ಹೊಳೆಗೇರು - ಹೊಸ ಅನುಭವ
ಇನ್ನೊಬ್ಬಳು 'ಹೌದು ಇದು ನೇರಲೇ ಹಣ್ಣೇ ಸರಿ I want this'
ಆತ 'ಕೊಯ್ದು ತರುತ್ತೇನೆ ನಿಲ್ಲಿ
wait' ಎಂದ.
ಆತ ಕಚ್ಚಿದ'ಸಿಹಿಇದೆ' ಅಂದ
ಅವಳು ಕಸಿದುಕೊಂಡು ತಿಂದಳು.'ರುಚಿ ಬೇರೆ' ಅಂದಳು.
ಇನ್ನೊಬ್ಬಳುಎರಡು ಹಣ್ಣು ತಿಂದಳು.
ಆತ ನಾಲ್ಕು ಹಣ್ಣು ಮುಗಿಸಿದ. ಕೈಬಾಯಿ ಹಸ್ತ ತುಟಿಯಲ್ಲಿ ಸಣ್ಣ ಉರಿ.ಚರ್ಮ ಬಿಳಿಚಿಕೊಂಡಿದೆ ಯಾಕೆ ಹೀಗೆ?
ಅಂಕಲ್ ಈ ಹಣ್ಣು ತಿನ್ನ ಬಹುದೇ? ಇದು ನೇರಲೇ ಹಣ್ಣಲ್ಲವೇ? ಗುಡ್ಡದ ಕೆಲಸಗಾರನನ್ನು ಕೇಳಿದ
ಈ ಹಣ್ಣು ತಿಂದಿರಾ ?ಗುಡ್ದ ಬೆಟ್ಟದ ಜ್ಞಾನ ಬೇಡವೇ? ರಸ ತಾಗಿದರೆ ಸಾಕು ಚರ್ಮ ಬಾತು ಕೊಳ್ಳುತ್ತದೆ. ಗಿಡದ ಬುಡದಲ್ಲಿ ನಿಲ್ಲಬೇಡಿ. ಹೋಗಿ.'ಅಂದ
ಮೂವರೂ ಇಂಗುತಿಂದ ಮಂಗನಂತಾಗಿದ್ದರು.
`ಅಜ್ಜಿ ನಾವು ಈ ಹಣ್ಣು ತಿಂದೆವು ತುಟಿಬಾತಿದೆ, ಹಸ್ತ ನೋಡಿ ಹೀಗಾಗಿದೆ. '
ವೇಗವಾಗಿ ಬಂದು ವಸತಿಸ್ಥಾನ ಮುಟ್ಟದವನ ಮೊದಲ ದೂರು.
ವೇಗವಾಗಿ ಬಂದು ವಸತಿಸ್ಥಾನ ಮುಟ್ಟದವನ ಮೊದಲ ದೂರು.
ಓ ಇದಾ, ಇದು ಹೊಳೆಗೇರು. .
ಸಸ್ಯಶಾಸ್ತ್ರೀಯ ಹೆಸರಿಗೆ ಕನ್ನಡದ ನಂಟು. ಹೆಸರು Holigarna arnottiana Anacardiaceae
``ಮೊದಲು ಹಾಲು ಕುಡಿ'' ಎಂದೆ
`ನನಗೂ' ಎಂದರು ಇನ್ನಿಬ್ಬರು
. ನೀವೂ ತಿಂದಿರಾ?' ಅಪರಾಧದ ಛಾಯೆ ಮುಖದಲ್ಲಿ.
`ಹೂಂ'
ಸಸ್ಯಶಾಸ್ತ್ರೀಯ ಹೆಸರಿಗೆ ಕನ್ನಡದ ನಂಟು. ಹೆಸರು Holigarna arnottiana Anacardiaceae
``ಮೊದಲು ಹಾಲು ಕುಡಿ'' ಎಂದೆ
`ನನಗೂ' ಎಂದರು ಇನ್ನಿಬ್ಬರು
. ನೀವೂ ತಿಂದಿರಾ?' ಅಪರಾಧದ ಛಾಯೆ ಮುಖದಲ್ಲಿ.
