Tuesday, 19 June 2012

ಪರಂಪರೆ (Parampare) - 2


ಪರಂಪರೆ (Parampare) - 2


             ಈ ಹಿಂದೆ ಪರಂಪರೆ ಎಂಬ ತಲೆ ಬರಹ ದೊಂದಿಗೆ ಜಲಭೇದಿ ಮತ್ತು ದಬ್ ಗಳ್ಳಿ ಗಿಡಗಳ ಬಗ್ಗೆ ಬರೆದಿದ್ದೆ. ಆ ದಿನ ಸಂಗ್ರಹಿಸಿದ ಇನ್ನಷ್ಟು  ಶಬ್ದ ಮಾಹಿತಿ ಗಳು  ನನ್ನ ಬಳಿ ಉಳಿದು ಕೊಂಡಿವೆ. ನೀವು ಸವಡಿದ್ದರೆ ಓದಿ.-ಓದುತ್ತೀರಾ? .
           ದಕ್ಷಿಣ ಕನರ್ಾಟಕದ  ಪ್ರಮುಖ ವಾಗಿ ಬೆಂಗಳೂರು ಸುತ್ತು ಮುತ್ತಲಿನ  ಹಳ್ಳಿಗಳಲ್ಲಿ ಬಸ್ಸಾರು  ಮಸ್ಸೊಪ್ಪುಗಳ ಹೆಸರನ್ನು ಕೇಳಿದ್ದೆ. ಮಂಗಲಾ ಅವರ ಗೆಳತಿಯ ಮನೆಯಲ್ಲಿ ಬೆರಕೆ ಸೊಪ್ಪಿನ ಬಸ್ಸಾರು ತಿಂದಿದ್ದೆ..ಆಗಬಸ್ಸಾರು ,ಮಸ್ಸೊಪ್ಪುಗಳ ನಡುವಿನ ವ್ಯತ್ಯಾಸ  ಸ್ಪಷ್ಟವಾಗಿ ತಿಳಿದಿರಲಿಲ್ಲ. ತಿಳಿಯ {ಸ}ಲು  ಅರ್ಹರು ದೊರೆತಿರಲಿಲ್ಲ.29-9-10ಬೆಂಗಳೂರಿನಿಂದ ಹೊನ್ನಾವರಕ್ಕೆ ಬರುವಾಗ ಬಸ್ಸಿನಲ್ಲಿ  ಈ ಬಗ್ಗೆ ಮಾಹಿತಿ ದೊರೆಯಿತು

           ಈ ದಿನ ಬಸ್ಸಿನಲ್ಲಿ ನನ್ನ ಬದಿಯಲ್ಲಿ ಕುಳಿತಿದ್ದ ಉಷಾ ಬಸ್ಸಾರು.ಮಸ್ಸೊಪ್ಪು ಮತ್ತು  ಸಾರಿನ ಪುಡಿ ಅಡುವ ವಿಧಾನವನ್ನು ತಿಳಿಸಿದರು..  ಇವರು ಪ್ರಾಧ್ಯಾಪಕರಾದ್ದರಿಂದಲೋ ಬಸ್ಸಿನಲ್ಲಿ ನಾನು ನಿರುಂಬಳವಾಗಿದ್ದರಿಂದಲೋ ಇವರು ನೀಡುವ ವಿವರಣೆ ನನ್ನ ತಲೆ ಹೊಕ್ಕಿತು. ಮಸ್ಸೊಪ್ಪು ಒಂದು ತರಕಾರಿ ಸೊಪ್ಪಲ್ಲ. ಅದೊಂದು ಸಾರು ಎಂಬುದು ಸ್ಪಷ್ಟವಾಯಿತು. ಹೊಸ ನಾಡಿನ ಅಡುಗೆಗೆ ಸಂಬಂಧಿಸಿ ಇನ್ನಷ್ಟು ಹೊಸ ಶಬ್ದಗಳು ದೊರೆತವು.  ಹಾಗೆ ನೋಡಿದರೆ ಇವು ಹೊಸ ಶಬ್ದಗಳಲ್ಲ, ನಿಮ್ಮ ಸುತ್ತ ಮುತ್ತಲಿನವುಗಳೇ ಆಗಿವೆ. ಇವು ನನಗೆ ಹೊಸವು ಅಷ್ಟೆ. ನನ್ನ ಇಲಿ  ಈ ಹಾಳೆಯ ಮೇಲೆ ಮೂಡಿಸಿದ ನಿಮ್ಮ ಶಬ್ದಗಳ  ಗಮ್ಮತ್ತು ನಿಮಗೂ ಸೇರಲಿ, ಅದರ ಗಮತ  ನಿಮ್ಮ ಮೂಗಿಗೂ ಮುಟ್ಟಲಿ ಎಂದು ಕೊಂಡು  ಇವುಗಳನ್ನು ಈ ಟಪಾಲಿಗೆ ರವಾನಿಸಿದ್ದೇನೆ. ಓದಿ.ರುಚಿ ತಿಳಿಸಿ

