Folk Art-Drawing-Rangoli-Artist Padmavati
ಹಲಿ ಕಲಾವಿದೆ ಪದ್ಮಾವತಿ ಸೊಮಾ ಗೌಡಾ.
UÉÆqÉAiÀÄ ಹಲಿ
ಬಾಗಿಲ ಅಂಚು
£É® ಗೋಡೆಯ avÀæ
ಗೋಡೆಯ ಹಲಿ
ಹರಳಾಟದ ಮಣೆ
ಸುಮಾರು ಐವತ್ತೆಂಟು ವರ್ಷ ವಯಸ್ಸಿನ ಪದ್ಮಾವತಿ ಬಾಲ್ಯದಿಂದಲೂ ಜನಪದ ಗೀತ ಕಥೆ ಹಲಿಗಳಬಗ್ಗೆ ಆಸಕ್ತಿ ತಳೆದವರು. ಈ ಆಸಕ್ತಿಯ ಕಾರಣದಿಂದಾಗಿ ಇವರು ತಮ್ಮ ಬಾಲ್ಯದಲ್ಲಿ ತಮ್ಮ ಸರೀಕರ ಜೊತೆ ಇರದೆ ತಮಗೆ ದೊರೆತ ಬಿಡುವಿನ ಹೆಚ್ಚಿನ ವೇಳೆಯನ್ನು ತಮ್ಮ ಕೇರಿಯ ಈ ಮುದುಕಿಯರ ಬಳಿ ಕಳೆಯುತ್ತಿದ್ದರು. ಆ ಕಾಲದಲ್ಲಿ ತಮ್ಮ ಸಂಪರ್ಕಕ್ಕೆ ಬಂದ ಮತ್ತು ಆ ಮೂಲಕ ತಮ್ಮ ಮೇಲೆ ಪ್ರಭಾವ ಬೀರಿದ ಸುಮಾರು ಹತ್ತು ಜನ ಹಿರಿಯರನ್ನು ನೆನಪಿಸಿ ಕೊಳ್ಳುತ್ತಾರೆ. ಈಕಾರಣದಿಂದ ಇವರ ಕೇರಿಯ ಹಿರಿಯರ ಹಾಡು ಹಲಿ ಇವರ ಪಾಲಾದವು. ಆಚರಣೆಗಳ ಪ್ರತ್ಯಕ್ಷ ಜ್ಞಾನ ಇವರಿಗೆ ದೊರೆಯಿತು. ಆದ್ದರಿಂದ ಇವರ ಹಲಿಗೆ ಆಚರಣೆ ಮತ್ತು ಹಾಡಿನ ಮೆರಗು ಕೂಡಿಕೊಂಡಿತು. ಇವರು ಪ್ರತಿ ಹಲಿಗೆ ಸಂಬಂಧಿಸಿದಂತೆ ಹಲವಾರು ಹಾಡುಗಳನ್ನು ಕಥೆ ಪುರಾಣ ಐತಿಹ್ಯಗಳನ್ನು ಜೋಡಿಸಿಕೊಳ್ಳಬಲ್ಲರು.
ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲ ಗಂಡಸರ ಸುಗ್ಗಿ ನೃತ್ಯಕಲೆ ಕರಾವಳಿಯಲ್ಲಿ ಪ್ರಸಿದ್ಧವಾದದ್ದು.ಈ ಕುಣಿತದಲ್ಲಿ ಹಾಲಕ್ಕಿ ಒಕ್ಕಲ ಮಹಿಳೆಯರು ಪಾಲ್ಗೊಳ್ಳುವದಿಲ್ಲವಾದರೂ ಸುಗ್ಗಿ ಆಚರಣೆಯ ಸುಮಾರು ಹದಿನೈದು ದಿನ ಹಲಿ ಬರೆಯುವ ಆಚಣರಣೆಗೆ ಸುಗ್ಗಿಕಾಲ ಬರುತ್ತದೆ. ಸುಗ್ಗಿ ಕುಣಿತದವರು ಪಾಲ್ಗೊಳ್ಳುವ ಅಂಗಳದಲ್ಲಿ ಸುಗ್ಗಿಯ ಸಲಕರಣೆಗಳು ಮತ್ತು ಸುಗ್ಗಿಯ ಸಂಪ್ರದಾಯಗಳು ಹಾಲಕ್ಕಿ ಒಕ್ಕಲ ಮಹಿಳೆಯರ ಹಲಿಯ ರೂಪವನ್ನು ತಳೆಯುತ್ತವೆ.