`ಹೂಂ'
ಪರ ಊರಿನ ಮಕ್ಕಳು. ಪಾಲಕರು ದೂರದಲ್ಲಿ. ತಿಂದ ಹಣ್ಣಿನಿಂದ ಜೀವಕ್ಕೆ ಅಪಾಯವಿಲ್ಲ ವೆಂಬುದನ್ನು ಖಾತ್ರಿ ಮಾಡಿಕೊಳ್ಳುವದು ನನ್ನ ಕರ್ತವ್ಯ ವಲ್ಲವೇ?
ತಜ್ಞ ಆಯುರ್ವೇದ ವೈದ್ಯ ಡಾ ಪಿ ಸತ್ಯ ನಾರಾಯಣ ಭಟ್ಟರಿಗೆ, ಜನಜ್ಞಾನ ದಾಖಲೆ ನಿರತ ಪರಿಸರವಾದಿ ಶಿವಾನಂದ ಕಳವೆಯವರಿಗೆ . ಸ್ನೇಹಕುಂಜದ ತಜ್ಞ ವೈದ್ಯ ಡಾ.ಮಹೇಶ ಪಂಡಿತರಿಗೆ. ಫೋನಾಯಿಸಲಾಯಿತು. ಸಲಹೆಗಳು ಬಂದವು. ಹಾಲು ತುಪ್ಪ ದಿನಕ್ಕೆ ಮೂರು ಬಾರಿ ಕೊಡಿ ಎಂದರು ಡಾ ಭಟ್. ಮುರಗಲ ಪಾನಕ ಕೊಡಿ.ಭಯ ಬೇಡ ಎಂದರು ಡಾ. ಪಂಡಿತ್. ಮಂಗಗಳು ಈ ಹಣ್ಣು ತಿನ್ನುತ್ತವೆ. ಬಳಿಕ ಇದರ ಎಲೆಯಿಂದ ಮುಖ ಒರೆಸಿಕೊಳ್ಳುತ್ತವೆಯಂತೆ.ಕೆಲವರಿಗೆ ಇದು ತೀರ ಅರ್ಲರ್ಜಿ ಎಂದರುಶಿವಾನಂದ ಕಳವೆ
ಹಳ್ಳಿಯ ಕೆಲವರು ನಮ್ಮೂರಿನಲ್ಲಿ ಈ ಹಣ್ಣು ತಿನ್ನುವದಿಲ್ಲ ಇದನ್ನು ಮುಟ್ಟುವದಿಲ್ಲ. ಹೀಗಾಗಿ ಈ ಹಣ್ಣು ತಿಂದು ಜೀವ ಕಳೆದುಕೊಂಡವರ ಸುದ್ದಿಯಿಲ್ಲ. ಎಂದರು.
ಅಂತಜರ್ಾಲವನ್ನು ತೆರೆದರೆ ಈ ಮರವನ್ನು ವಿಷಕಾರಿಗಿಡ ಮರಗಳ ಸಾಲಿನಲ್ಲಿ ಸೇರಿಸಿರುವದು ಕಂಡುಬಂತು.
ಜಾನಪದ ಅಧ್ಯಯನಕ್ಕೆಂದು ಹೊನ್ನಾವರದ ಕೇಂದ್ರಕ್ಕೆ ಬೆಂಗಳೂರಿನಿಂದ ಬಂದ ಇವರು ಇಲ್ಲಿಯ ಕಿರಿ ಕಾಡಿಗೆ ಇಳಿದು ಯಾರೂ ತಿನ್ನದ ಹೊಳೆಗೇರಿ ಹಣ್ಣು ತಿಂದರು.ಜೀರ್ಣಿಸಿಕೊಂಡರು..
ಹಣ್ಣುಗಳೂ ವಿಷಕಾರಿಯಾಗಿರುವದುಂಟೆ?ಆಶ್ಚರ್ಯ ಪಟ್ಟರು.ಅವ್ರಿಗೆ ಇದು ಹೊಸ ಅನುಭವ.
ಈ ಹಣ್ಣು ತಿಂದವರು ಆರೋಗ್ಯದಿಂದಿದ್ದಾರೆ.
ಚಿತ್ರದಲ್ಲಿ ನೋಡಿ
No comments:
Post a Comment