           ಕಟ್ಟು-  [ನಾಮ]ಬೇಳೆ , ಬೇಯಿಸಿ ಬಸಿದುಕೊಂಡ ರಸ(ನೀರು).  ಇದುಸತ್ವಭರಿತ ವಾದದ್ದು. ಇದನ್ನು ಬೇರೊಂದು ಅಡುಗೆಯಾಗಿ ಪರಿವತರ್ಿಸುವ ಕಲೆ ಇಲ್ಲಿಯ ಮುದ್ದೆ ನಾಡಿನ ಮಹಿಳೆಯರಿಗೆ ಚೆನ್ನಾಗಿ ಗೊತ್ತು. ಕಸ ಮುಸರೆ ಮಾಡಿ ಬದುಕುವ ಮಹಿಳೆಯರು ಕೂಡ  ಪ್ರತಿಯೊಬ್ಬರೂ ಈ ಅಡುಗೆಯನ್ನು ಬಲ್ಲರು.  ಉಡುಪಿಯ ದೊಡ್ದ ಅಡುಗೆ ಕಲಾವಿದರು ಬೇಳೆ ಬೇಯುವಾಗ ತಂಬಿಗೆಗಟ್ಟಲೆ ಹೆಚ್ಚಿಗೆ ನೀರುಸುರಿದು ತಿಳಿಯನ್ನು ಬಗ್ಗಿಸಿಕೊಂಡು ಅನ್ನದ ಜೊತೆ ಉಣ್ಣಲು ರುಚಿಕಟ್ಟಾದ ತಿಳಿಸಾರು ಮಾಡುತ್ತಾರೆ. ನಿತ್ಯದ ಮನೆಯಡುಗೆಯಲ್ಲಿ ಅನೇಕ ಗೃಹಿಣಿಯರು ಅನ್ನವನ್ನು ಬಾಗಿಸಿ ಆ ತಿಳಿಯನ್ನು ಹೊರ ಚೆಲ್ಲುವ ತಪ್ಪನ್ನು ಮಾಡುವದುಂಟು. ಆದರೆ ಅನ್ನಬಾಗಿಸಿ ಪಡೆದ ತಿಳಿಯನ್ನು ಮಸಾಲೆ ಸೇರಿಸಿ ತಂಬುಳಿ ತಯಾರಿಸ ಬಲ್ಲ ಜಾಣೆಯರೂ ನಮ್ಮಲ್ಲಿದ್ದಾರೆ.ಆದರೆ ಅದು ಜಾರಿಯಲ್ಲಿರುವದು ಅತ್ಯಲ್ಪ.ಇತ್ತೀಚೆಗಂತೂ ಈ ಅಡುಗೆ
ಇಲ್ಲವಾಗಿ ಬಿಟ್ಟಿದೆ.

