ನಗರ ಬಸ್ತಿಗೆ
ದಿನಾಂಕ: 05-11-2010 ಸವಿತಾ ನಗರಬಸ್ತಿಗೆ ಹೊರಟಳು. ನಾನೂ ಅವಳ ಜೊತೆ ಹೊರಟೆ.
ನಗರೆಯಲ್ಲಿಯ ದೇವಸ್ಥಾನದ ಹತ್ತಿರವಿರುವ ತಾರಿಯಲ್ಲಿ ನಗರಬಸ್ತಿಗೆ ಹೋಗಲು 150ರೂ.ಗೆ ದೋಣಿಯನ್ನು ಗೊತ್ತು ಮಾಡಿದೆವು. ಆದಿನ ದೀಪಾವಳಿಯ ನಿಮಿತ್ತ ಉತ್ತರ ಕನ್ನಡ ಕರಾವಳಿಯಲ್ಲಿ ಲಕ್ಷ್ಮಿಪೂಜೆ ನಡೆಯುತ್ತಿತ್ತು. ನಮ್ಮ ದೋಣಿಯವನಿಗೆ ಅವನ ದೋಣಿಯೇ ಲಕ್ಷ್ಮಿ . ದೋಣಿ ಪೂಜೆ ನಡೆಸಿ ಕೊಡಲು ಸ್ಥಳೀಯ ಬ್ರಾಹ್ಮಣರೊಬ್ಬರು ಹಾಜರಿದ್ದರು. ಈಹಿಂದೆ ಜನಪದ ಆಚರಣೆಗಳಾದ ಗದ್ದೆ ಪೂಜೆ ತುಳಸಿ ಪೂಜೆ ಕೊಟ್ಟಿಗೆ ಪೂಜೆ ಗಳನ್ನು ಆಯಾ ಆಚರಣೆಗೆ ಸಂಬಂಧಿಸಿದ ಮನೆಯ ಯಜಮಾನರೇ ನಡೆಸುತ್ತಿದ್ದರು. ಅ ಅವರ ಪೂಜೆಯಲ್ಲಿತನ್ಮಯತೆ ಆತ್ಮೀಯತೆ ಯಿರುತ್ತಿತ್ತು. ಅರ್ಪಣಾ ಮನೋಭಾವದೊಂದಿಗೆ ತಮ್ಮತಮ್ಮ ಮಾತೃ ಭಾಷೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು.ಚಿಕ್ಕ ಪುಟ್ಟ ಪೂಜೆಗಳನ್ನಷ್ಟೇ ಅಲ್ಲ, ಮದುವೆಯಂತಹ ಹಲವು ದಿನಗಳ ಕಾರ್ಯವನ್ನು ಮದುವೆ ಆಚರಣೆಯ ಸವರ್ಾಂಗವನ್ನೂ ಬಲ್ಲ ಸ್ಥಳೀಯ ಹಾಡುಗಾತರ್ಿಯರ ಮತ್ತು ಜಾತಿಯ ಮುಖಂಡರ ಹಾಗೂ ಊರ ಜನರ ನೆರವಿ ನೊಂದಿಗೆ ವಧು ವರರ ತಂದೆ ತಾಯಿಯರು ನಡೆಸುತ್ತಿದ್ದರು. ಈಗ ಹಾದಿಬದಿಯ ಮಾರಿಹೊರೆಯ ಪೂಜೆಗೂ ಸಂಸ್ಕೃತ ಭಾಷಾ ಪೂಜಾರಿಗಳು ಹಾಜರಿರುತ್ತಾರೆ. ದ್ವಿಚಕ್ರ ವಾಹನಗಳ ಪೂಜೆಗೂ ಅವರೇ ಬೇಕು.ಆದರೆ ಸಾಯ್ಕಲ್ಲಿಗೆ ಈಪೂಜ ಭಾಗ್ಯ ಬಂದದ್ದು ಸದ್ಯ ನನ್ನ ಕಣ್ಣಿಗೆ ಬಿದ್ದಿಲ್ಲ. ಈಗಿನ ಪೂಜಾರಿಗಳಿಗೆ ಪೂಜಾ ಕೆಲಸದ ಒತ್ತಡ. ಕೆಲವೇ ನಿಮಿಷ ಗಳಲ್ಲಿ ಪೂಜೆಗಳು ವಿಧಿವಿಧಾನಗಳು ನಡೆದು ಹೋಗುತ್ತವೆ. ಆ ದೇವ ಭಾಷೆಯ ಅರ್ಥ ಆ ದೇವರಿಗೇ ಪಥ್ಯ.
