ಕಸ್ತೂರಿ ಅರಿಶಿನ Curcumaa
aromatica,salisb ,yello zedoary
ಇದನ್ನು ಉತ್ತರ ಕನ್ನಡ ಕರಾವಳಿಯ ಬಹು ಜನರು ನೋಡಿಲ್ಲ. ಇತ್ತೀಚೆಗೆ ಕೆಲವು ಸೌಂದರ್ಯ ಪ್ರಜ್ಞೆಯುಳ್ಳ ಹುಡುಗಿಯರು ಪತ್ರಿಕೆಗಳಲ್ಲಿ ಇದರ ಹೆಸರನ್ನು ಓದಿರಬಹುದು. ಕೇರಳಿಗರು ಇದನ್ನು ಕಸ್ತೂರಿ ಮಂಜಿಲ್ ಎನ್ನುತ್ತಾರೆ. ಸಂಸ್ಕೃತದಲ್ಲಿ ಇದಕ್ಕೆ ವನ ಹರಿದ್ರಾ ಎಂಬ ಹೆಸರಿದೆ.
ಇದು ಅರಿಶಿನದ ಗಿಡದ ಹೋಲಿಕೆಯ್ಳ್ದಳ್ಳದ್ದು . ಅರಿಶಿನದ ಗಿಡಕ್ಕಿಂತ ಹೆಚ್ಚು ಬಲಶಾಲಿ ಎತ್ತರವಾಗಿ ಬೆಳೆಯುತ್ತದೆ. ಇದರ ಗಡ್ಡೆಯ ಅರಿಶಿನದ ಗಡ್ಡೆಯನ್ನು ಹೆಚ್ಚು ಹೋಲುತ್ತದೆ. ಅರಿಶಿನದ ಬಣ್ಣ ಮತ್ತು ಅದರ ಪರಿಮಳ ಇದಕ್ಕಿದೆಯಾದರೂ ಇದಕ್ಕೆ ಅರಿಶಿನಕ್ಕಿಂತ ಬೇರೆಯಾದ ಘಾಡವಾದ ದಿವ್ಯ ಪರಿಮಳವಿರುತ್ತದೆ. ಅರಿಶಿನ ಗಿಡದ ಬಳಿಯಲ್ಲಿ ಇದು ಬೆಳೆದರೆ ಇದನ್ನು ಗಿಡವಾಗಿರುವಾಗಲೇ ಗುರುತಿಸಿ ಪ್ರತ್ಯೇಕಿಸಿಕೊಳ್ಳಬೇಕು. ಏಕೆಂದರೆ ಇದರ ಗಡ್ಡೆಯನ್ನು ನೋಡಿ ಸುಲಭದಲ್ಲಿ ಗುರುತಿಸಲಾಗುವದಿಲ್ಲ. ಆದರೆ ಗಿಡವು ಬಿಸಿಲಿನಲ್ಲಿ ಬೆಳೆದು ನಿಂತಾಗ ಪ್ರತಿ ಎಲೆಯ ನಡುವೆ ಎಲೆಯ ತುದಿಯಿಂದ ಬುಡದವರೆಗೆ ಉದ್ದವಾಗಿರುವ ಬೆರಳಿನಷ್ಟು ಅಗಲದ ಕುಂಕುಮ ಬಣ್ಣದ ಮೋಹಕವಾದ ಪಟ್ಟಿಯನ್ನು ಕಾಣಬಹುದು.ಇದು ಈ ಕರಾವಳಿಯಲ್ಲಿ ಕಾಡು ಕಚೋರವೆಂದು ಗುರುತಿಸಲಾಗುವ ಕಾಡರಶಿಣಕ್ಕಿಂತ ಬೇರೆಯಾದ ನಡು ಪಟ್ಟಿಯನ್ನು ಹೊಂದಿರುತ್ತದೆ. ಅಂದರೆ ಕಾಡು ಅರಿಶಿಣದ ನಡು ಪಟ್ಟಿಯು ಎಲೆಯ ನಡುವಿನವರೆಗೆ ಮಾತ್ತ್ರ ಇರುತ್ತದೆ. ಆದರೆ ಕಸ್ತೂರಿ ಅರಿಶಿಣದ ನಡು ಪಟ್ಟಿಯು ಎಲೆಯ ಬುಡ ಭಾಗವನ್ನು ಮುಟ್ಟುತ್ತದೆ..
ಇದರ ಪುಡಿಯನ್ನು ಹಾಲಿನ ಕೆನೆಯಲ್ಲಿ ಅಥವಾ ಕಡಲೆ ಹಿಟ್ಟಿನ ಜೊತೆ ನೀರಿನಲ್ಲಿ ಕಲಸಿ ಮುಖಕ್ಕೆ ಲೇಪಿಸಿಕೊಳ್ಳಬೇಕೆಂದು ಸೌಂದರ್ಯವರ್ಧನೆ ಕುರಿತು ಟಿಪ್ಪಣಿಸುವವರು ಬರೆಯುತ್ತಾರೆ..
No comments:
Post a Comment