           ಕಟ್ಟಿನ ಸಾರು-ಬೇಳೆ ಕಟ್ಟಿಗೆ ವಗ್ಗರಣೆ ಕೊಟ್ಟು ಕಟ್ಟಿನ ಸಾರು ಮಾಡುತ್ತಾರಷ್ಟೆ.  ಬಸ್ಸಾರು  ಕೂಡ ಕಟ್ಟಿನ ಸಾರು .ಆದರೆ ಇದು  ಬೇಳೆಯ ಜೊತೆಗೆ ತರಕಾರಿ ಬೇಯಿಸಿ  ಬಾಗಿಸಿಕೊಂಡ ನೀರಿನ ಸಾರು . ಸರಿಯಾ?

           ಬಸ್ಸಾರು.[ನಾ]- ಬಸಿದ ಸಾರು]- ದ ಕ್ಷಿ ಣ  ಕನರ್ಾಟಕದ  ಬಸ್ಸಾರು ಇದು ಸಾರದ ಸಾರು. ರಾಗಿ ಮುದ್ದೆ ಜೊತೆಗೆ ಬಸ್ಸಾರು ಇರಬೇಕು ಎಂಬುದುಇಲ್ಲಿಯ ಊಟ ಪ್ರಿಯರ ಮಾತು. ಸಾಮಾನ್ಯವಾಗಿ  ಹೊಲ ಗದ್ದೆಗಳಲ್ಲಿ ತ ಂತಾನೆ ಭೂಮಿಯ ಆರೈಕೆಯಲ್ಲಿ ಬೆಳೆದ ಸೊಪ್ಪು ತರಕಾರಿಗಳನ್ನು  ಬಸ್ಸಾರಿಗಾಗಿ ಬಳಸುತ್ತಾರೆ. ಹೊನಗೊನೆ  ಗಣಿಕೆ  ಕಿರಕಸಾಲೆ, ಇತ್ಯಾದಿ ಕಳೆ  ಸೊಪ್ಪುಗಳು ಈ ಅಡುಗೆಯಲ್ಲಿ ಬಳಕೆಯಾಗುತ್ತವೆ.ಹಲವಾರು ಬಗೆಯ ಹೊನಗೊನೆಗಳು  ಬೆಂಗಳೂರಿನ ಹಳ್ಳಿಗಳಲ್ಲಿ  ಯಲ್ಲದೆ ಈ ಮೆಗಾ ಸಿಟಿಯ ಹಾದಿ ಬೀದಿ. ಮನುಷ್ಯ ಪಾಳು ಬೀಳಿಸಿದ ಭೂ ಮಿಯಲ್ಲಿ  ಕೂಡ ಸೊಂಪಾಗಿ ಬೆಳೆಯುತ್ತವೆ.

            ಈದಿನಗಳಲ್ಲಿ ್ಲ ಕನರ್ಾಟಕ ಜಾನಪದ ಅಕಾಡೆಮಿಯ ಕನರ್ಾಟಕ ಜಾನಪದ ನಿಘಂಟುರಚನಾ ಲೋಕದಲ್ಲಿ ನಾನು ವಿಹರಿಸುತ್ತಿದ್ದೆ. ಈಗ ಕಿವಿಗೆ ಬಿದ್ದ ಪ್ರತಿ ಯೊಂದು ಶಬ್ದವೂ  ಮುತ್ತಾಗಿ ನನಗೆ ಹೊಳೆಯುತ್ತಿತ್ತು. ಆದ್ದರಿಂದ ಮುದ್ದೆಯನ್ನೂ ಬಿಡದೆ ನನ್ನ ಒಡಲಿಗೆ ಅಲ್ಲ- ನನ್ನ ಈ  ಹಾಳೆಗೆ ತುಂಬಿಕೊಂಡೆ.