ಇತ್ತ ತಮ್ಮ ತಮ್ಮ ಪೂಜೆ ಗೊಳ್ಳಲು ನಾಲ್ಕಾರು ದೋಣಿಗಳು ತಾರಿಗೆ ಬಂದಿದ್ದವು. ಸರತಿಯಂತೆ ಪೂಜೆ ನಡೆಯುತ್ತಿತ್ತು. ದೋಣಿಗಳ ಪೂಜೆ ನೋಡಲು ಇತರರ ಜೊತೆ ಅಲ್ಲಿ ಸ್ಥಳೀಯ ಕೆಲವು ಮುಸ್ಲಿಂಯುವಕರು ,ಹಿರಿಯರು ಹಾಜರಿದ್ದರು. ಪ್ರತಿ ದೋಣಿಯ ಪೂಜೆಯ ಬಳಿಕ ಹೂ ಪ್ರಸಾದದ ಜೊತೆ ಖಜರ್ೂರ ಬಾಳೆಹಣ್ಣುಗಳನ್ನು ವಿತರಿಸುತ್ತಿದ್ದರು ನಮ್ಮ ದೋಣಿಯವ ದೋಣಿಯ ಪೂಜೆ ಮುಗಿಸಿಯೇ ಹೊರಡುವದೆಂದು ಹೇಳಿದ್ದರಿಂದ ಅಲ್ಲಿದೊರೆತ ವೇಳೆಯನ್ನು ಶಬ್ದ ಸಂಗ್ರಹಕ್ಕೆ ಬಳಸಿ ಕೊಂಡೆವು. ..ಅಲ್ಲಿಯ ಹೊಳೆಯಲ್ಲಿ ದೊರಕುವ ಮೀನಿನ ಬಗ್ಗೆ ವಿಚಾರಿಸಿದಾಗ ತಾರಿಯಲ್ಲಿನಮ್ಮ ಜೊತೆ ನಿಂತಿದ್ದ ಸುಮಾರು 45ವರ್ಷದ ನಾಸಿರ್ ಮುಕ್ತೇಸರ ಎಂಬವರು ಸಂತೋಷದಿಂದ ಆಬಗ್ಗೆ ಮಾಹಿತಿ ನೀಡಿದರು. ನಗರೆಯ ಕನ್ನಡದಲ್ಲಿ ಅವರು ವಿವರಿಸುತ್ತಿದ್ದರು. ಸವಿತಾ ಕೆಲವು ಶಬ್ದಗಳನ್ನು ಅವುಗಳ ವಿವರಗಳನ್ನು ಸಂಗ್ರ ಹಿಸ ತೊಡಗಿದಳು.ಪಾತಿದೋಣಿ- ಮುನ್ನಾಳೆ- ದಂಡೆ,- ಜಲ್ಲು- ತಾರಿ-ಕಾಗಳ್ಸಿ, ಹಳ್ಳಮೀನು -ಕಲಗಾ- ಹೊಟ್ಟೆಕರ್ಚಿ-ಅವಲಮೀನು- ಮುಂತಾದವುಗಳ ವಿವರ ದೊರಕಿತು.
ಈಸಂದರ್ಬದಲ್ಲಿ ನನ್ನ ಗಮನ ಸೆಳೆದದ್ದು ಮುನ್ನಾಳೆ. ಇದು ದೋಣಿಯ ಮುಂದಿನ ಒಂದುಭಾಗ .ಇದುಜಲ್ಲ ಹಾಕುವವನು ನಿಂತ ವಿರುದ್ಧ ದಿಕ್ಕಿನಲ್ಲಿರುತ್ತದೆ. ದೀಪಾವಳಿ ಅಮವಾಸ್ಯೆಯ ಈದಿನ ಲಕ್ಷ್ಮಿ ಪೂಜೆಯಸಂದರ್ಭದಲ್ಲಿ ದೋಣಿ ಯಲ್ಲಿರುವ ಮುನ್ನಾಳೆಗೆ ಪೂಜೆಸಲ್ಲುತ್ತದೆ.ಇದೇ ಇಂದಿನಪೂಜಾಮೂತರ್ಿ .ದೋಣಿಯೇ ಗರ್ಭ ಗುಡಿ.ಮುನ್ನಾಳೆಗೆ ಹೂವು ಗಂಧ ಹಾಕಿ ಆರತಿಮಾಡಿ ಹಣ್ಣು ಕಾಯಿ ಅಪರ್ಿಸಿ ಪೂಜೆ ಮಾಡಿದ್ದನ್ನು ನಾವು ಗಮನಿಸಿದೆವು.