ಕೋಲಾಡುತ್ತಿರುವ ಕಲಾವಿದರು
ಹಲಿ ಹೊಯ್ಯುತ್ತಲೇ ಪದ್ಮಾವತಿ ಕೋಲು ತರುವ ಸಂಪ್ರದಾಯವನ್ನು ಹಾಲಕ್ಕಿ ಒಕ್ಕಲಿಗೆ ಕೋಲು ದೊರೆತ ಬಗೆಯನ್ನು ಹಾಡುಗಳ ಮೂಲಕ ವಿವರಿಸುತ್ತಾರೆ. ಸುಗ್ಗಿಯ ಕೋಲುಗಳು ದೇವತೆಗಳ ಮೂಲಕ ದೊರೆತವು ಎಂಬುದು ಈ ಹಲಿ ಕಲಾವಿದೆಯ ಅಭಿಪ್ರಾಯವಾಗಿದೆ. ಸುಗ್ಗಿಯ ಕೋಲುಗಳನ್ನು ಸಿದ್ಧ ಪಡಿಸಲು ಸಿಕ್ಕ ಸಿಕ್ಕ ಮರಗಳನ್ನು ಬಳಸಕೂಡದು .ಯಾಕೆಂದರೆ ಎಲ್ಲ ಮರಗಳ ಕೋಲುಗಳು ಉತ್ತಮ ದನಿಯನ್ನು ಹೊರಡಿಸಲಾರವು. ಸುಗ್ಗಿ ಕೋಲುಗಳಿಗಾಗಿ ಸೆಣ್ಗೋಳಿ ಮರದ ಕೋಲುಗಳು ಉತ್ತಮ. ಇವು ಉತ್ತಮ ಅವಾಜ [ದನಿ] ನೀಡ ಬಲ್ಲವು. ಸಣ್ಗೋಳಿ ಮರಗಳು ಬಿಲ್ಕಂಬಿ ಮರಗಳನ್ನು ಹೋಲುತ್ತವೆ
ಸುಗ್ಗಿಯ ಕೋಲುಗಳನ್ನು ಇಲ್ಲಿಯ ಹಾಲಕ್ಕಿ ಒಕ್ಕಲು ತಮ್ಮ ಮೂಲ ನೆಲೆಯಾದ ಮಚ್ಚೋಳಿಯಿಂದ ತರುತ್ತಾರೆ .ಅಲ್ಲಿ ತಮ್ಮ ಮೂಲ ದೇವರಿದೆ, ಪ್ರತಿವರ್ಷ ಸಂಕ್ರಾಂತಿಯ ದಿನ ಆಯಾ ಊರಿನವರು ಅಲ್ಲಿಗೆ ಹೋಗಿ ಹಸಿ ಕೋಲುಗಳನ್ನು ಸಿದ್ದ ಪಡಿಸಿ ಕೊಳ್ಳುತ್ತಾರೆ.ಅಲ್ಲಿಯ ದೇವರ ಬಳಿ ಕೋಲುಗಳನ್ನಿಟ್ಟು ಹೇಳಿಕೆ ಮಾಡಿ ಪ್ರಸಾದ ಪಡೆಯುತ್ತಾರೆ. ಅಲ್ಲಿಂದ ತಂದ ಕೋಲುಗಳನ್ನು ಭಾವಿಕೇರಿಯ ಗಯ್ಡ[ ಗರಡಿ ]ಮಾಸ್ತಿಯ ಬಳಿಯಿಟ್ಟು ಅಲ್ಲಿಯ ಬಾವಿಯ ನೀರನ್ನು ಸಿಂಪಡಿಸಿ ತಮ್ಮ ಕೇರಿಯ ಲ್ಲಿರುವ ಬಟ್ಟೆ ಬೀರ ದೇವರ ಬಳಿ ಇಡುತ್ತಾರೆ.ಅಲ್ಲಿ ಕೋಲಾಡಿದ ಬಳಿಕ ಕೋಲಾಟದ ತಾಲೀಮು ನಡೆಸುವವರಿಗೆ ಅನುಮತಿ ಯಿರುತ್ತದೆ.
ಕೋಲಾಟದ ಹಲಿಯಲ್ಲಿ ಕೋಲಾಡುತ್ತಿರುವ ಮನುಷ್ಯರಿಬ್ಬರನ್ನು ಕಾಣಬಹುದು. ಇಲ್ಲಿಯ ಹಲಿಯಲ್ಲಿಯ ಮನುಷ್ಯರು ಎತ್ತರವಲ್ಲ ಕುಳ್ಳರು. ಹೊನ್ನಾವರದ ಸುಗ್ಗಿ ಹಲಿಯಲ್ಲಿಯ ಮನುಷ್ಯರು ಎತ್ತರ ನಿಲುವಿನವರು. ಹಾಗೆಂದು ವಾಸ್ತವ ಪ್ರಪಂಚದಲ್ಲಿ ಅಂಕೋಲೆಯ ಸುಗ್ಗಿ ಕಲಾವಿದರು ಕುಳ್ಳರು ಮತ್ತು ಹೊನ್ನಾವರದ ಸುಗ್ಗಿ ಕಲಾವಿದರು ಎತ್ತರ ನಿಲುವಿನವರೆಂದು ಅರ್ಥೈಸಬೇಕಾಗಿಲ್ಲ. ಅಂಕೋಲೆಯ ಸುಗ್ಗಿ ಕಲಾವಿದರು ಹೊನ್ನಾವರದ ಸುಗ್ಗಿ ಕಲಾವಿದರಿಗಿಂತ ಹೆಚ್ಚು ಎತ್ತರ ನಿಲುವಿನವರಾಗಿರುತ್ತಾರೆ. ಆದರೆ ಹಲಿಯಲ್ಲಿ ನಿಲುವಿನ ವ್ಯತ್ಯಾಸ ಕಂಡುಬರುತ್ತದೆ, ಇದು ಹಲಿ ಪ್ರಪಂಚ . -ಕಲಾಪ್ರಪಂಚ.
ಇದು ಗುಮಟೆ ಕಲಾವಿದನ ಹಲಿ ಚಿತ್ರ
ಚಿತ್ರ3 .
ದೀಪವಿಡುವ ಸ್ಥಳ
¨ÁV®°è ºÀ°
ಇವರು ಸುಮಾರು ನಾಲ್ಕು ವರ್ಷಗಳಿಂದ ಹೊನ್ನಾವರ ಜಾನಪದ ಅಧ್ಯಯನ ಕೇಂದ್ರದಲ್ಲಿ ಸಂಪನ್ಮೂಲ ಕಲಾವಿದೆಯಾಗಿ ಆಗಮಿಸಿ ಇಲ್ಲಿಗೆ ಜಾನಪದ ಅಧ್ಯಯನಕ್ಕಾಗಿ ಬರುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಲಿಯ ಪ್ರಾತ್ಯಕ್ಷಿಕೆ ನೀಡುತ್ತಿದ್ದಾರೆ.
No comments:
Post a Comment