Tuesday, 19 June 2012

ಅರಶಿನೆಲೆ ಕಡಬು - Arasinele Kadabu

ಅರಶಿನೆಲೆ ಕಡಬು

ಎರಡು ಕಪ್ಪು ಬೆಣತಿಗೆ ಅಕ್ಕಿಯನ್ನು ತೊಳೆದು ಅದರಲ್ಲಿಯ ನೀರನ್ನು ಬಗ್ಗಿಸಿ ನೆಲಕ್ಕೆ ಹಾಸಿದ ಒಣ ಬಟ್ಟೆಯ ಮೇಲೆ ಹರಡಿರಿ.
 ಅರ್ಧ ತಾಸು ಬಿಟ್ಟು ಈ ಅಕ್ಕಿಯನ್ನು ಮಿಕ್ಸಿಗೆ ಹಾಕಿ ಸಣ್ಣ ರವೆ ಮಾಡಿರಿ.
ಎರಡು ಎಳೆಯ ಸವತೆ ಕಾಯಿಗಳನ್ನು ತುರಿಮಣೆಯ   ಮೇಲೆ ತುರಿಯಿರಿ.
 ಇಡ್ಲಿ ಪಾತ್ರೆಯನ್ನು ಒಲೆಯ ಮೇಲಿತ್ತು  ನೀರನ್ನು ಬಿಸಿ ಮಾಡಿರಿ.
ಸವತೆ ಕಾಯಿಯ ತುರಿಗೆ ಅಕ್ಕಿ ಹಿಟ್ಟನ್ನು  ಮತ್ತು ಅರ್ಧ ಚಮಚೆ ಉಪ್ಪಿನ ಹಿಟ್ಟನ್ನು ಮೆಲ್ಲಗೆ ಮೇಲೆ ಕೆಳಗೆ ಮಾಡುತ್ತ ಸೇರಿಸಿರಿ
ಅರಸಿನೆಲೆ ಯನ್ನು ಚಿತ್ರದಲ್ಲಿ   ತೋರಿಸಿದಂತೆ ಇಟ್ಟುಕೊಂಡು ಅದರಲ್ಲಿ ಅರ್ಧ ಬೊಗಸೆ ಹಿಟ್ಟನ್ನು ಇತ್ತು   ತುಸು ಪಸರಿಸಿರಿ.
 ಎಲೆಗಳನ್ನು ಹಿಂದೆ ಮುಂದೆ  ಎಡಕ್ಕೆ ಬಲಕ್ಕೆ ಮದಚಿರಿ.  ಈ  ಕಡಬನ್ನು ಇಡ್ಲಿ ಪಾತ್ರೆಯಲ್ಲಿ ಕವಚಿಡಿರಿ.
  ಮುಂದಿನ ಕಡಬುಗಳನ್ನು  ತ್ವರಿತವಾಗಿ ಮಡಚಿ  ಹೀಗೆ ಒಂದರ  ಮೇಲೆ ಇಡುತ್ತ ಸಾಗಿರಿ
 ಸುಮಾರು ೧೦ ಕಡಬುಗಲಾಗುತ್ತವೆ. ಇದ್ಲಿಯಂತೆ   ಉಗಿಯಲ್ಲಿ  ೨೦ ನಿಮಿಷ ಬೇಯಿಸಿರಿ.
ತೆಂಗಿನ ಕಾಯಿಯ ಹಾಲು ತೆಗೆದು ಅದಕ್ಕೆ ಬೆಲ್ಲ ತುಸು ಉಪ್ಪು ಸೇರಿಸಿರೀ . ಇದು  ಸಿಹಿ ಕಾಯ್ ಹಾಲು . ಇದರಲ್ಲಿ ಎಲೆಯೋಳಗಿನ ಕಡಬನ್ನು ಗಿವುಚಿ  ತಿನ್ನಿರಿ.
 ಗಣೇಷ ಚವತಿ,ಹೊಸತು ಹಬ್ಬ  ಮತ್ತು ದೀಪಾವಳಿ  ಹಬ್ಬಗಳಲ್ಲಿ ಈ  ಕಡಬು ಮಾಡುವದು ಸಾಂಪ್ರದಾಯಿಕ  ಆಚರಣೆ ಯಾಗಿದೆ.


                      


No comments:

Post a Comment