              ಮುದ್ದೆ- ರಾಗಿಯ ಹಿ ಟ್ಟನ್ನು ಬೇಯಿಸಿ ತಯಾರಿಸುವ ರಾಗಿ ನಾಡಿನ ಒಂದು ಅಡುಗೆ  .  ಬೆಂಗ ಳೂರಿನ ಹೊಟೆಲ್ನಲ್ಲಿ  ರಾಗಿಮುದ್ದೆ ಮಾರ್ತಾರೆ. ಕರಾವಳಿಯ ಹೊಟೆಲ್ ಗಳ ಊಟದ ತಾಟಿನಲ್ಲಿ ಅನ್ನ ಮಾರುವ ಹಾಗೆ.  ಮುದ್ದೆಗೆ   ಬಸ್ಸಾರು  ತುಂಬಾ ಜೋಡಿ.ಯಂತೆ  ಡಾ ರಾಮಚಂದ್ರೇ ಗೌಡರು ಈರುಚಿಯನ್ನು ಬಾಯಲ್ಲಿ ನೀರೂರುವಂತೆ ವಣರ್ಿಸಿ ಬರೆದ  ಅವ್ರದೊಂದುಲೇಖನದ ನೆನಪಾಯಿತು. ಅಲ್ಲಿ ಬಾಡಿನ ಬಸ್ಸಾರುನ  ವಿವರವಿದ್ದ ನೆನಪು. ನಮ್ಮಲ್ಲಿಯೂ ಮುದ್ದೆಗಳಿವೆ. ಆದರೆ ಇವು  ನಿಮ್ಮಲ್ಲಿಯಂತಹ ರಾಗಿ ಮುದ್ದೆಗಳಲ್ಲ ಅಕ್ಕಿ ಮುದ್ದೆಗಳು. ಅಕ್ಕಿಯನ್ನು ನೆನೆಯಿಸಿ ಅರೆದ{ರುಬ್ಬಿದ]ಹಸಿ ಹಿಟ್ಟಿನಿಂದ ಅಥವಾ ಗಿರಣಿಯಲ್ಲಿ ಬೀಸಿ ತಂದ ಒಣ ಹಿಟ್ಟಿ ನಿಂದ ಅಡುತ್ತಾರೆ. ಚಟ್ನಿ ಜೊತೆ ತಿನ್ನುತ್ತಾರೆ. ನಮ್ಮಲ್ಲಿಯ  ಮೀನಪಳ್ದೆ  ನಿಮ್ಮಲ್ಲಿಯ ಬಸ್ಸಾರು ಜೊತೆಯೂ  ಈಮುದ್ದೆಗಳನ್ನು ಮೆಲ್ಲಬಹುದು.

               ಮುದ್ದೆಯಂತಹ ಇನ್ನೊಂದು ಅಡುಗೆ ಮೋದಕ. ತುಸು ಮೇಲಂತಸ್ತಿನದು. ಮನುಷ್ಯ ಪ್ರಿಯ ಮುದ್ದೆಗೂ, ಚವತಿಗಣೇಶ ಪ್ರಿಯ ಮೋದಕಕ್ಕೂ, . ಹೆಸರಿನ ವ್ಯತ್ಯಾಸ ಬಿಟ್ಟರೆ ಅಡುವಲ್ಲಿ ಮತ್ತು ರುಚಿಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಹೆಸರಿನ ವ್ಯತ್ಯಾಸ ಗಮನಿಸಬೇಕು ಇದು ಕನ್ನಡದ ಮುದ್ದೆ ಅದು ಸಂಸ್ಕೃತದ ಮೋದಕ . ಇವುಗಳನ್ನು ಮೊದಲು ಅಟ್ಟವರು ಯಾರು? ಮುದ್ದೆ ಮೊದಲೋ ಮೋದಕ ಮೊದಲೋ? ತಲೆ ಕೆರೆದುಕೊಳ್ಳಬೇಕಿಲ್ಲ. ಕನ್ನಡದ ಮುದ್ದೆಯೇ ಮೊದಲು. ನೀವೇನಂತೀರಿ?

