Monday, 4 June 2012

ಸೂಡ್ಲ - Head dress


ಸೂಡ್ಲ 




 ಇದು ಸೂಡು ಅಂದರೆ ಮುಡಿ ,ತಲೆಗೇರಿಸು ಎಂಬ ಶಬ್ದದಿಂದ ಸಾಧಿತವಾದ ಶಬ್ದ. ಸೂಡ್ಲವು ತಲೆಯ   ವಿಶಿಷ್ಟವಾದ ಒಂದು ಉಡುಪನ್ನು ಸೂಚಿಸುತ್ತದೆ ಇದನ್ನು.ಕರಾವಳಿಯ  ಮತ್ತು ಮಲೆನಾಡಿನ ರೈತ ರು ತಾವು ವಿವಿಧ ಉದ್ದೇಶಗಳಿಗಾಗಿ ಬಳಸುವ, ಕಂಬಳಿಯಿಂದನಿಗದಿತಸಮಯದ ಉಪಯೋಗಕ್ಕಾಗಿತಾತ್ಪೂರ್ತಿಕವಾಗಿ  ತಯಾರಿಸಿಕೊಳ್ಳುತ್ತಾರೆ. ತಲೆಯ ಮೇಲೆ ಹೊರೆ  ಹೊರುವಾಗ  ಕಂಬಳಿಯನ್ನು ಸೂಡ್ಲವಾಗಿ  ಮಾರ್ಪಡಿಸಿಕೊಂಡುಬಳಸುತ್ತಾರೆ. ಮಳೆಗಾಲದಲ್ಲಿ  ಇದರ ಉಪಯೋಗ ಹೆಚ್ಚು.  

  
ಸೂಡ್ಲ ತಯಾರಿಕೆ .-ಕಂಬಳಿಯನ್ನುಅದರ ಉದ್ದದ ದಿಕ್ಕಿನಲ್ಲಿ ನಡುವೆ ಮಡಚಿ ಕೊಳ್ಳಬೇಕು. ಬಳಿಕ ಅದರ ಎಡಬಲ ಮೂಲೆಗಳು ಒಂದೆಡೆ  ಕೂಡುವಂತೆ  ಮತ್ತೆ ಅಡ್ಡದಲ್ಲಿ ಮಡಚಬೇಕು.  ಇದನ್ನು ನೆಲಕ್ಕೆ ಹಾಸಿ ಎಡಮೂಲೆ ಸುಮಾರು ಒಂದು ಅಡಿ ಬಲ ಮೂಲೆ  ಒಂದು ಅಡಿಗಿಂತ ಆರೆಂಟು ಅಂಗುಲ ಹೆಚ್ಚಿರುವಂತೆ ತ್ರಿಕೋನವಾಗಿ ಮಡಚಿ   ಎಡ ಭಾಗದ ಮೇಲೆ ಬಲಭಾಗವನ್ನಿಟ್ಟು  ಬಲ ಮಡಿಕೆಯಲ್ಲಿರುವ ಹೆಚ್ಚಿನ ಭಾಗವನ್ನು  ಎಡ ಭಾಗದ ಮಡಿಕೆಯ ಕೆಳಗೆ ತೂರಿಸಬೇಕು. ಈಗ ಸೂಡ್ಲವು ಸಿದ್ಧವಾಗುತ್ತದೆ. ಕೆಲಸ ಮಾಡಿದಾಗ ಇದರ ರಚನೆ ಬಿಡಿಸಿಕೊಳ್ಳದಂತೆ ಹಾಳೆಗೆ ಗುಂಡುಸೂಜಿಯನ್ನು ಚುಚ್ಚುವಂತೆ  ಉದ್ದ ಕಡ್ಡಿಯನ್ನು ಸೆಡಬೇಕು. ಮಳೆಗಾಲದಲ್ಲಿ ಕಂಬಳಿಯ ಸೂಡ್ಲ ಸೂಡಿ ಕೊಂಡು ಗದ್ದೆ ಹೂಡುವವರನ್ನು ನೆಟ್ಟಿ ಮಾ ಡುವವರನ್ನು ಗದ್ದೆಗಳಲ್ಲಿ ಕಾಣಬಹುದು.  ಇವರಲ್ಲಿ ಗಂಡಸರ ಸಂಖ್ಯೆ ಹೆಚ್ಚು. ಬಡವರು ಹೆಂಗಸರು ಗೋಣಿ ಚೀಲಗಳನ್ನು ಸೂಡ್ಲಮಾಡಿ ಬಳಸುತ್ತಾರೆ. ಹೊಲಿದ ಚೀಲಗಳ ಸೂಡ್ಲ ಮಾಡುವದು ಸುಲಭ .  ಚೀಲದ ಬಾಯಿಯ ಬದಿಯ ಒಂದು ಮೂಲೆಯ ನ್ನುಒಳಗಿನಿಂದ ದೂಡಿ ಇನ್ನೊಂದು ಮೂಲೆಯ ತನಕ ಮುಟ್ಟಿಸಿದಾಗ  ಸೂಡ್ಲ ಸಿದ್ಧವಾಗುತ್ತದೆ.ಇತ್ತೀಚೆಗೆ ಬಣ್ಣಬಣ್ಣದ ಪ್ಲಾಸ್ಟಿಕ್ ಸೂಡ್ಲಗಳು ಗದ್ದೆ ಬಯಲನ್ನು 
ಇಳಿದಿವೆ. ಮೂಲ;- ಪ್ರಸಾಧನ ಕಲೆ -ಡಾ ಸವಿತಾ ನಾಯಕ   ಕಳಿಸಿದವರು ಶಾಂತಿನಾಯಕ.

No comments:

Post a Comment