Tuesday, 19 June 2012

ಸಂಕ್ರಬೆಳೆ (ನಾಡವರ ಸಾಮಾಜಿಕ ಉಪಭಾಷಾ ಶಬ್ದ)


 ಸಂಕ್ರಬೆಳೆ (ನಾಡವರ ಸಾಮಾಜಿಕ ಉಪಭಾಷಾ ಶಬ್ದ) 


ಅಕ್ಕೆಚ್ಚಲುಳ್ಳಲ್ಲೆ ಮುತ್ತೆಚ್ಚಲೇ ಕುಳ್ಳಲ್ಲೆ

ಮಕ್ಕಾಳೆಚ್ಚಾಲೇ ಮನೆಯಲ್ಲೇ
ಮಕ್ಕಾಳೆಚ್ಚಾಲೇ ಮನಿಯಲ್ಲೇ ಸಂಕ್ರಬೆಳೆಯೇ
ನೀ ಹಿಚ್ಚ ನಮ್ಮಾ ಕಳನಲ್ಲೇ




ಇದು ಉತ್ತರ ಕನ್ನಡದ ಅಂಕೋಲೆಯ ನಾಡವರ ಜಾತಿಯ  ಸಾಮಾಜಿಕ ಉಪಭಾಷೆಯಲ್ಲಿರುವ ಒಂದು ಹಾಡು. ಬತ್ತ ಮಿರಿಯುವಾಗ ಇತ್ತೀಚಿನ ದಿನಗಳವರೆಗೂ ಈ ಹಾಡನ್ನು  ಹಾಡ ಬಲ್ಲ ಮಹಿಳೆಯರಿದ್ದರು ಈ ಹಾಡಿನಲ್ಲಿ . ಗಮನಿಸ ಬಹುದಾದ ಅಕ್ಕಿ -ಉಳ್ಳು ಮುತ್ತು -ಕುಳ್ಳು . ಮನೆ-ಮಕಳು ಈ ಶಬ್ದಗಳ ಜೊತೆ ಕಳ-` ಸಂಕ್ರ ಬೆಳೆ.ಎಂಬ ಶಬ್ದಗಳು ಗಮನ ಸೆಳೆಯುತ್ತದೆ.
 ಕಳ ಇದು ಬೆಳೆದ ಬೆಳೆಯನ್ನು ಸಂಗ್ರಹಿಸಿ ಹಸನು ಮಾಡುವ ಬಯಲು.ಅಥವಾ ಬೆಳೆ ಕೊಯ್ದಾದ ಬಳಿಕ ಬೆಳೆ ಹಸನು ಮಾಡುವ ಕೆಲಸಕ್ಕೆ ಉಪಯೋಗಿಸಲು ಬರುವ ಗದ್ದೆ.
   ಸಂಕ್ರಬೆಳೆ ಎಂಬುದಕ್ಕೆ ಸಂವಾದಿಯಾಗಿ ಶಂಕರಗಂಡ (ದ.ಕ) ಶಂಕರತೆನೆ (ಮಲೆನಾಡು) ಸಂಕ್ರದಾನ್ಯಾ, ಸಂಕ್ರಬೆಳೆ[ಉ.ಕನ್ನಡ] ಎಂಬ ಶಬ್ದಗಳು ದೊರೆಯುತ್ತವೆ. ಆದರೆ ಇದರ ಅರ್ಥ ದೊರೆಯುತ್ತಿಲ್ಲ. ಸಂಕ್ರ, ಸಂಕರ ಶಂಕರ ಈ ವಿಶೇಷಣ ಶಬ್ದದ ಅರ್ಥ ವೇನು? ಬತ್ತವೆಂದೆ? ಅಥವಾ ಇದು ಬತ್ತದ ಒಂದು ಜಾತಿಯ ಹೆಸರೆ?ನಾಡವರ ಮನೆ ಮಾತಿನ ಒಂದು ಸಂದರ್ಭದಲ್ಲಿ `ಸಂಕರ ತಿಳೆ ಎಂಬ ಶಬ್ದ ದೊರೆಯುತ್ತದೆ. ಇದು ಹೀಗಿದೆ
       `ಜರಾಬಂದೆ ಮಗಾ ಸುರ್ಗಹೋಗ್ಯಾ. ಬಾಯ್ರುಚೆ ಕಿಟ್ಟೋಗೆ ಸಂಕರ ತಿಳೀ  ಕಿಟ್ಟೂದಲಾ, ಇಲ್ಲಿ  ಸಂಕರ  ಎಂಬುದು ಬತ್ತದಅಕ್ಕಿ ಮತ್ತು ಅಕ್ಕಿಯ  ಎಂಬ ಅರ್ಥವನ್ನು ಸೂಚಿಸುತ್ತದೆ.  ಹೀಗೆ ಸಂಕ್ರ, ಸಂಕರ ಶಂಕರ  ಎಂಬುದಕ್ಕೆ ಸದ್ಯ `ಬತ್ತ ಎಂದು ಅಥರ್ೈಸಲಾಗಿದೆ. ಆದರೂ ಇನ್ನಷ್ಟು ಹುಡುಕಾಟ ಬೇಕು. ಈಮೊದಲೇ ತಿಳಿದವರಿಂದ ಮಾಹಿತಿ ದೊರೆಯಲೂ ಬಹುದು

No comments:

Post a Comment