Saturday, 30 June 2012

ಜನಪದ ಗಣಿತ-Folk Mathemetics


         ಜನಪದ ಗಣಿತ
 Folk Mathemetics -ಒಂದು ವಿವರಣೆ 
 

        ಗಣಿತವೆಂದ ಕೂಡಲೆ ನಮಗೆ ಶಾಲೆ ಕಾಲೇಜುಗಳಲ್ಲಿ ಕಲಿಸುವ ಸೂತ್ರಬದ್ಧ ಔಪಚಾರಿಕ ಗಣಿತದ ನೆನಪಾಗುತ್ತದೆ. ಈ ಗಣಿತಗಳಲ್ಲಿ ಒಂದು ಗಣಿತದ ಉತ್ತರವನ್ನು ಕಂಡುಕೊಳ್ಳುವದಕ್ಕಾಗಿ ಅದಕ್ಕಿರುವ ಒಂದು ನಿಗದಿತ ವಿಧಾನವನ್ನು ಅನುಸರಿಸುತ್ತೇವೆ. ಅಲ್ಲಿ ಗುಣಿಸುವ ಕಳೆಯುವ ಕೂಡಿಸುವ ಭಾಗಿಸುವ ಇತ್ಯಾದಿ ಪ್ರಕ್ರಿಯೆಗಳು ನಡೆಯುತ್ತವೆ. ಆದರೆ ಜನಪದ ಗಣಿತದ ಉತ್ತರವನ್ನು ಕಂಡುಕೊಳ್ಳುವ ವಿಧಾನವು ಅನೇಕ ಸಂದರ್ಭಗಳಲ್ಲಿ ಔಪಚಾರಿಕ ಗಣಿತ ಮಾದರಿಯದಲ್ಲ. ಇಲ್ಲಿಯೂ ಕೂಡಿಸುವ ಕಳೆಯುವ ಗುಣಿಸುವ ಭಾಗಿಸುವ ಇತ್ಯಾದಿ ಕ್ರಿಯೆಗಳು ನಡೆಯುತ್ತವೆಯಾದರೂ  ಅನೇಕ ಸಂದರ್ಭಗಳಲ್ಲಿ ಉತ್ತರವನ್ನು ಕಂಡುಕೊಳ್ಳುವ ವಿಧಾನವು ಇಂಥದ್ದೇ ಎಂದು ನಿಖರವಾಗಿ ಹೇಳಲಾಗುವದಿಲ್ಲ. ಜನಪದ ಗಣಿತಗಳು ಈ ಗಣಿತವನ್ನು ಬಿಡಿಸುವವರ ವ್ಯವಹಾರ ಕುಶಲತೆಯನ್ನು ಚುರುಕು ಬುದ್ದಿಯನ್ನು ಮಾತಿನ ವೈಖರಿಯನ್ನು ತರ್ಕ ಬುದ್ಧಿಯನ್ನು ಒರೆಗೆ ಹಚ್ಚುವಂತಿರುತ್ತವೆ.
     ಜನಪದ ಒಗಟುಗಳಲ್ಲಿ ನಡೆಯುವಂತೆ ಜನಪದ ಗಣಿತಗಳು ಮೂಲತಹ ವ್ಯಷ್ಟಿ ಸೃಷ್ಟಿಯಾಗಿದ್ದರೂ ಬೆಳೆಯುತ್ತ ಸಮಷ್ಟಿಯ ಸೊತ್ತಾಗಿ ಬಿಡುತ್ತವೆ. ಪ್ರಾರಂಭದ ಸವಾಲುಗಾರ ತನ್ನ ಪ್ರತಿಭೆಯಿಂದಲೋ, ಆಕಸ್ಮಿಕವಾಗಿಯೋ ಕಂಡುಕೊಂಡ ಗಣಿತವನ್ನು ಜಾಣ್ಮೆಯಿಂದ ಉಳಿಸಿಕೊಂಡು ಪ್ರಸಾರಕ್ಕೆ ನೆರವಾಗುತ್ತಾನೆ. ಮೊದಲು ಈ ಒಬ್ಬ ವ್ಯಕ್ತಿ ಕಂಡುಕೊಂಡ ರಹಸ್ಯವನ್ನು ವಾಹಕರಾದ ಸವಾಲುಗಾರರು ಮುಂದುವರಿಸುತ್ತಾರೆ.


No comments:

Post a Comment