            ಮಸ್ಸೊಪ್ಪು- ಮಸೆದ ಸೊಪ್ಪು- ಇದು ಸೊಪ್ಪನ್ನು ಮಸೆದು ಮಾಡಿದ ಸಾರು-  ಆದರೂ ಇದು ಮಸ್ಸಾರೂ ಅಲ್ಲ; ಸೊಪ್ಪೂ ಅಲ್ಲ ಮಸೆದು ಅಟ್ಟ ಸೊಪ್ಪು ಇದು.  ಇದು ಮಸೆದ ಸೊಪ್ಪಿನ ಸಾರು. ಇದನ್ನು ಮಸ್ಸಾರು ಎಂದಿದ್ದರೆ ಚೆನ್ನಾಗಿತ್ತು. ನನ್ನ ತಲೆಗೆ ಮಸ್ಸೊಪ್ಪು ತಂದಿಟ್ಟ ಗೊಂದಲವಾದರೂ ತಪ್ಪುತ್ತಿತ್ತಲ್ಲವೇ? ಎಂದುಕೊಂಡೆ . ಮಸ್ಸೊಪ್ಪನ್ನು ಮಸ್ಸಾರು ಮಾಡಲು ನನಗೆ ಅಧಿಕಾರವಿಲ್ಲ . ಶಬ್ದ ಬ್ರಹ್ಮರು ಅವರು - ನಮ್ಮಪರಂಪರೆಯ ತೇರನ್ನು ನಮ್ಮ ತನಕ ಎಳೆದು ತಂದವರು-ನಮ್ಮ ಜಾನಪದರು. ನಿಘಂಟುಕಾರ ಶಬ್ದ ಕತರ್ಾರನಲ್ಲ; ಕೇವಲಸಂಗ್ರಾಹಕ . ಎಂದು ಅನುಭವಿಗಳು ಬರೆದ ವಾಕ್ಯ ನೆನಪಾಯಿತು. ನಾನು ಮಸ್ಸೊಪ್ಪನ್ನೆ ಒಪ್ಪಿಕೊಂಡೆ. ಮಸ್ಸೊಪ್ಪಿಗೆ ಚಕ್ಕೋತ ಪಾಲಕ ಮುಂತಾದ ಸೊಪ್ಪುಗಳು ರುಚಿ ಕೊಡುತ್ತವೆಯಂತೆ .ಬೇಯಿಸಿದ ಈ ಸೊಪ್ಪು ತರಕಾರಿಯನ್ನು ಮಸೆಯುವ ಕೋಲಿನಿಂದ ಅರೆದು  ಈ ಮೊದಲೇ ಬಸಿದು ಕೊಂಡ ನೀರಿಗೆ ಹಾಕಿ ಮತ್ತೆ ಕುದಿಸಿ ವಗ್ಗರಣೆ ಮಾಡಿ ಉಪ್ಪು ಸೇರಿಸುತ್ತಾರಂತೆ . ಇದೇ ಮಸ್ಸೊಪ್ಪು ಎಂಬ ಅಡುಗೆ. ಬಸ್ಸುಪ್ಪಿನಲ್ಲಿರುವಂತೆ ದ್ವೈತವಿಲ್ಲ ;  ಅದ್ವೈ ತ.ಅಂದರೆ ಇಲ್ಲಿ ಸಾರು ಮಾತ್ರ ಇದೆ. ಪಲ್ಯವಿಲ್ಲ.

          ಇಲ್ಲಿ ದೊರೆತ ಇನ್ನೊಂದು ಶಬ್ದ ಮಸೆ ಕೋಲು . ಬೆಟ್ಟದಲ್ಲಿ ಕಡತ ಮಾಡುವವರಿಗೆ ಕಟುಕರಿಗೆ ಕತ್ತಿ ಮಸೆಯುವ ಕಲ್ಲು ಗೊತ್ತು .  ನನಗೆ ಮಸೆಕೋಲು  ಇದುವರೆಗೆ ಗೊತ್ತಿರಲಿಲ್ಲ . ಬಸ್ಸಿನಿಂದಲೇ  ಮಾತಾಡಿದೆ. ಮಸೆಕೋಲು ಎಂಬ ಅಡುಗೆ ಸಾಹಿತ್ಯವೊಂದಿದೆಯಂತೆ ಅದನ್ನು ಕೊಂಡಕೊ. ಎಂದೆ,ಅಮ್ಮಾ ಅದು ನನ್ನ ಬಳಿ ಇದೆ ಚಿತ್ರ ಕಳಿಸುತ್ತೇನೆ. ಎಂದಳು. ಸವಿತಾ.


No comments:

Post a Comment