ನಾವು ನಗರ ಬಸ್ತಿಗೆ ಹೋಗುವ ದೋಣಿಯ ದಾರಿಯಲ್ಲಿಯ ಇನ್ನೊಂದು ತಾರಿಯಲ್ಲಿ ನಮ್ಮ ವಕ್ತೃ ಮತ್ತು ಅವರ ಜೊತೆಗಾರರು ಇಳಿದರು. ನಾವಿಬ್ಬರು ಮತ್ತುಸತೀಶ ನಮ್ಮ ಪ್ರವಾಸ ಮುಂದುವರಿಸಿದೆವು. ಜಲ್ ಚಂಡಮಾರುತದ ಸುದ್ದಿಯಕಾಲವದು. ಮಳೆಗಾಲದಂತಹ ಹವಾಮಾನ. ಸೂರ್ಯ ಮೋಡಗಳ ಮರೆಯಲ್ಲಿ ವಿಶ್ರಾಂತ ನಾಗಿದ್ದ. ಗೇರುಸೊಪ್ಪೆ ಹೊಳೆಯ ಆ ಸೊಬಗು ಅಲ್ಲಿಯ ದಟ್ಟ ಕಾನನ
ತಂಪು ಹವೆ ನಮ್ಮ ದೋ ಣಿ ಪ್ರವಾಸಕ್ಕೆ ಅದ್ಭುತ ಕಳೆ ನೀಡಿತ್ತು. ಉತ್ಸಾಹ ಇಮ್ಮಡಿಸುತ್ತಿತ್ತು. ಜೋಗದ ಕಣ್ನೋಟದ ಆನಂದಕ್ಕೂ ಮಿಗಿಲು ದೋಣಿಯಲ್ಲಿ ಕುಳಿತು ನದಿಯಲ್ಲಿ ತೇಲುವ ಮೈಮನಗಳ ಮಹದಾನಂದ. ಮನುಜಾ ಅದನ್ನು ಈನಿರ್ಜನ ನದಿಯಲ್ಲೊಮ್ಮೆ ತೇಲಿ ಅನುಭವಿಸು .ಇತಿಹಾಸ ಪ್ರಸಿದ್ಧಗೇರುಸಪ್ಪಾರಾಣಿ ಈ ಹೊಳೆಯಲ್ಲಿ ಅಂದು ಇಲ್ಲಿ ಓಡಾಡಿದ್ದಳು.ಅವಳ ಜೊತೆ ಅವಳ ಮಂದಿ ಮಾರ್ಬಲವೂ ಇಲ್ಲಿ ಓಡಾಡಿರ ಬಹುದು. ಎಂಬ ನೆನಪೇ ರೋಮಾಂಚನ ತರುತ್ತಿತ್ತು.ಅಂದಿನ ಆದಟ್ಟ ಕಾನನ ಅಂದು ಹೇಗಿತ್ತೋ ಏನೋ. ಆಗ ಇನ್ನೂ ದಟ್ಟ ವಾಗಿರ ಬಹುದು. ಸದ್ಯ ವಂತೂ ಸಾಕಷ್ಟು ಕಾಡು ಇಲ್ಲಿ ಕಾಣುತ್ತಿದೆ. ಇದೊಂದು ಪ್ರಕೃತಿಯ ನೈಜ ನೋಟ. ಸಾಕಷ್ಟುಪ್ರ ಮಾಣದಲ್ಲಿ ತನ್ನ ಹುಟ್ಟು ಸ್ಥಿತಿಯಲ್ಲಿದೆ . ನದಿಗೆ ಸಮುದ್ರದ ಬರತ ಸೇರಿಕೊಳ್ಳುತ್ತಿದೆ, ನೀರು ಗಳಕಾಗಿದೆ. ಮುಂದಕ್ಕೆ ಹೋಗುತ್ತಿದ್ದೆವು. ..
ಬಸದಿಯತ್ತ ;ಚತುಮರ್ುಖ ಬಸದಿಯತ್ತ. ನಮ್ಮ ಬಲಕ್ಕೆ ಆಬಸದಿಯಿದ್ದ ಗುಡ್ಡ ನಮ್ಮನ್ನು ನೀರವ ದನಿ ಮಾಡಿ ಬರಮಾಡಿ ಕೊಳ್ಳುತ್ತಲಿತ್ತು. ಸುಳುಸುಳು ಗಾಳಿ ಮುದ ಗೊಳ್ಳುತ್ತಿತ್ತು.
No comments:
Post a Comment