಡೆಯುತ್ತದೆ. ಕೂಗಲೆಯ ಚೂರ್ಣವನ್ನು ಎಣ್ಣೆಯಲ್ಲಿ ಸೇರಿಸಿ ಕುದಿಸಿ ತಲೆಗೆ ಹಚ್ಚುವದರಿಂದ ಕೂದಲ ಅಕಾಲನರೆ ತಪ್ಪುತ್ತದೆ. ಎಲೆಯ ಕಷಾಯ ಸೇವನೆ ಮಧು ಮೇಹ ರೋಗಿಗಳಿಗೆ ಉತ್ತಮ.ಮಾವಿನೆಲೆಯನ್ನು ಹಲ್ಲಿನಿಂದ  ಜಗಿದು ಬೆರಳಿನಿಂದ ಹಲ್ಲುಜ್ಜುವದರಿಂದ ಹಲ್ಲು ಗಟ್ಟಿಗೊಳ್ಳುತ್ತದೆ. ನೂರಾರು ಬಗೆಯಲ್ಲಿ ನಮ್ಮ ಸಹಾಯಕ್ಕೆ ನಿಲ್ಲುವ ಮಾವಿನಮರಗಳನ್ನು ಬೆಳೆಸುವದು ಬಹು ಸುಲಭ. ಮಕ್ಕಳು. ಪಾಲಕರು ಒಂದಾದರೂ ದೇಸಿ ಮಾವಿನ ಮರ ಬೆಳೆಸುವತ್ತ ಗಮನಿಸುವದು ಉತ್ತಮ. ಮಕ್ಕಳೇ ,ನಿಮ್ಮ ಹಿತ್ತಲಲ್ಲಿ ಬಿದ್ದಿರುವ ಗೊರಟೆಗಳನ್ನು ಹೆಕ್ಕಿರಿ. ಅವಕ್ಕೆ ತುಸು ಮಣ್ಣು ಬಳಿದು ನಿಮ್ಮ ಮನೆ ಬದಿಯ ಅಥವಾ ನಿಮ್ಮ ಶಾಲೆಯ ದಾರಿ ಬದಿಯ ಹಿಂಡಿನಲ್ಲಿಟ್ಟು ಬನ್ನಿ. ಅವಕಾಶ ಸಿಕ್ಕಾಗ ಇವಕ್ಕೆ ತುಸು ಮಣ್ಣು ನೀರು ಕೊಡಿರಿ. ಹೀಗೆ ನಿಮ್ಮ ಹಿತ್ತಲಲ್ಲಿ ಒಂದಾದರೂ ದೇಸಿ ಮಾವಿನ ಮರವನ್ನು ನೆಡಿರಿ. ಪೋಷಿಸಿರಿ. ಇದು ನಿಮಗೆ ನೀವೇ ಉಪಕಾರ ಮಾಡಿಕೊಳ್ಳುವ ಒಂದು ಸುಲಭ ವಿಧಾನವಾಗಿದೆ.

13 comments:

  1. ಮೇಲ್ನೋಟಕ್ಕೆ, ಇದೇನು ಚಿರ ಪರಿಚಿತ ಮರದ ಬಗ್ಗೆ ಲೇಖನವೆಂದೆನಿಸಿದರೆ, ಓದಿದಂತೆಲ್ಲ ಈ ಅನಿಸಿಕೆ ಹುಸಿಯಾಗಿ, ಅವರ್ಣನೀಯ ಅನುಭವ ತರುತ್ತದೆ. ಉತ್ತಮ ಮೌಲ್ಯಭರಿತ, ಅಬಾಲರಿಂದ ವೃದ್ಧರಿಗೆ ಉಪಯುಕ್ತ ಲೇಖನ. ಕಾಡು ಮಾವಿನ ಹಣ್ಣಿನ ರುಚಿ ನನಗಿನ್ನೂ ಚೆನ್ನಾಗಿ ನೆನಪಿನಲ್ಲಿದೆ; ನಮ್ಮ ಮನೆಯ ಹಿತ್ತಲಿನಲ್ಲಿಯೇ ಒಂದು ಮರವಿತ್ತು. ಇನ್ನು, ಹೊಸ್ತು ಹಬ್ಬವನ್ನು ನೆನಪಿಸಿದುದಕ್ಕೆ ಧನ್ಯವಾದಗಳು. ಆ ಸಂದರ್ಭದಲ್ಲಿ ಪಾಂಡವರ ಹರಿಗೆಯ ಹೂವನ್ನು ಉಪಯೋಗಿಸುತ್ತಿರುವುದು ಸಹ ನೆನಪಿನಲ್ಲಿದೆ. ಪಾಂಡವರ ಹರಿಗೆಯ ಹೂವನ್ನು ಈಗಲೂ ನಮ್ಮ ಕರಾವಳಿ ಜಿಲ್ಲೆಯಲ್ಲಿ ಹೊಸ್ತು ಹಬ್ಬದ ಸಂದರ್ಭದಲ್ಲಿ ಉಪಯೋಗಿಸುತ್ತಿರಬಹುದೆಂದು ನಂಬಿದ್ದೇನೆ. ಉತ್ತಮ ಲೇಖನಕ್ಕಾಗಿ ಧನ್ಯವಾದಗಳು.
    ರಾಮಚಂದ್ರ ಉ. ಮಹಾಲೆ

    ReplyDelete
  2. Thank you, I’ve recently been searching for information about this subject for a long time and yours is the best I have found out so far.Passware Kit Forensic Crack

    ReplyDelete
  3. Very nice article. I really like this article very much. Keep it up and keep sharing this type of useful information with us. Also thanks for sharing it with us.
    mount & blade warband serial key
    mixcraft registration code
    zmodeler crack
    recover my files license key
    netlimiter torrent

    ReplyDelete
  4. You have a great site, but I wanted to know if you know.
    Any community forum dedicated to these topics.
    What was discussed in this article? I really want to be a part of it.
    A society in which I can obtain information from others with knowledge and interest.
    Let us know if you have any suggestions. I appreciate this!
    artisteer crack
    imazing crack
    youtube by click crack
    winzip pro crack

    ReplyDelete
  5. Adobe premiere pro cc 22.1.2 Crack creates more unequivocal photographs and makes games, video web based, and media altering smoother. You can likewise appreciate more clear, more excellent sound through the refreshed sound driver.

    ReplyDelete
  6. I like your all post. You have done really good work. Thank you for the information you provide, it helped me a lot. crackbay.org I hope to have many more entries or so from you.
    Very interesting blog.
    Passware Kit Forensic Crack

    ReplyDelete
  7. I am very thankful for the effort put on by you, to help us, Thank you so much for the post it is very helpful, keep posting such type of Article.
    Album DS Crack
    Sony Vegas Pro Crack

    ReplyDelete

  8. Driver Genius Crack


    Thank alot, I’ve been exploring for info about this topic for a long time and yours is the most satisfactory.

    ReplyDelete